

ರಾಮನಗರ/ಕನಕಪುರ: ಮಾಜಿ ಸಚಿವ ಡಿ.ಕೆ.ಶಿವಕುಮಾರ್ ತಾಯಿ ಗೌರಮ್ಮ ಅವರನ್ನು ಜಾರಿ ನಿರ್ದೇಶನಾಲಯ (ಇಡಿ) ಅಧಿಕಾರಿಗಳು ಕನಕಪುರ ತಾಲೂಕಿನ ಕೋಡಿಹಳ್ಳಿಯಲ್ಲಿರುವ ಸಂಸದ ಡಿ.ಕೆ.ಸುರೇಶ್ ನಿವಾಸದಲ್ಲಿ ಮಂಗಳವಾರ ವಿಚಾರಣೆ ನಡೆಸಿದರು.
ಅಕ್ರಮ ಹಣ ವರ್ಗಾವಣೆ ಸಂಬಂಧಿಸಿದಂತೆ ಶಿವಕುಮಾರ್ ಮೇಲೆ ಜಾರಿ ನಿರ್ದೇಶನಾಲಯದ ಅಧಿಕಾರಿಗಳು ಪ್ರಕರಣ ದಾಖಲಿಸಿದ್ದು, ಈಗಾಗಲೇ ಹಲವು ಬೆಂಬಲಿಗರು ಮತ್ತು ಪುತ್ರಿ ಐಶ್ವರ್ಯ ಅವರನ್ನು ವಿಚಾರಣೆಗೆ ಒಳಪಡಿಸಿದ್ದರು. ಗೌರಮ್ಮರಿಗೂ ವಿಚಾರಣೆಗೆ ಹಾಜರಾಗುವಂತೆ ನೋಟಿಸ್ ನೀಡಲಾಗಿತ್ತು. ಆದರೆ, ಅವರು ಹೈಕೋರ್ಟ್ ಮೊರೆ ಹೋಗಿ ಸ್ವಗೃಹದಲ್ಲಿಯೇ ವಿಚಾರಣೆ ಮಾಡಬೇಕೆಂದು ಕೋರಿದ್ದರು. ಈ ಹಿನ್ನೆಲೆಯಲ್ಲಿ 2019ರ ಡಿ.18ರಂದು ಗೌರಮ್ಮ ನಿವಾಸದಲ್ಲಿಯೇ ವಿಚಾರಣೆ ಮಾಡಬೇಕು, ವಿಚಾರಣೆ ಧ್ವನಿ ಮುದ್ರಿಸಿಕೊಳ್ಳಬೇಕು ಹಾಗೂ ವಿಚಾರಣೆ ವೇಳೆ ಸ್ಥಳೀಯ ಪೊಲೀಸರ ಭದ್ರತೆ ಒದಗಿಸಬೇಕು ಎಂದು ಹೈಕೋರ್ಟ್ ಆದೇಶಿಸಿತ್ತು. ಆದೇಶದಂತೆ ಎರಡು ಕಾರುಗಳಲ್ಲಿ ಮಧ್ಯಾಹ್ನ 1 ಗಂಟೆ ಸುಮಾರಿಗೆ ಬಂದ ಐವರು ಅಧಿಕಾರಿಗಳು ಸತತ 6 ಗಂಟೆಗೂ ಹೆಚ್ಚು ಕಾಲ ವಿಚಾರಣೆ ನಡೆಸಿ, ರಾತ್ರಿ 8.50 ಗಂಟೆಗೆ ತೆರಳಿದರು.
ಆರೋಪವೇನು?: ಡಿ.ಕೆ.ಶಿವಕುಮಾರ್ ಕೋಟ್ಯಂತರ ರೂ. ಬೇನಾಮಿ ಆಸ್ತಿ ಹೊಂದಿದ್ದಾರೆ ಹಾಗೂ ಆರ್ಥಿಕ ಅಪರಾಧ ಎಸಗಿದ್ದಾರೆ ಎಂದು ಇ.ಡಿ. ಆರೋಪಿಸಿದೆ. ಇದರ ನಡುವೆ 2001ರಲ್ಲಿ ಉತ್ತರಹಳ್ಳಿಯಲ್ಲಿ 3 ಎಕರೆ ಮತ್ತು 2002 ಬೆಂಗಳೂರಿನ ಹೊಸಕೆರೆಹಳ್ಳಿಯ 3 ಎಕರೆ ಜಮೀನನ್ನು ಖರೀದಿಸಿದ್ದ ಗೌರಮ್ಮ, ನಂತರ ಈ ಜಮೀನುಗಳನ್ನು ಮೊಮ್ಮಗಳು ಹಾಗೂ ಡಿಕೆಶಿ ಪುತ್ರಿ ಐಶ್ವರ್ಯಗೆ ಉಡುಗೊರೆಯಾಗಿ ನೀಡಿದ್ದರು. ಅಲ್ಲದೇ 2018ರಲ್ಲಿ ಗೌರಮ್ಮ ತಮ್ಮ ಖಾತೆಯಿಂದ ಐಶ್ವರ್ಯ ಖಾತೆಗೆ 3 ಕೋಟಿ ರೂ. ವರ್ಗಾವಣೆ ಮಾಡಿದ್ದು, ಈ ವಹಿವಾಟಿನ ಹಣಕಾಸು ಮೂಲದ ಹುಡುಕಾಟದಲ್ಲಿ ಅಧಿಕಾರಿಗಳು ತೊಡಗಿದ್ದಾರೆ.
