ವಿಮಾನ ನಿಲ್ದಾಣಕ್ಕೆಬಂಗಾರಪ್ಪ ಹೆಸರಿಡಲು ಈಡಿಗ ಸಮಾಜ ಒತ್ತಾಯ

13 smg Sridhar
Published on

ವಿಮಾನ ನಿಲ್ದಾಣಕ್ಕೆಬಂಗಾರಪ್ಪ ಹೆಸರಿಡಲು ಈಡಿಗ ಸಮಾಜ ಒತ್ತಾಯಶಿವಮೊಗ್ಗ ವಿಮಾನ ನಿಲ್ದಾಣಕ್ಕೆ ಮಾಜಿ ಸಿಎಂ ಎಸ್.ಬಂಗಾರಪ್ಪ ಅವರ ನಾಮಕರಣ ಮಾಡಬೇಕು ಎಂದು ಈಡಿಗ ಸಮಾಜ ಹಕ್ಕೋತ್ತಾಯ ಮಾಡಿದೆ. ಶಿವಮೊಗ್ಗ ಜಿಲ್ಲೆಗೆ ಬಂಗಾರಪ್ಪ ಅವರ ಕೊಡುಗೆ ಅಪಾರ. ಅವರು ಕೊಟ್ಟ ಕೊಡುಗೆಗಳನ್ನು ಮಲೆನಾಡಿನ ಜನರು ಮರೆಯುವುದಕ್ಕೆ ಸಾಧ್ಯವೇ ಇಲ್ಲ. ಹಾಗಾಗಿ ಎಸ್.ಬಂಗಾರಪ್ಪ ಅವರ ಹೆಸರು ವಿಮಾನ ನಿಲ್ದಾಣಕ್ಕಿಡುವುದು ಪ್ರಸ್ತುತ ಮತ್ತು ಸೂಕ್ತವಾಗಿದೆ ಎಂದು ಜಿಲ್ಲಾ ಆರ್ಯ ಈಡಿಗ ಸಂಘದ ಅಧ್ಯಕ್ಷ ಆರ್.ಶ್ರೀಧರ್ ಹುಲ್ತಿಕೊಪ್ಪ ಒತ್ತಾಯಿಸಿದರು.

ಮೆಗ್ಗಾನ್ ಆಸ್ಪತ್ರೆಯನ್ನು ಸಾವಿರ ಬೆಡ್‌ಗಳಿಗೆ ಮೇಲ್ದರ್ಜೆಗೇರಿಸಿರುವುದು, ಗಾಜನೂರಿನಿಂದ ಶಿವಮೊಗ್ಗಕ್ಕೆ ಕುಡಿಯುವ ನೀರಿನ ಪೈಪ್‌ಲೈನ್ ಹಾಕಿಸಿರುವುದು, 30 ವರ್ಷಗಳ ಹಿಂದೆಯೇ ನಗರ ಪಾಲಿಕೆ ಕಟ್ಟಡ ನಿರ್ಮಾಣ ಮಾಡಿಸಿರುವುದು, ರೈತರಿಗೆ 10 ಎಚ್‌ಪಿವರೆಗೆ ಉಚಿತ ವಿದ್ಯುತ್ ಯೋಜನೆ ಜಾರಿಗೊಳಿಸಿರುವುದು, ಖಾಸಗಿ ಬಸ್ ನಿಲ್ದಾಣ, ತುಂಗಾ ಏತ ನೀರಾವರಿ, ಯುಟಿಪಿ(ತುಂಗಾ ಮೇಲ್ದಂಡೆ ಯೋಜನೆ), ಕೃಷಿ ಕಾಲೇಜು ಸ್ಥಾಪನೆ, ಆಶ್ರಯ ಯೋಜನೆ, ಆರಾಧಾನೆ ಯೋಜನೆ, ಗ್ರಾಮೀಣ ಮಕ್ಕಳಿಗೆ ಕೃಪಾಂಕ ಸೇರಿದಂತೆ ನೂರಾರು ಕೊಡುಗೆಗಳನ್ನು ಕೊಟ್ಟಿದ್ದಾರೆ ಎಂದು ಸೋಮವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

ಜ್ಞಾನಪೀಠ ಪುರಸ್ಕೃತ ಕುವೆಂಪು ಅವರ ಬಗ್ಗೆ ಅಪಾರ ಗೌರವವಿದೆ. ಈಗಾಗಲೇ ವಿಶ್ವವಿದ್ಯಾಲಯ, ರಂಗಮಂದಿರಕ್ಕೂ ಕುವೆಂಪು ಅವರ ಹೆಸರಿಡಲಾಗಿದೆ. ಮಾಜಿ ಬಿ.ಎಸ್.ಯಡಿಯೂರಪ್ಪ ಅವರ ಬಗ್ಗೆ ಗೌರವವಿದ್ದು ನಮ್ಮ ಹಕ್ಕೊತ್ತಾಯವನ್ನು ಪರಿಗಣಿಸಬೇಕು. ಸದ್ಯ ಅವರು ಕುವೆಂಪು ಹೆಸರಿಡುವುದಾಗಿ ಹೇಳಿದ್ದಾರಷ್ಟೆ, ಅಂತಿಮವಾಗಿಲ್ಲ. ಅಧಿವೇಶನದಲ್ಲಿ ಪ್ರಸ್ತಾಪಿಸಿ ಕೇಂದ್ರಕ್ಕೆ ಶಿಫಾರಸ್ಸು ಮಾಡುವ ಮೂಲಕ ಈಡಿಗ ಸಮುದಾಯಕ್ಕೆ ಗೌರವ ಸಲ್ಲಿಸಬೇಕು ಎಂದು ಮನವಿ ಮಾಡಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net