ಕಿವಿಗಳೇ ಆರೋಗ್ಯದ ಕೀಲಿಕೈ ಕರ್ಣವೇಧದ ಯೋಗ ಚಮತ್ಕಾರ

-682624716b383
Published on
ನಮ್ಮ ಕಿವಿಗಳು ಸಾಮಾನ್ಯವಾಗಿ ನಿರ್ಲಕ್ಷಿಸಲ್ಪಡುತ್ತವೆ. ನಮ್ಮ ಒಟ್ಟಾರೆ ಆರೋಗ್ಯ ಮತ್ತು ಕ್ಷೇಮಕ್ಕೆ ಗಮನಾರ್ಹ ಸಂಪರ್ಕ ವನ್ನು ಹೊಂದಿವೆ. ಆಕ್ಯೂಪಂಕ್ಷರ್ ಮತ್ತು ಜೌರಿಕ್ಯೂಲರ್ ಥೆರಪಿಯಂತಹ ಪ್ರಾಚೀನ ಪದ್ಧತಿಗಳ ಪ್ರಕಾರ ಕಿವಿ ಇಡೀ ದೇಹದ ಸೂಕ್ಷ್ಮರೂಪವಾಗಿದೆ. ಕಿವಿಯು ತಲೆಕೆಳಗಾದ ಭ್ರೂಣವನ್ನು ಹೋಲುತ್ತದೆ. ಕಿವಿಯ ನಿರ್ದಿಷ್ಟ ಬಿಂದುಗಳನ್ನು ಉತ್ತೇಜಿಸುವ ಮೂಲಕ ನಾವು ವಿವಿಧ ದೈಹಿಕ ಕಾರ್ಯಗಳ ಮೇಲೆ ಪ್ರಭಾವ ಬೀರಬಹುದು. ವಿಶ್ರಾಂತಿ ಗುಣಪಡಿಸುವಿಕೆ ಮತ್ತು ಸುಧಾರಿತ ಮಾನಸಿಕ ಸ್ಪಷ್ಟತೆಯನ್ನು ಉತ್ತೇಜಿಸಬಹುದು.

ಕರ್ಣ ವೇಧ : ಹಿಂದೂ ಸಂಪ್ರದಾಯದ ಷೋಡಶ ಸಂಸ್ಕಾರಗಳಲ್ಲಿ ಒಂದು ಪ್ರಮುಖ ವಿಧಿಯಾಗಿದ್ದು, ಇದು ಮಕ್ಕಳ ಕಿವಿಕುಳಿ (ಕಿವಿಕಡಿವಾಣ) ಬರುವ ವಿಧಿಯಾಗಿದೆ. ಈ ಆಚರಣೆಯನ್ನು ಆಧ್ಯಾತ್ಮಿಕ, ವೈಜ್ಞಾನಿಕ ಹಾಗೂ ಆರೋಗ್ಯಕರ ದೃಷ್ಟಿಕೋನದಲ್ಲಿ ನೋಡಲಾಗುತ್ತದೆ.

ಕರ್ಣ ವೇಧದ ಮಹತ್ವ :

1. ಆಧ್ಯಾತ್ಮಿಕ ಹಾಗೂ ಸಾಂಸ್ಕೃತಿಕ ಪ್ರಾಮುಖ್ಯತೆ: ಕಿವಿಗಳನ್ನುಭೇದಿಸುವುದು ದೈವಿಕ ಶಬ್ದ ಗಳನ್ನು ಮಂತ್ರಗಳನ್ನು ಸ್ವೀಕರಿಸಲು ಶಕ್ತಿಯನ್ನು ಒದಗಿಸುತ್ತದೆ. ವಿದ್ಯಾಭ್ಯಾಸ ಮತ್ತು ಜ್ಞಾನ ಹೆಚ್ಚಿಸುವ ಸಂಕೇತವಾಗಿ ಇದನ್ನು ನೋಡಲಾಗುತ್ತದೆ.

2. ಆಯುರ್ವೆದ ಮತ್ತು ಆರೋಗ್ಯ ಪ್ರಯೋಜನಗಳು: ಆಯುರ್ವೆದ ಪ್ರಕಾರ ಕಿವಿಯ ನಿರ್ದಿಷ್ಟ ಬಿಂದುಗಳನ್ನು ಉತ್ತೇಜಿಸುವುದರಿಂದ ಮಿದುಳಿನ ಶಕ್ತಿಯನ್ನು ಹೆಚ್ಚಿಸಲು ಸಾಧ್ಯ. ದೃಷ್ಟಿ ಶಕ್ತಿಯನ್ನು ಹೆಚ್ಚಿಸಲು ಸಹಾಯಕ.