ಆರೋಗ್ಯ ತಪಾಸಣೆ: ಗೌರಮ್ಮ ಅವರಿಗೆ ಸುಮಾರು 85 ವರ್ಷ ವಯಸ್ಸಾಗಿರುವ ಹಿನ್ನೆಲೆ ಇಡಿ ವಿಚಾರಣೆ ಆರಂಭಕ್ಕೂ ಮá-ನ್ನವೇ ವೈದ್ಯರು ಆರೋಗ್ಯ ತಪಾಸಣೆ ನಡೆಸಿದರು.
ಇಡಿ ಅಧಿಕಾರಿಗಳ ತನಿಖೆ ಸದ್ಯಕ್ಕೆ ಅಂತ್ಯವಾಗಿದೆ. ಅವರು ಯಾವಾಗ ಬೇಕಾದರೂ ತನಿಖೆ ನಡೆಸಬಹುದಾಗಿದ್ದು, ನಮ್ಮ ಸಹಕಾರ ಇದ್ದೇ ಇರುತ್ತದೆ. ತಾಯಿಗೆ ಜ್ವರ ಇದ್ದರೂ ದೂರದಿಂದ ಬಂದ ಅಧಿಕಾರಿಗಳಿಗೆ ತೊಂದರೆ ಆಗಬಾರದೆಂಬ ನಿಟ್ಟಿನಲ್ಲಿ ತನಿಖೆಗೆ ಸಹಕರಿಸಿದ್ದಾರೆ. | ಡಿ.ಕೆ.ಸುರೇಶ್ ಸಂಸದ
ಭದ್ರತೆಗೆ 150 ಪೊಲೀಸರು
ಡಿ.ಕೆ ಸುರೇಶ್ ನಿವಾಸದಲ್ಲಿ ವಿಚಾರಣೆ ನಡೆದರೂ ಮನೆಯವರಾಗಲಿ, ಸ್ಥಳೀಯರಾಗಲಿ ಗೌರಮ್ಮ ಹತ್ತಿರ ಸುಳಿಯದಂತೆ ಅಧಿಕಾರಿಗಳು ನೋಡಿಕೊಂಡಿದ್ದಾರೆ. ಡಿ.ಕೆ.ಶಿವಕುಮಾರ್, ಪತ್ನಿ ಉಷಾ, ಮಗಳು ಐಶ್ವರ್ಯ, ಸಂಸದ ಸುರೇಶ್ ಮನೆಯಲ್ಲಿಯೇ ಇದ್ದರೂ ಗೌರಮ್ಮ ಬಳಿಗೆ ತೆರಳಲು ಅವಕಾಶ ನೀಡಿರಲಿಲ್ಲ. ಮಹಡಿ ಮೇಲ್ಭಾಗದ ಕೊಠಡಿಯಲ್ಲಿ ವಿಚಾರಣೆ ನಡೆದಿದ್ದು, ಪೊಲೀಸರೂ ಮನೆ ಪ್ರವೇಶಿಸಿರಲಿಲ್ಲ. ಆದರೆ ಇಡಿ ಅಧಿಕಾರಿಗಳು ಆಗಮಿಸುವ ಮá-ನ್ನವೇ ಪೊಲೀಸರು ಇಡೀ ಮನೆ ಸá-ತ್ತುವರಿದಿದ್ದರು. 150ಕ್ಕೂ ಹೆಚ್ಚು ಪೊಲೀಸರನ್ನು ಭದ್ರತೆಗಾಗಿ ನಿಯೋಜನೆ ಮಾಡಲಾಗಿತ್ತು.