ಜಮ್ಮು ಮತ್ತು ಕಾಶ್ಮೀರದಲ್ಲಿ 3.6 ತೀವ್ರತೆಯ ಭೂಕಂಪ| earthquake

Earthquake
Published on: 

earthquake : ಜಮ್ಮು ಮತ್ತು ಕಾಶ್ಮೀರದಲ್ಲಿ ರಿಕ್ಟರ್ ಮಾಪಕದಲ್ಲಿ 3.6 ತೀವ್ರತೆಯ ಭೂಕಂಪ ಸಂಭವಿಸಿದೆ. ಆದರೆ ಯಾವುದೇ ಜೀವಹಾನಿ ಅಥವಾ ಆಸ್ತಿಪಾಸ್ತಿಗೆ ಹಾನಿಯಾದ ವರದಿಯಾಗಿಲ್ಲ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಇಂದು (28) ಸಂಜೆ 7:36 ಕ್ಕೆ ಜಮ್ಮು ಮತ್ತು ಕಾಶ್ಮೀರದಲ್ಲಿ 32.96 ಡಿಗ್ರಿ ಉತ್ತರ ಅಕ್ಷಾಂಶ ಮತ್ತು 74.71 ಡಿಗ್ರಿ ಪೂರ್ವ ರೇಖಾಂಶದಲ್ಲಿ ಒಂಬತ್ತು ಕಿ.ಮೀ ಆಳದಲ್ಲಿ ಭೂಕಂಪ ಸಂಭವಿಸಿದೆ.

ಒಂದು ತಿಂಗಳ ಹಿಂದೆ, ಮಾರ್ಚ್‌ನಲ್ಲಿ, ಲಡಾಖ್‌ನ ಕಾರ್ಗಿಲ್‌ನಲ್ಲಿ 5.2 ತೀವ್ರತೆಯ ಭೂಕಂಪ ಸಂಭವಿಸಿತು, ಜಮ್ಮು ಮತ್ತು ಕಾಶ್ಮೀರದಲ್ಲೂ ಕಂಪನದ ಅನುಭವವಾಯಿತು. ರಾಷ್ಟ್ರೀಯ ಭೂಕಂಪಶಾಸ್ತ್ರ ಕೇಂದ್ರದ ಪ್ರಕಾರ, 15 ಕಿ.ಮೀ ಆಳದಲ್ಲಿ ಭೂಕಂಪ ಸಂಭವಿಸಿತ್ತು. ಜಮ್ಮು ಮತ್ತು ಶ್ರೀನಗರದ ಹಲವಾರು ನಿವಾಸಿಗಳು ತಾವು ಕಂಪನದ ಅನುಭವವನ್ನು ಅನುಭವಿಸಿರುವುದಾಗಿ ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಂಡಿದ್ದರು.

ಭಾರತದ ಭೂಕಂಪ ಪೀಡಿತ ಪ್ರದೇಶಗಳನ್ನು ಭೂಕಂಪನ ಇತಿಹಾಸ, ಭೂಪ್ರದೇಶದ ಲಕ್ಷಣಗಳು ಮತ್ತು ವೈಜ್ಞಾನಿಕ ದತ್ತಾಂಶಗಳ ಆಧಾರದ ಮೇಲೆ ವರ್ಗೀಕರಿಸಲಾಗಿದೆ. ಭಾರತೀಯ ಮಾನದಂಡಗಳ ಬ್ಯೂರೋ (BIS) ದೇಶವನ್ನು ನಾಲ್ಕು ಭೂಕಂಪನ ವಲಯಗಳಾಗಿ ವಿಂಗಡಿಸಿದೆ.

(ಏಜೆನ್ಸೀಸ್)