ಸುಳ್ಯ ಭಾಗದಲ್ಲಿ ನಾಲ್ಕನೇ ಬಾರಿಗೆ ತಡ ರಾತ್ರಿ ಭೂ ಭೂಕಂಪನ ಭಯ ಭೀತರಾದ ಜನ

IMG_20220701_082856
Published on

ಮಂಗಳೂರು: ಕಳೆದ ಮೂರು ಬಾರಿ ಭೂಮಿ ಕಂಪಿಸಿ ಆತಂಕ ಸೃಷ್ಟಿಯಾದ ಸುಳ್ಯ ಹಾಗೂ ಕೊಡಗು ಗಡಿ ಭಾಗದಲ್ಲಿ ನಿನ್ನೆ ಮಧ್ಯರಾತ್ರಿ ವೇಳೆಗೆ ಮತ್ತೆ ಭೂಕಂಪನವಾಗಿದೆ.

ಮಧ್ಯ ರಾತ್ರಿ 1.15ರ ಸುಮಾರಿಗೆ ಈ ಕಂಪನ ಉಂಟಾಗಿದ್ದು ಗಾಢ ನಿದ್ರೆಯಲ್ಲಿದ್ದ ಜನ ಒಮ್ಮಲೇ ಎಚ್ಚರಗೊಂಡು ಭಯಭೀತರಾಗಿದ್ದಾರೆ.

ಆರಂಭದಲ್ಲಿ ದೊಡ್ಡ ಶಬ್ದ ಕೇಳಿತು. ಜತೆಗೆ ಅಲುಗಾಡಿದ ಅನುಭವವಾಯಿತು ಎಂದು ಜನ ಹೇಳಿಕೊಂಡಿದ್ದಾರೆ. ಕೆಲವರಿಗೆ ಒಂದೆರಡು ಸೆಕೆಂಡುಗಳ ವ್ಯತ್ಯಾಸದಲ್ಲಿ ಎರಡು ಬಾರಿ ಈ
ಅನುಭವವಾಗಿದೆ.
ಸಂಪಾಜೆ, ಚೆಂಬು, ತೊಡಿಕಾನ, ಪೆರಾಜೆ, ಬಡ್ಡಡ್ಕ, ಸುಳ್ಯ, ಉಬರಡ್ಕ, ಎಲಿಮಲೆ, ಗುತ್ತಿಗಾರು ಪರಿಸರಗಳಲ್ಲಿ ಈ ಕಂಪನದ ಅನುಭವವಾಗಿದೆ.

ಕಳೆದ ಎರಡು ವಾರಗಳಲ್ಲಿ ಇದು ನಾಲ್ಕನೇ ಬಾರಿಯ ಕಂಪನವಾಗಿದ್ದು ನಿನ್ನೆಯ ಕಂಪನದ ತೀವ್ರತೆ ಇನ್ನಷ್ಟೇ ತಿಳಿದು ಬರಬೇಕಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net