ರಿಯಾ ಆದಾಯಕ್ಕೂ ಆಸ್ತಿಗೂ ತಾಳೆಯಾಗುತ್ತಿಲ್ಲ...! ದುಡ್ಡಿನ ಮೂಲ ಹುಡುಕುತ್ತಿದೆ ಜಾರಿ ನಿರ್ದೇಶನಾಲಯ

sushant
Published on

ಮುಂಬೈ: ಬಾಲಿವುಡ್​ ನಟ ಸುಶಾಂತ್​ ಸಿಂಗ್ ರಜಪೂತ್​ ಗೆಳತಿ ರಿಯಾ ಚಕ್ರವರ್ತಿ ಎರಡನೇ ಬಾರಿಗೆ ಜಾರಿ ನಿರ್ದೇಶನಾಲಯದ ಅಧಿಕಾರಿಗಳ ಎದುರು ವಿಚಾರಣೆಗೆ ಹಾಜರಾದರು. ರಿಯಾಳ ಆಸ್ತಿ ಖರೀದಿಗೂ ಹಾಗೂ ಆದಾಯಕ್ಕೂ ತಾಳೆಯಾಗದ ಹಿನ್ನಲೆಯಲ್ಲಿ ಅಧಿಕಾರಿಗಳು ವಿಚಾರಣೆಯನ್ನು ಇನ್ನಷ್ಟು ತೀವ್ರಗೊಳಿಸಿದ್ದಾರೆ.

ರಿಯಾ 2017-18 ಹಾಗೂ 2018-19 ಸಾಲಿನಲ್ಲಿ ಸಲ್ಲಿಸಿದ ಆದಾಯ ಘೋಷಣಾ ಪತ್ರದ ವಿವರಗಳು ಬಹಿರಂಗಗೊಂಡಿವೆ. ಐಟಿ ರಿಟರ್ನ್ಸ್​ ಪ್ರಕಾರ 2017-18ರಲ್ಲಿ ತನ್ನ ಆದಾಯ 18.75 ಲಕ್ಷ ರೂ. ಎಂದು ರಿಯಾ ಘೋಷಿಸಿಕೊಂಡಿದ್ದಾರೆ. ಇನ್ನು 2018019ರ ಸಾಲಿಗೆ 18.23 ಲಕ್ಷ ಆದಾಯ ಗಳಿಸಿರುವುದಾಗಿ ಪ್ರಮಾಣ ಪತ್ರ ಸಲ್ಲಿಸಿದ್ದಾರೆ.

ಸದ್ಯ, ಮುಂಬೈ ಖಾರ್​ (ಪೂರ್ವ) ಪ್ರದೇಶದಲ್ಲಿ ಎರಡು ಐಷಾರಾಮಿ ಫ್ಲ್ಯಾಟ್​ಗಳು ರಿಯಾ ಹಾಗೂ ಆಕೆಯ ಕುಟುಂಬದವರ ಹೆಸರಿನಲ್ಲಿವೆ. ಇದರ ಖರೀದಿಗೆ ಹಣ ಬಂದಿದ್ದೇಗೆ ಎಂಬ ಆಯಾಮದಲ್ಲಿ ಇಡಿ ಅಧಿಕಾರಿಗಳು ತನಿಖೆ ನಡೆಸಿದ್ದಾರೆ.

ತನ್ನ ಹೆಸರಿನಲ್ಲಿರುವ ಒಂದು ಫ್ಲ್ಯಾಟ್​ ಖರೀದಿಗೆ 60 ಲಕ್ಷ ರೂ.ಗಳಷ್ಟು ಸಾಲ ಪಡೆದಿದ್ದರೆ, ಇನ್ನುಳಿದ 25 ಲಕ್ಷ ರೂ.ಗಳನ್ನು ತನ್ನ ಉಳಿತಾಯದಿಂದ ಬಳಸಿದ್ದಾಗಿ ರಿಯಾ ಅಧಿಕಾರಿಗಳಿಗೆ ಮಾಹಿತಿ ನೀಡಿದ್ದಾರೆ.

ಇದನ್ನೂ ಓದಿ; ನೂರು ದಿನಗಳಿಂದ ಒಂದೂ ಕರೊನಾ ಕೇಸಿಲ್ಲ; ಜಗತ್ತೇ ನಿಬ್ಬೆರಗಾಗಿದೆ ಈ ಸಾಧನೆಗೆ…!

ಐಟಿ ರಿಟರ್ನ್ಸ್​ನಲ್ಲಿ ಸಲ್ಲಿಸಿದ ಆದಾಯಕ್ಕೆ ಹೋಲಿಸಿದಲ್ಲಿ ವಿವಿಧ ಹೂಡಿಕೆಗಳ ಮೊತ್ತ ಅಧಿಕವಾಗಿದೆ ಎಂದು ಗೊತ್ತಾಗಿದೆ. ಈ ಕಾರಣಕ್ಕೆ ಇನ್ನಷ್ಟು ಉತ್ತರಗಳನ್ನು ಇಡಿ ಅಧಿಕಾರಿಗಳು ಬಯಸಿದ್ದಾರೆಂದು ಹೇಳಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net