

ಮುಂಬೈ: ಬಾಲಿವುಡ್ ನಟಿ ಶಿಲ್ಪಾ ಶೆಟ್ಟಿ ಅವರ ಪತಿ, ಉದ್ಯಮಿ ರಾಜ್ ಕುಂದ್ರಾ ಮನೆ ಮತ್ತು ಅವರಿಗೆ ಸಂಬಂಧಿಸಿ ಹಲವರ ಮನೆಗಳ ಮೇಲೆ ಮನಿ ಲಾಂಡರಿಂಗ್ ತನಿಖೆ ಭಾಗವಾಗಿ ಜಾರಿ ನಿರ್ದೇಶನಾಲಯ(ಇಡಿ) ಶುಕ್ರವಾರ (ED Raids) ದಾಳಿ ನಡೆಸಿದರು.
ಮುಂಬೈ ಮತ್ತು ಉತ್ತರ ಪ್ರದೇಶದಲ್ಲಿ 15 ಕಡೆಗಳಲ್ಲಿ ದಾಳಿ ಮಾಡಲಾಗಿದೆ ಎಂದು ವರದಿಗಳು ಉಲ್ಲೇಖಿಸಿವೆ. ಅಧಿಕೃತ ಮೂಲಗಳ ಪ್ರಕಾರ, ಪ್ರಸ್ತುತ ತನಿಖೆಯು ಅಶ್ಲೀಲ(ಪೊರ್ನ್ ಕಂಟೆಂಟ್) ವಿಷಯದ ವಿತರಣೆಗೆ ಸಂಬಂಧಿಸಿದ ಪ್ರಕರಣವಾಗಿದೆ. ಅಂದರೆ, ಮೊಬೈಲ್ ಅಪ್ಲಿಕೇಶನ್‌ಗಳು ಮತ್ತು ಇತರ ಪ್ಲಾಟ್‌ಫಾರ್ಮ್‌ಗಳ ಮೂಲಕ ಅಶ್ಲೀಲ ವಿಷಯವನ್ನು ವಿತರಿಸುವಲ್ಲಿ ಕುಂದ್ರಾ ಸೇರಿದಂತೆ ಇತರ ಶಂಕಿತರ ಕೈವಾಡವಿದೆ. ಈ ಹಿನ್ನೆಲೆಯಲ್ಲಿ ಇವರ ಮೇಲೆ ನಡೆದ ದಾಳಿ ಎನ್ನಲಾಗಿದೆ.
ಉದ್ಯಮಿ ರಾಜ್ ಕುಂದ್ರಾ ಅವರನ್ನು ಜುಲೈ 19, 2021 ರಂದು ಅಶ್ಲೀಲ(ಪೊರ್ನ್ ಕಂಟೆಂಟ್) ವಿಷಯವನ್ನು ಮೊಬೈಲ್ ಅಪ್ಲಿಕೇಶನ್‌ಗಳ ಮೂಲಕ ಪ್ರಕಟಿಸಿದ ಆರೋಪದ ಮೇಲೆ ಬಂಧಿಸಲಾಗಿತ್ತು. ಬಳಿಕ ಅವರನ್ನು ಮೂರು ದಿನಗಳ ಪೊಲೀಸ್ ಕಸ್ಟಡಿಗೆ ಒಪ್ಪಿಸಲಾಗಿತ್ತು. 2022ರಲ್ಲಿ ಅಶ್ಲೀಲ ವಿಷಯದ ಪ್ರಸಾರಕ್ಕೆ ಕುಂದ್ರಾ ವಿರುದ್ಧ ಮನಿ ಲಾಂಡರಿಂಗ್ ಪ್ರಕರಣವನ್ನು ದಾಖಲಿಸಲಾಗಿದೆ. ಈ ಹಿನ್ನೆಲೆ ಅವರ ಮೇಲೆ ಇಡಿ ದಾಳಿಗಳು ನಡೆಯುತ್ತಲೇ ಇವೆ.
ಅಶ್ಲೀಲ ನಿರ್ಮಾಣ ಪ್ರಕರಣಕ್ಕೆ ಸಂಬಂಧಿಸಿದಂತೆ, ತನಿಖಾ ಸಂಸ್ಥೆಯು (ಇಡಿ) ಪೊರ್ನ್ ಕಂಟೆಟ್ ಪ್ರಕರಣದಲ್ಲಿ ಕುಂದ್ರಾ ಅವರ ಕೈವಾಡವನ್ನು ಆರೋಪಿಸಿದೆ. ಭಾರತೀಯ ದಂಡ ಸಂಹಿತೆ, ಮಹಿಳೆಯರ ಅಸಭ್ಯ ಪ್ರಾತಿನಿಧ್ಯ (ತಡೆಗಟ್ಟುವಿಕೆ) ಕಾಯಿದೆ ಮತ್ತು ಮಾಹಿತಿ ತಂತ್ರಜ್ಞಾನ ಕಾಯ್ದೆ ಸೇರಿದಂತೆ ವಿವಿಧ ಕಾನೂನು ನಿಬಂಧನೆಗಳ ಅಡಿಯಲ್ಲಿ ಅವರು ಹಲವಾರು ಆರೋಪಗಳನ್ನು ಎದುರಿಸುತ್ತಿದ್ದಾರೆ, (ಏಜೆನ್ಸೀಸ್).