

S Jaishankar At Brics Meet: ಅಮೆರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ವಿಧಿಸಿರುವ ಸುಂಕಗಳಿಂದ ಹೆಚ್ಚುತ್ತಿರುವ ವ್ಯಾಪಾರ ಉದ್ವಿಗ್ನತೆಯ ನಡುವೆ ಎಲ್ಲರಿಗೂ ಪ್ರಯೋಜನವಾಗುವ ನ್ಯಾಯಯುತ ಮತ್ತು ಪಾರದರ್ಶಕ ಆರ್ಥಿಕ ಪದ್ಧತಿಗಳ ಅಗತ್ಯವನ್ನು ವಿದೇಶಾಂಗ ಸಚಿವ ಎಸ್. ಜೈಶಂಕರ್ ಉಲ್ಲೇಖಿಸಿದ್ದಾರೆ.
ವರ್ಚುವಲ್ ಬ್ರಿಕ್ಸ್ ವರ್ಚುವಲ್ ಸಭೆಯಲ್ಲಿ ಮಾತನಾಡಿದ ಜೈಶಂಕರ್, ಅಂತರರಾಷ್ಟ್ರೀಯ ವ್ಯಾಪಾರದ ಮೇಲೆ ಬಹು ಅಡೆತಡೆಗಳು ಪರಿಣಾಮ ಬೀರುತ್ತಿರುವ ಸಮಯದಲ್ಲಿ, ಆರ್ಥಿಕ ಪದ್ಧತಿಗಳು ನ್ಯಾಯಯುತ, ಪಾರದರ್ಶಕ ಮತ್ತು ಎಲ್ಲರಿಗೂ ಪ್ರಯೋಜನವಾಗುವುದು ಕಡ್ಡಾಯವಾಗಿದೆ ಎಂದರು.
ಕೋವಿಡ್ ಸಾಂಕ್ರಾಮಿಕದ ಪರಿಣಾಮ, ಉಕ್ರೇನ್ ಮತ್ತು ರಷ್ಯಾದ ಸಂಘರ್ಷ, ವ್ಯಾಪಾರ ಮತ್ತು ಹೂಡಿಕೆ ಹರಿವಿನಲ್ಲಿನ ಏರಿಳಿತ, ತೀವ್ರ ಹವಾಮಾನ ವೈಪರಿತ್ಯಗಳು ಮತ್ತು ಎಸ್ಡಿಜಿ ಕಾರ್ಯಸೂಚಿಯ ಸ್ಪಷ್ಟ ನಿಧಾನಗತಿಯನ್ನು ಕಂಡಿದ್ದೇವೆ. ಈ ಸವಾಲುಗಳನ್ನು ಎದುರಿಸುವಾಗ ಬಹುಪಕ್ಷೀಯ ವ್ಯವಸ್ಥೆಯು ಜಗತ್ತನ್ನು ವಿಫಲಗೊಳಿಸುತ್ತಿರುವಂತೆ ತೋರುತ್ತಿದೆ. ದ್ವೇಶ ಪರಿಹರಿಸಲು ಮತ್ತು ಅದಕ್ಕೆ ಪರಿಹಾರಗಳನ್ನು ಖಚಿತಪಡಿಸಿಕೊಳ್ಳಲು ರಾಜತಾಂತ್ರಿಕ ಪ್ರಯತ್ನಗಳ ಮಹತ್ವವನ್ನು ಒತ್ತಿ ಹೇಳಿದರು.
ನಿಯಮ ಆಧಾರಿತ ಅಂತರರಾಷ್ಟ್ರೀಯ ವ್ಯಾಪಾರ ವ್ಯವಸ್ಥೆಗೆ ಭಾರತದ ಬದ್ಧತೆಯನ್ನು ಕೇಂದ್ರ ಸಚಿವರು ಪುನರುಚ್ಚರಿಸಿದ್ದು, ಇದನ್ನು ರಕ್ಷಿಸಬೇಕು ಮತ್ತು ಪೋಷಿಸಬೇಕು ಎನ್ನುವುದು ಭಾರತ ಬಲವಾದ ನಂಬಿಕೆ ಎಂದರು. ಇದೇ ವೇಳೆ ಸುಸ್ಥಿರ ವ್ಯಾಪಾರವನ್ನು ಖಚಿತಪಡಿಸಿಕೊಳ್ಳಲು ರಚನಾತ್ಮಕ ವಿಧಾನಗಳಿಗೆ ಕರೆ ನೀಡಿದರು. ಬ್ರಿಕ್ಸ್ ಶೃಂಗಸಭೆಗೆ ಆಹ್ವಾನಿಸಿದ್ದಕ್ಕಾಗಿ ಬ್ರೆಜಿಲ್ ಅಧ್ಯಕ್ಷ ಲೂಯಿಜ್ ಇನ್ಸಿಯೊ ಲುಲಾ ಡ ಸಿಲ್ವಾಗೆ ವಿದೇಶಾಂಗ ಸಚಿವ ಜೈ ಶಂಕರ್ ಕೃತಜ್ಞತೆ ಸಲ್ಲಿಸಿದರು.(ಏಜೆನ್ಸೀಸ್)