ರಾಜಧಾನಿಯಲ್ಲಿ ಮತ್ತೆ ಭೂಕಂಪ, ಕಂಪನದ ಅನುಭವ ಹೇಳಿಕೊಂಡ ಜನರು..

earthquake
Published on

ನವದೆಹಲಿ: ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಮತ್ತೆ ಭೂಕಂಪ ಸಂಭವಿಸಿದ್ದು, ಜನರನ್ನು ಆತಂಕಕ್ಕೀಡು ಮಾಡಿದೆ. ಹಲವರು ಇಂದು ಸಂಭವಿಸಿದ ಭೂಕಂಪದಿಂದ ತಮಗೆ ಕಂಪನದ ಅನುಭವ ಆಗಿರುವುದನ್ನೂ ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ.

ಇಂದು ರಾತ್ರಿ 9.30ರ ಸುಮಾರಿಗೆ ಈ ಭೂಕಂಪ ದೆಹಲಿಯ ಪಶ್ಚಿಮ ಭಾಗದಲ್ಲಿ ಸಂಭವಿಸಿದ್ದು, ಇದರ ತೀವ್ರತೆ ರಿಕ್ಟರ್ ಮಾಪಕದಲ್ಲಿ 2.5 ದಾಖಲಾಗಿದೆ ಹಾಗೂ ಭೂಮಿಯ ಐದು ಕಿ.ಮೀ. ಆಳದಲ್ಲಿ ಈ ಕಂಪನ ಉಂಟಾಗಿದೆ ಎಂದು ನ್ಯಾಷನಲ್ ಸೆಂಟರ್ ಫಾರ್ ಸೀಸ್ಮಾಲಜಿ ತಿಳಿಸಿದೆ.

ನ. 14ರಂದು ಅಮೃತಸರ ಮತ್ತು ಪಂಜಾಬ್​​ ಭಾಗಗಳಲ್ಲಿ ಭೂಕಂಪ ಉಂಟಾಗಿದ್ದು, ಅದಕ್ಕೂ ಮೊದಲು ಎರಡು ಸಲ ದೆಹಲಿಯಲ್ಲಿ ಭೂಕಂಪವಾಗಿತ್ತು. ನ. 9 ಮತ್ತು ನ. 12ರಂದು ಎರಡು ಸಲ ದೆಹಲಿಯಲ್ಲಿ ಭೂಕಂಪ ಉಂಟಾಗಿದ್ದನ್ನು ಎನ್​ಸಿಎಸ್ ಉಲ್ಲೇಖಿಸಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net