

Recipe: ಇಂದಿನ ದಿನಗಳಲ್ಲಿ ಅನೇಕರು ಮಾರುಕಟ್ಟೆಯಲ್ಲಿ ಸಿಗುವಂತಹ ವಿವಿಧ ಬಿಸ್ಕತ್‌ಗಳ ಮಾರು ಹೋಗುತ್ತಿದ್ದಾರೆ. ಇನ್ನು ಕೆಲವೊಬ್ಬರು ಬಿಸ್ಕತ್ ಸೇವಿಸುವುದರಿಂದ ಮಧುಮೇಹ ಕಾಯಿಲೆಗೆ ಒಳಗಾಗುತ್ತಾರೆ ಎಂದು ತಿಳಿದು ಆಸೆ ಇದ್ದರೂ ಬಾಯನ್ನು ಕಟ್ಟಿಕೊಂಡಿರುತ್ತಾರೆ. ಇನ್ನು ಆಹಾರ ಪ್ರಿಯರು ತಮಗೆ ಇಷ್ಟವಾದ ಆಹಾರವನ್ನು ಸೇವಿಸಲು ಬಯಸುತ್ತಾರೆ. ಅಂತಹವರು ಮನೆಯಲ್ಲೇ ಸುಲಭವಾಗಿ ಈ ಪದಾರ್ಥಗಳನ್ನು ಬಳಸಿ ಬಿಸ್ಕತ್ ಸೇವಿಸಿ..
* 1 ಕಪ್ ಮೈದಾ ಹಿಟ್ಟು
* 1/2 ಕಪ್ ಸಕ್ಕರೆ ಪುಡಿ
* 1/2 ಕಪ್ ಬೆಣ್ಣೆ
* 1/2 ಚಮಚ ವೆನಿಲ್ಲಾ ಎಸೆನ್ಸ್
* 1/4 ಚಮಚ ಬೇಕಿಂಗ್ ಪೌಡರ್
* 1-2 ಚಮಚ ಹಾಲು
* ಒಂದು ಚಿಟಿಕೆ ಉಪ್ಪು
ಮೊದಲು ಓವನ್ನನ್ನು 180°C (350°F) ಗೆ ಪೂರ್ವ-ಕಾಯಿಸಿ ಬೇಕಿಂಗ್ ಟ್ರೇಗೆ ಬೆಣ್ಣೆ ಸವರಿ ಅಥವಾ ಪಾರ್ಚ್‌ಮೆಂಟ್ ಕಾಗದ ಹಾಕಿಟ್ಟುಕೊಳ್ಳಿ. ನಂತರ ಒಂದು ಬಟ್ಟಲನ್ನು ತೆಗೆದುಕೊಂಡು ಅದಕ್ಕೆ ಮೈದಾ ಹಿಟ್ಟು, ಬೇಕಿಂಗ್ ಪೌಡರ್ ಹಾಗೂ ಉಪ್ಪನ್ನು ಸೇರಿಸಿ. ನಂತರ, ಬೆಣ್ಣೆ, ಸಕ್ಕರೆ ಹಾಗೂ ವೆನಿಲ್ಲಾ ಎಸೆನ್ಸ್ ಹಾಕಿ ಚೆನ್ನಾಗಿ ಮಿಶ್ರಣ ಮಾಡಿ.
ಎಲ್ಲಾವನ್ನು ಮಿಶ್ರಣ ಮಾಡಿದ ನಂತರ, 1-2 ಚಮಚ ಹಾಲನ್ನು ಹಾಕಿ ಹಿಟ್ಟನ್ನು ಮೆದುವಾಗಿ ಮಿಶ್ರಣ ಮಾಡಿ. ತುಂಬಾ ಒದ್ದೆಯಾಗದಂತೆ ಎಚ್ಚರಿಕೆ ವಹಿಸಿರಿ. ಇದಾದ ಬಳಿಕ ಹಿಟ್ಟನ್ನು ಸಣ್ಣ ಉಂಡೆಯನ್ನಾಗಿ ಮಾಡಿ, ನಿಮಗೆ ಬೇಕಾದ ರೀತಿಯಲ್ಲಿ ಬಿಸ್ಕತ್ನ್ನು ಚಪ್ಪಟೆ ಮಾಡಿ, ಕುಕ್ಕೀ ಕಟ್ಟರ್ನಿಂದ ಆಕಾರ ನೀಡಿ. ನಂತರ ತಯಾರಾದ ಬಿಸ್ಕತ್‌ಗಳನ್ನು ಬೇಕಿಂಗ್ ಟ್ರೇನಲ್ಲಿ ಸ್ವಲ್ಪ ಅಂತರದಲ್ಲಿ ಇರಿಸಿ. ಪೂರ್ವ-ಕಾಯಿಸಿದ ಒವನ್‌ನಲ್ಲಿ 180°C ಯಲ್ಲಿ 12-15 ನಿಮಿಷಗಳ ಕಾಲ ಬೇಯಿಸಿ, ಅಥವಾ ಬಿಸ್ಕತ್‌ಗಳ ಅಂಚು ತಿಳಿ ಕಂದು ಬಣ್ಣಕ್ಕೆ ತಿರುಗುವವರೆಗೆ ಬೇಯಿಸಿ. ಇದಾದ ಬಳಿಕ ಹೊರತೆಗೆದು ತಣ್ಣಗಾಗಲು ಬಿಡಿ. ಸ್ವಲ್ಪ ಸಮಯದ ನಂತರ ಸೇವಿಸಿ. (ಏಜೆನ್ಸೀಸ್)