ಸದೃಢ ದೇಹವನ್ನು ಹೊಂದಲು ಈ ಪೌಷ್ಟಿಕ ಆಹಾರ ಸೇವಿಸಿ! Fitness breakfast

untitled-design-29-690de819614f0
Published on

Fitness breakfast: ಇಂದಿನ ದಿನಗಳಲ್ಲಿ ಹಲವಾರು ಜನರು ತೂಕವನ್ನು ಹೆಚ್ಚಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಅಂತಹ ಸಂದರ್ಭದಲ್ಲಿ ತರಬೇತಿ ಶಾಲೆಗಳಿಗೆ ಹೋಗುತ್ತಾರೆ ಹಾಗೆಯೇ ಅವರು ಸೂಚಿಸಿದ ಆಹಾರಗಳನ್ನು ಸೇವಿಸುತ್ತಾರೆ. ಆದರೆ, ಯಾವುದೇ ರೀತಿಯಲ್ಲೂ ಬೆಳವಣಿಗೆ ಕಾಣದೇ ನಿರಾಸೆಗೆ ಒಳಗಾಗುತ್ತಾರೆ. ಅಂತಹ ಜನರು ನಿರಾಸೆಗೊಳ್ಳದೇ, ಈ ರೀತಿಯ ಪೌಷ್ಟಿಕ ಆಹಾರವನ್ನು ಪ್ರತಿನಿತ್ಯ ಸೇವಿಸುವುದರಿಂದ ನಿಮ್ಮ ದೇಹವನ್ನು ಸದೃಢವಾಗಿ ಇಟ್ಟುಕೊಳ್ಳಿ..

ಬೇಕಾಗುವ ಪದಾರ್ಥಗಳು

* 1 ಕಪ್​ ಹೆಸರುಕಾಳು

* 1 ಕಪ್​

* 1 ಚೂರು ಶುಂಠಿ

* 1 ಮೆಣಸಿನಕಾಯಿ

* 1 ಟೊಮ್ಯಾಟೋ

* 1 ಈರುಳ್ಳಿ

* ಸ್ವಲ್ಪ ಕೊತ್ತುಂಬರಿ

* ರುಚಿಗೆ ಉಪ್ಪು

ಮಾಡುವ ವಿಧಾನ

ಮೊದಲು ಒಂದು ಪಾತ್ರೆಗೆ 1 ಕಪ್​ ಹೆಸರುಕಾಳನ್ನು ತೊಳೆದು ನೀರು ಹಾಕಿ ಒಂದು ದಿನ ನೆನಸಿಡಿ. ನೆನಸಿಟ್ಟ ಹೆಸರು ಕಾಳನ್ನು ತೆಗೆದು ಅದಕ್ಕೆ ಶುಂಠಿ ಮತ್ತು ಮೆಣಸಿನಕಾಯಿಯನ್ನು ಹಾಕಿ ಮಿಕ್ಸಿ ಮಾಡಿಕೊಳ್ಳಿ. ನಂತರ ಒಂದು ಬಟ್ಟಲಿನಲ್ಲಿ ಅವಲಕ್ಕಿ ತೊಳೆದು ಅದನ್ನು ರುಬ್ಬಿಟ್ಟುಕೊಳ್ಳಿ. ನಂತರ ಅದಕ್ಕೆ ಟೊಮಾಟೋ, ಉಪ್ಪು, ಈರುಳ್ಳಿ, ಕೊತ್ತುಂಬರಿ ಸೊಪ್ಪನ್ನು ಹಾಕಿ ಮಿಶ್ರಣ ಮಾಡಿಕೊಳ್ಳಿ. ನಂತರ ತವವನ್ನು ಕಾಯಿಸಿ ಅದರ ಮೇಲೆ ಈ ಮಿಶ್ರಣವನ್ನು ಹಾಕಿ ಎರಡೂ ಕಡೆ ಬೇಯಿಸಿರಿ. ಸ್ವಲ್ಪ ಸಮಯ ಬಿಟ್ಟು ಸೇವಿಸಿರಿ. ಪ್ರತಿನಿತ್ಯ ಈ ರೀತಿಯ ಆಹಾರವನ್ನು ಸೇವಿಸುವುದರಿಂದ ದೇಹದಲ್ಲಿ ತೂಕವನ್ನು ಹೆಚ್ಚಿಸಿಕೊಳ್ಳಲು ಸಹಾಯ ಮಾಡುತ್ತದೆ. (ಏಜೆನ್ಸೀಸ್​)ಗಮನಿಸಿ: ಈ ಮಾಹಿತಿಯನ್ನು ಅಂತರ್ಜಾಲದಿಂದ ಸಂಗ್ರಹಿಸಲಾಗಿದೆ ಮತ್ತು ಮಾಹಿತಿ ಉದ್ದೇಶಗಳಿಗಾಗಿ ಮಾತ್ರ ಪ್ರಸ್ತುತ ಪಡಿಸಲಾಗಿದೆ. ಇದನ್ನು “ವಿಜಯವಾಣಿ ಡಾಟ್ ನೆಟ್” ದೃಢಪಡಿಸುವುದಿಲ್ಲ. ಯಾವುದೇ ಸಲಹೆಯನ್ನು ಅನುಸರಿಸುವ ಮೊದಲು ವೈದ್ಯರನ್ನು ಸಂಪರ್ಕಿಸುವುದು ಯಾವಾಗಲೂ ಉತ್ತಮ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net