3. ನೈತಿಕ ಮತ್ತು ಭಾವನಾತ್ಮಕ ಅರ್ಥ: ಕಿವಿಯ ಕುಳಿ ಮಾಡಿಸುವುದು ಉತ್ತಮ ಜ್ಞಾನ ಹಾಗೂ ಧಾರ್ವಿುಕ ಆಚರಣೆ ಉಪದೇಶಗಳನ್ನು ಗಮನವಿಟ್ಟು ಕೇಳಲು ಪ್ರೇರೇಪಿಸುತ್ತದೆ. ಇದು ಜೀವನದಲ್ಲಿ ಜ್ಞಾನ ಶಿಸ್ತು ಮತ್ತು ಶ್ರದ್ಧೆಯ ಸಂಕೇತವಾಗಿದೆ.

ಯಾವಾಗ ಮತ್ತು ಹೇಗೆ ಮಾಡಲಾಗುತ್ತದೆ?: ಸಾಮಾನ್ಯವಾಗಿ ಮಕ್ಕಳ ಜನನದ ನಂತರ ಹನ್ನೆರಡನೇ ದಿನ ಅಥವಾ ಮೂರನೇ, ಐದನೇ, ಏಳನೇ, ಒಂಬತ್ತನೇ ತಿಂಗಳಲ್ಲಿ ಅಥವಾ ಮೂರನೇ ಅಥವಾ ಐದನೇ ವರ್ಷದಲ್ಲಿ ಈ ಕರ್ಣವೇಧದ ಸಂಸ್ಕಾರವನ್ನು ಮಾಡಲಾಗುತ್ತದೆ. ಶುಭದಿನ ಸ್ಥಿತಿ ಹಾಗೂ ನಕ್ಷತ್ರಗಳನ್ನು ಪರಿಗಣಿಸಿ ಈ ಸಂಸ್ಕಾರವನ್ನು ನಡೆಸಲಾಗುತ್ತದೆ.

ಕರ್ಣ ವೇಧ ಸಂಸ್ಕಾರ ಪ್ರಕ್ರಿಯೆ : ಗಣಪತಿ ಪೂಜೆ ಮತ್ತು ದೇವತಾ ಶ್ರೇಷ್ಠರಿಗೆ ಪ್ರಾರ್ಥನೆ ಸಲ್ಲಿಸಲಾಗುತ್ತದೆ. ವಿಶೇಷ ಮಂತ್ರಗಳೊಂದಿಗೆ ಕಿವಿಗಳನ್ನು ಕುಳಿ ಮಾಡಲಾಗುತ್ತದೆ. ಸುವರ್ಣ ಅಥವಾ ಬೆಳ್ಳಿಯ ಕುಳಿ (ಇಯರಿಂಗ್) : ಶರೀರದಲ್ಲಿ ಶಕ್ತಿಯ ಚಲನವಲನವನ್ನು ಸುಧಾರಿಸಲು ಚಿನ್ನ ಅಥವಾ ಬೆಳ್ಳಿಯ ಚಕ್ರಗಳ ಬಳಕೆ ಶ್ರೇಷ್ಠ.

ವೈಜ್ಞಾನಿಕ ದೃಷ್ಟಿಕೋನ : ಕಿವಿಯಲ್ಲಿ ಇರುವ ನಿರ್ದಿಷ್ಟ ನರಕೋಶ ಬಿಂದುಗಳು ಮಿದುಳಿನ ಚೈತನ್ಯವನ್ನು ಹೆಚ್ಚಿಸುತ್ತವೆ. ಚೈತನ್ಯ ಶಕ್ತಿ ಸುಧಾರಣೆಗೆ ಸಹಾಯ ಮಾಡುತ್ತದೆ. ಮಾತುಗಾರಿಕೆ ಹಾಗೂ ಬೌದ್ಧಿಕ ಸಾಮರ್ಥ್ಯ ಅಭಿವೃದ್ಧಿಗೆ ಸಹಕಾರಿಯಾಗಿದೆ.

