ಜೇನು ಕೃಷಿಯಿಂದ ಆರ್ಥಿಕ ಸ್ವಾವಲಂಬನೆ

honey
ಇರುವಕ್ಕಿ ಕೃಷಿ ವಿವಿ ಆವರಣದಲ್ಲಿ ಜೇನು ಸಾಕಣೆ ತರಬೇತಿ ಕಾರ್ಯಕ್ರಮದಲ್ಲಿ ಹೊಸನಗರ ತಾಪಂ ಇಒ ನರೇಂದ್ರಕುಮಾರ್, ಡಾ. ಅಶೋಕ, ಡಾ. ಕೆ.ಸಿ.ಶಶಿಧರ, ಡಾ. ಕೃಷ್ಣ ರೆಡ್ಡಿ, ಪೂರ್ಣಿಮಾ ಇತರರಿದ್ದರು.
Published on

ಆನಂದಪುರ: ಜೇನು ಕೃಷಿ ರೈತ ಮಹಿಳೆಯರಿಗೆ ಆರ್ಥಿಕ ಸ್ವಾವಲಂಬನೆ ನೀಡುತ್ತದೆ ಎಂದು ಹೊಸನಗರ ತಾಪಂ ಇಒ ನರೇಂದ್ರಕುಮಾರ್ ತಿಳಿಸಿದರು.

ಇರುವಕ್ಕಿ ಕೆಳದಿ ಶಿವಪ್ಪನಾಯಕ ಕೃಷಿ ಮತ್ತು ತೋಟಗಾರಿಕೆ ವಿವಿಯಲ್ಲಿ ಆಯೋಜಿಸಿದ್ದ ಜೇನು ಕೃಷಿ ತರಬೇತಿ ಶಿಬಿರ ಉದ್ಘಾಟಿಸಿ ಮಾತನಾಡಿದ ಅವರು, ಮನೆ ಅಂಗಳ, ಮನೆ ಮಹಡಿ, ಓಡಾಡುವ ದಾರಿ, ಕೃಷಿ ಭೂಮಿಯ ಮೂಲೆ, ಹೀಗೆ ಕಡಿಮೆ ಜಾಗದಲ್ಲಿ ಜೇನು ಕೃಷಿ ನಡೆಸಬಹುದು. ಜೇನು ಹುಳುಗಳು ಹೂವಿನಿಂದ ಹೂವಿಗೆ ಹಾರಿ ಪರಾಗಸ್ಪರ್ಶ ಮಾಡುವ ಕಾರಣ ಬೆಳೆಯ ಇಳುವರಿ ಸಹ ಹೆಚ್ಚಾಗುತ್ತದೆ ಎಂದರು.

ಕೃಷಿ ವಿವಿ ವಿಶೇಷಾಧಿಕಾರಿ ಡಾ. ಕೆ.ಸಿ.ಶಶಿಧರ ಮಾತನಾಡಿ, ಗ್ರಾಮೀಣ ಪ್ರದೇಶದಲ್ಲಿ ಜೇನು ಕೃಷಿಗೆ ವಿಪುಲ ಅವಕಾಶವಿದೆ. ಈ ಕೃಷಿಯ ತಾಂತ್ರಿಕತೆ ತಿಳಿದುಕೊಂಡರೆ ವರ್ಷವಿಡೀ ನಿರ್ವಹಣೆ ಸುಲಭ ಎಂದರು.

ವಿವಿಯ ವಿಸ್ತರಣಾ ನಿರ್ದೇಶಕ ಡಾ. ಕೆ.ಟಿ.ಗುರುಮೂರ್ತಿ, ಹೊಸನಗರ ತಾಲೂಕು ತರಬೇತಿ ವ್ಯವಸ್ಥಾಪಕ ಸಂದೀಪ್, ಅಭಿವೃದ್ಧಿ ಅಧಿಕಾರಿ ರತ್ನಮ್ಮ, ಸಿಬ್ಬಂದಿ ಡಾ. ದರ್ಶನ್, ಸುಧೀರ್, ಮನೋಹರ್, ತರಬೇತಿ ನೊಡೆಲ್ ಅಧಿಕಾರಿ ಜಯಲಕ್ಷ್ಮೀ ಹೆಗಡೆ, ರೈತ ತರಬೇತಿ ಸಂಸ್ಥೆ ಮುಖ್ಯಸ್ಥ ಡಾ. ಅಶೋಕ, ಡಾ. ಕೃಷ್ಣ ರೆಡ್ಡಿ, ಪೂರ್ಣಿಮಾ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net