

ಪಶ್ಚಿಮ ಬಂಗಾಳ: ನಾಗರಿಕ ಸಂಸ್ಥೆಗಳಲ್ಲಿ ನೇಮಕಾತಿಯಲ್ಲಿ ಅಕ್ರಮ ಆರೋಪ ಸಂಬಂಧಿಸಿದಂತೆ ಪಶ್ಚಿಮ ಬಂಗಾಳದ ಅಗ್ನಿಶಾಮಕ ಮತ್ತು ತುರ್ತು ಸೇವೆಗಳ ಸಚಿವ ಜುಜಿತ್ ಬೋಸ್, ಟಿಎಂಸಿ ಶಾಸಕ ತಪಸ್ ರಾಯ್ ಮತ್ತು ಉತ್ತರ ದಮ್ದಮ್ ಪುರಸಭೆಯ ಮಾಜಿ ಅಧ್ಯಕ್ಷ ಸುಬೋಧ ಚಕ್ರವರ್ತಿ ಅವರ ನಿವಾಸಗಳ ಮೇಲೆ ಶುಕ್ರವಾರ ಬೆಳಗ್ಗೆ ಜಾರಿ ನಿರ್ದೆಶನಾಲಯದ ತಂಡ ದಾಳಿ ನಡೆಸಿದೆ.
ಏಪ್ರಿಲ್ 2023ರಲ್ಲಿ ಪುರಸಭೆಗಳ ನೇಮಕಾತಿಯಲ್ಲಿನ ಅಕ್ರಮಗಳ ಬಗ್ಗೆ ತನಿಖೆ ನಡೆಸುವಂತೆ ಕಲ್ಕತ್ತಾ ಹೈಕೋರ್ಟ್ ಸಿಬಿಐಗೆ ಆದೇಶ ಮಾಡಿತ್ತು. ಈ ಪ್ರಕರಣಕ್ಕೆ ಸಂಬಂಧಿಸಿ ಜೂ.7ರಂದು ಸಿಬಿಐ 16 ಸ್ಥಳಗಳ ಮೇಲೆ ದಾಳಿ ನಡೆಸಿತು. ಮತ್ತು ನಾಡಿಯಾ, ಹೂಗ್ಲಿ, ಮತ್ತು ಉತ್ತರ 24 ಹಗರಣ ಜಿಲ್ಲೆಗಳಲ್ಲಿ ಮತ್ತು ಸಾಲ್ಟ್ ಲೇಕ್ ಪುರಸಭೆಯ ಬಹು ನಾಗರಿಕ ಸಂಸ್ಥೆಗಳಿಂದ ದಾಖಲೆಗಳನ್ನು ವಶಪಡಸಿಕೊಂಡಿದೆ.
ಆ ಬಳಿಕ ಆಗಸ್ಟ್ 2023ರಲ್ಲಿ ಪ್ರಕರಣದ ಸಿಬಿಐ ತನಿಖೆಯನ್ನು ಪ್ರಶ್ನಿಸಿ ಪಶ್ಚಿಮ ಬಂಗಾಳದ ಸರ್ಕಾರದ ಅರ್ಜಿಯನ್ನು ಸುಪ್ರೀಂ ಕೋರ್ಟ್ ವಜಾಗೊಳಿಸಿತ್ತು. ಅ.5 ರಂದು ನೇಮಕಾತಿ ಪ್ರಕರಣಕ್ಕೆ ಸಂಬಂಧಿಸಿದಂತೆ ಜಾರಿ ನಿರ್ದೇಶನಾಲಯವು ಆಹಾರ ಮತ್ತು ಸರಬರಾಜು ಸಚಿವ ರಥಿನ್ ಘೋಷ್ ಅವರ ನಿವಾಸ ಸೇರಿದಂತೆ ಹಲವು ಸ್ಥಳಗಳ ಮೇಲೆ ದಾಳಿ ನಡೆಸಿ ಶೋಧ ಕಾರ್ಯ ನಡೆಸಿತ್ತು.
ಇತ್ತೀಚೆಗೆ ಪಶ್ಚಿಮ ಬಂಗಾಳದ ಆಡಳಿತಾರೂಢ ತೃಣಮೂಲ ಕಾಂಗ್ರೆಸ್ ಮುಖಂಡನ ಮನೆಗೆ ಹಗರಣವೊಂದಕ್ಕೆ ಸಸಂಬಂಧಿಸಿದಂತೆ ಶೋಧ ನಡೆಸಲು ಬಂದ ಇಡಿ ಅಧಿಕಾರಿಗಳ ಮೇಲೆ ಹಲ್ಲೆ ನಡೆದಿದ್ದು ಮೂವರು ಅಧಿಕಾರಿಗಳು ಗಂಭೀರವಾಗಿ ಗಾಯಗೊಂಡಿದ್ದಾರೆ ಎಂದು ಆರೋಪ ಮಾಡಿದ್ದರು.