ಕಿವಿ ಮಿದುಳಿನ ಸಂಪರ್ಕ : ಮಿದುಳು ಮತ್ತು ಕಿವಿ ನಿಕಟವಾಗಿ ಸಂಪರ್ಕ ಹೊಂದಿವೆ. ಕಿವಿಯೊಳಗಿನ ಬಿಂದುಗಳನ್ನು ಉತ್ತೇಜಿಸುವುದು ನೇರವಾಗಿ ಮಿದುಳಿಗೆ ಸಂಕೇತಗಳನ್ನು ಕಳುಹಿಸುತ್ತದೆ. ನರಕೋಶಗಳು ಹಾರ್ವೇನ್​ಗಳು ಮತ್ತು ನರಪೇಕ್ಷಕಗಳ ಮೇಲೆ ಪ್ರಭಾವ ಬೀರುತ್ತದೆ. ಇದು ಒತ್ತಡ, ನಿದ್ರೆ, ಶಕ್ತಿಯ ಮಟ್ಟಗಳು ಮತ್ತು ರಕ್ತದೊತ್ತಡ ದಲ್ಲಿನ ಗಮನಾರ್ಹ ಸುಧಾರಣೆಗಳಿಗೆ ಕಾರಣವಾಗುವುದು.

ಕರ್ಣ ವೇದ ಮತ್ತು ಮಿದುಳಿನ ಬಲ ಎಡ ಭಾಗಗಳ ಪ್ರಾಮುಖ್ಯತೆ: ಮನುಷ್ಯನ ಮಿದುಳು ಎರಡು ಮುಖ್ಯ ಭಾಗಗಳಾಗಿದ್ದು, ಪ್ರತಿಯೊಂದು ವಿಭಿನ್ನ ಕಾರ್ಯಗಳನ್ನು ನಿರ್ವಹಿಸುತ್ತದೆ.

1. ಬಲಭಾಗದ ಕಾರ್ಯಗಳು: ಸೃಜನಶೀಲತೆ - ಚಿತ್ರಕಲೆ, ಸಂಗೀತ, ನೃತ್ಯ, ಕಾವ್ಯ, ಕಲಾತ್ಮಕತೆಯನ್ನು ಉತ್ತೇಜಿಸುತ್ತದೆ. ಭಾವನೆಗಳ ಪ್ರಕ್ರಿಯೆಯನ್ನು ನಿಯಂತ್ರಿಸುತ್ತದೆ. ದೃಶ್ಯ ಮಾಹಿತಿ ಮತ್ತು ಸ್ಥಳೀಯ ಅರಿವನ್ನು ಹೆಚ್ಚಿಸುತ್ತದೆ. ನಾಟಕೀಯತೆ, ವಿಭಿನ್ನ ಚಿಂತನೆ, ಕನಸು ಮತ್ತು ಕಲ್ಪನೆಗಳ ಮೇಲೆ ಪ್ರಭಾವ ಬೀರುತ್ತದೆ.

2. ಎಡಭಾಗದ ಕಾರ್ಯಗಳು: ತರ್ಕಶಕ್ತಿ -ಗಣಿತ, ವಿಜ್ಞಾನ, ವಿಶ್ಲೇಷಣೆ, ಕ್ರಮಬದ್ಧ ಚಿಂತನೆಗೆ ಸಹಾಯ ಮಾಡುತ್ತದೆ. ಓದು, ಬರವಣಿಗೆ, ಮಾತು, ವ್ಯಾಕರಣ, ಪದಬದ್ಧತೆಯನ್ನು ಹೆಚ್ಚು ನಿರ್ವಹಿಸುತ್ತದೆ. ಕ್ರಮಬದ್ಧ ದಾರಿಯಲ್ಲಿ ತೀರ್ಮಾನ ತೆಗೆದು ಕೊಳ್ಳಲು ನೆರವಾಗುತ್ತದೆ. ಲೆಕ್ಕಾಚಾರ, ತರ್ಕಬದ್ಧ ಚಿಂತನೆಗೆ ಹೆಚ್ಚು ಸಕ್ರಿಯವಾಗಿರುತ್ತದೆ. ಕರ್ಣವೇಧವು ಶರೀರ ಮತ್ತು ಮನಸ್ಸಿನ ಸಮತೋಲನವನ್ನು ಸಾಧಿಸಲು ಮಿದುಳಿನ ಕಾರ್ಯಕ್ಷಮತೆ ಹೆಚ್ಚಿಸಲು ಪ್ರಮುಖ ಪಾತ್ರವಹಿಸುತ್ತದೆ.(ಪ್ರತಿಕ್ರಿಯಿಸಿ: vvsudina@gmail.com)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net