ಬೆಳ್ಳಂಬೆಳಗ್ಗೆ ಹಿಮಾಚಲ ಪ್ರದೇಶದಲ್ಲಿ ಭೂಕಂಪನ: 3.5 ತೀವ್ರತೆ ದಾಖಲು! | Earthquake

dk - 2025-07-11T081719.270
Published on

ಶಿಮ್ಲಾ: ಹರಿಯಾಣ ಮತ್ತು ದೆಹಲಿ NCR ಬಳಿಕ ಇದೀಗ ಹಿಮಾಚಲ ಪ್ರದೇಶದಲ್ಲಿ ಶುಕ್ರವಾರ ಬೆಳಂ ಬೆಳಗ್ಗೆ ಭೂಕಂಪ(Earthquake) ಸಂಭವಿಸಿದೆ ಎಂದು ವರದಿಯಾಗಿದೆ.

ಚಂಬಾ ಜಿಲ್ಲೆಯಲ್ಲಿ ಭೂಕಂಪನದ ಅನುಭವವಾಗಿದೆ. ಭಾರತೀಯ ಕಾಲಮಾನದ ಪ್ರಕಾರ, ಈ ಭೂಕಂಪ ಬೆಳಿಗ್ಗೆ 6:23 ಮತ್ತು 56 ಸೆಕೆಂಡುಗಳಲ್ಲಿ ಸಂಭವಿಸಿದೆ ಎಂದು ವರದಿ ಉಲ್ಲೇಖಿಸಿದೆ.

ರಿಕ್ಟರ್ ಮಾಪಕದಲ್ಲಿ ಇದರ ತೀವ್ರತೆ 3.5 ಎಂದು ಅಳೆಯಲಾಗಿದೆ. ಭೂಕಂಪದ ಕೇಂದ್ರಬಿಂದು ಚಂಬಾ ಪ್ರದೇಶದಲ್ಲಿ 32.36 ಡಿಗ್ರಿ ಉತ್ತರ ಅಕ್ಷಾಂಶ ಮತ್ತು 76.18 ಡಿಗ್ರಿ ಪೂರ್ವ ರೇಖಾಂಶದಲ್ಲಿತ್ತು, ಇದರ ಆಳವು ನೆಲದಿಂದ ಸುಮಾರು 5 ಕಿಲೋಮೀಟರ್ ಕೆಳಗೆ ಇದೆ ಎಂದು ಹವಾಮಾನ ಇಲಾಖೆ ಭೂಕಂಪವನ್ನು ದೃಢಪಡಿಸಿದೆ.

ಭೂಕಂಪನವು ಈ ಪ್ರದೇಶದಲ್ಲಿ ಸೌಮ್ಯವಾದ ಭೀತಿಯನ್ನು ಉಂಟುಮಾಡಿದ್ದರೂ, ಇಲ್ಲಿಯವರೆಗೆ ಯಾವುದೇ ಜೀವ ಅಥವಾ ಆಸ್ತಿಪಾಸ್ತಿ ನಷ್ಟದ ವರದಿಯಾಗಿಲ್ಲ. ಆಡಳಿತವು ಪರಿಸ್ಥಿತಿಯ ಮೇಲೆ ನಿಗಾ ಇಟ್ಟಿದೆ.(ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net