

ನವದೆಹಲಿ: ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ಪ್ರತಿಷ್ಠಿತ ಬಹುರಾಷ್ಟ್ರೀಯ ಕಂಪನಿ ಆ್ಯಮ್ವೇ ಗೆ ಸೇರಿದ 757ಕೋಟಿ ರೂ.ಆಸ್ತಿಯನ್ನು ಜಾರಿ ನಿರ್ದೇಶನಾಲಯ ಸೋಮವಾರ ಜಪ್ತಿ ಮಾಡಿದೆ.
ನೇರ ಮಾರಾಟ ಸೋಗಿನಲ್ಲಿ ಬಹು ಹಗರಣ ನಡೆಸುತ್ತಿದೆ ಎಂಬ ಆರೋಪ ಕಂಪನಿ ಮೇಲಿದೆ. ಇನ್ನು ಅತ್ಯಧಿಕ ಬೆಲೆಗೆ ಮಾರಾಟದ ಆರೋಪವು ಕಂಪನಿ ವಿರುದ್ಧ ಕೇಳಿಬಂದಿದೆ.
ತಮಿಳುನಾಡಿನ ದಿಂಡಿಗಲ್ ಜಿಲ್ಲೆಯಲ್ಲಿರುವ ಸಂಸ್ಥೆಯ ಯಂತ್ರ ತಯಾರಿಕಾ ಕಾರ್ಖಾನೆ, ವಾಹನಗಳು, ಹಾಗೂ ಸಂಸ್ಥೆಗೆ ಸೇರಿದ ಬ್ಯಾಂಕ್ ಖಾತೆಗಳನ್ನು ಸಹ ಇಡಿ ಮುಟ್ಟುಗೋಲು ಹಾಕಿಕೊಂಡಿದೆ.
ಈ ಹಿಂದೆ ತನಿಖಾ ಸಂಸ್ಥೆಯಿ 411.83 ಕೋಟಿ ರೂ. ಸ್ಥಿರ ಹಾಗೂ 345.94 ಕೋಟಿ ರೂ. ಚರ ಆಸ್ತಿಯನ್ನು ಮುಟ್ಟುಗೋಲು ಹಾಕಿಕೊಂಡಿತ್ತು.