ಇಂದು ಈ ರಾಶಿಯ ಪ್ರೇಮಿಗಳಿಗೆ ಶುಭದಿನ: ನಿತ್ಯಭವಿಷ್ಯ

Nithya Bhavishya
Published on

ಮೇಷ: ಅನಾವಶ್ಯಕ ಖರ್ಚು, ಕುಟುಂಬದೊಂದಿಗೆ ಸಂತಸದ ಕ್ಷಣ, ವ್ಯಾಪಾರದಲ್ಲಿ ಅಧಿಕ ಲಾಭ, ವ್ಯವಹಾರಗಳಿಂದ ಅನುಕೂಲ. ಶುಭಸಂಖ್ಯೆ 2

ವೃಷಭ: ಖಾಸಗಿ ಕ್ಷೇತ್ರದಲ್ಲಿ ಅಧಿಕ ಕೆಲಸದ ಒತ್ತಡ, ಆಸ್ತಿ ವಿಚಾರ ದಲ್ಲಿ ವಾಗ್ವಾದ, ಸಂತಾನ ಅಪೇಕ್ಷಿತರಿಗೆ ಸಿಹಿಸುದ್ದಿ, ಸಾಹಿತಿ- ಬರಹಗಾರರಿಗೆ ವಿಶೇಷ ದಿನ. ಶುಭಸಂಖ್ಯೆ 8

ಮಿಥುನ: ಸಾಲದಿಂದ ಇಂದು ನಿಮಗೆ ಮುಕ್ತಿ ಸಿಗಲಿದೆ, ಕಟ್ಟಡ ಸಾಮಗ್ರಿಗಳ ವ್ಯವಹಾರದಲ್ಲಿ ಅಧಿಕ ಧನಲಾಭ, ಮಹಿಳೆಯರಿಗೆ ವಿಶೇಷ ಲಾಭ. ಶುಭಸಂಖ್ಯೆ 9

ಕಟಕ: ಹೊಸ ನಿವೇಶನ ಖರೀದಿಗೆ ನಿರ್ಧಾರ, ಸರ್ಕಾರಿ ಕ್ಷೇತ್ರದಲ್ಲಿ ಹಿತ ಶತ್ರುಗಳ ಕಾಟ, ಅನಾರೋಗ್ಯ ಸಂಭವ, ದುರ್ಗೆಯನ್ನು ಆರಾಧಿಸಿ. ಶುಭ ಸಂಖ್ಯೆ 7

ಸಿಂಹ: ಅನಿರೀಕ್ಷಿತ ಅನಾರೋಗ್ಯ ಸಂಭವ, ಸಂಗಾತಿಯೊಂದಿಗೆ ವಿರಸ, ಸಾರ್ವಜನಿಕ ರಂಗದಲ್ಲಿ ಸಹನೆಯಿಂದ ವರ್ತಿಸಿ. ಶುಭ ಸಂಖ್ಯೆ 6

ಕನ್ಯಾ: ಬಂಧುಗಳ ಅನಿರೀಕ್ಷಿತ ಆಗಮನ, ಕಚೇರಿಯಲ್ಲಿ ಅನಾವಶ್ಯಕ ಕಿರಿಕಿರಿ. ಹೂಡಿಕೆಯಿಂದ ಅನಿರೀಕ್ಷಿತ ಧನಲಾಭ. ಶುಭ ಸಂಖ್ಯೆ 6

ತುಲಾ: ಮಕ್ಕಳಿಂದ ನೋವು ಅನುಭವಿಸುವಿರಿ, ದಾಂಪತ್ಯ ಜೀವನದಲ್ಲಿ ವಿರಸ, ಆತ್ಮೀಯ ಸ್ನೇಹಿತನ ಭೇಟಿ, ದಿನಾಂತ್ಯದಲ್ಲಿ ಆಯಾಸ. ಶುಭ ಸಂಖ್ಯೆ 3

ವೃಶ್ಚಿಕ: ಋಣಸಂದಾಯ ಮಾಡುವಿರಿ, ಹಿರಿಯ ಅಧಿಕಾರಿಗಳಿಂದ ವಿಶೇಷ ಜವಾಬ್ದಾರಿ, ಸಾಹಿತಿ- ಬರಹಗಾರರಿಗೆ ವಿಶೇಷ ದಿನ. ಶುಭ ಸಂಖ್ಯೆ 5

ಧನುಸ್ಸು: ಹಣಕಾಸಿನ ಮುಗ್ಗಟ್ಟು ಸ್ಥಿರಾಸ್ತಿ ಮತ್ತು ಕೃಷಿಭೂಮಿಯ ಮೇಲೆ ಸಾಲ, ಉದ್ಯೋಗ ಸ್ಥಳದಲ್ಲಿ ಸಹೋದ್ಯೋಗಿಗಳಿಂದ ಕಿರಿಕಿರಿ. ಶುಭ ಸಂಖ್ಯೆ 6

ಮಕರ: ಹೊಸ ಪಾಲುದಾರರ ಸೇರ್ಪಡೆ, ದಿನಸಿ ವ್ಯಾಪಾರಿ ಗಳಿಗೆ ನಷ್ಟ, ಆಸ್ತಿ ವಿಚಾರವಾಗಿ ಕುಟುಂಬದಲ್ಲಿ ವಾಗ್ವಾದ, ಆತ್ಮೀಯ ಬಂಧುಗಳ ಆಗಮನ. ಶುಭ ಸಂಖ್ಯೆ 8

ಕುಂಭ: ಪ್ರೇಮಿಗಳಿಗೆ ಶುಭದಿನ, ನಿಮ್ಮ ಅಹಂಭಾವದ ಪ್ರವೃತ್ತಿಯಿಂದ ಸಮಸ್ಯೆ ಸೃಷ್ಟಿ, ಆರ್ಥಿಕ ಮುಗ್ಗಟ್ಟು, ಸ್ನೇಹಿತರಿಂದ ಸಲಹೆ. ಶುಭ ಸಂಖ್ಯೆ 8

ಮೀನ: ಮಕ್ಕಳ ವಿದ್ಯಾಭ್ಯಾಸದ ಕನಸು ನನಸು. ನಿಮ್ಮ ಅಹಂಕಾರದಿಂದ ಕಚೇರಿಯಲ್ಲಿ ಸಮಸ್ಯೆ, ಅನಾವಶ್ಯಕ ವಾಗಿ ಮಾತನಾಡಬೇಡಿ, ಅಧಿಕ ಖರ್ಚು. ಶುಭ ಸಂಖ್ಯೆ 9

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net