

ಸಾಮಾನ್ಯವಾಗಿ ಹದ್ದುಗಳು ಹಾವುಗಳನ್ನು ಹಿಡಿದು ಹಾರುವ ದೃಶ್ಯಗಳನ್ನು ನೋಡಿಯೇ ಇರುತ್ತೇವೆ. ಆದರೆ ಅಮೆರಿಕದ ದಕ್ಷಿಣ ಕೆರೊಲಿನದ ಮೈರ್ಟಲ್ ಬೀಚ್ ಬಳಿ ಬೃಹತ್ ಗಾತ್ರದ ಹಕ್ಕಿಯೊಂದು ಶಾರ್ಕ್ ಮೀನನ್ನು ಹೊತ್ತೊಯ್ಯುತ್ತಿರುವ ದೃಶ್ಯ ವಿಡಿಯೋದಲ್ಲಿ ಸೆರೆಯಾಗಿದೆ.
ಕೆಲ್ಲಿ ಬರ್ಬೆಜ್ ಎನ್ನುವವರು ಈ ಅತಿ ಅಪರೂಪದ ದೃಶ್ಯವನ್ನು ಸೆರೆಹಿಡಿದಿದ್ದು, ತಮ್ಮ ಫೇಸ್ಬುಕ್, ಟ್ವಿಟರ್ ಖಾತೆಗಳಲ್ಲಿ ಇದರ ವಿಡಿಯೋವನ್ನು ಹಂಚಿಕೊಂಡಿದ್ದಾರೆ.
ಟ್ವಿಟರ್ನಲ್ಲಿ ವೈರಲ್ ಆಗಿರುವ ಈ ವಿಡಿಯೋ ಲಕ್ಷಾಂತರ ಬಾರಿ ವೀಕ್ಷಿಸಲ್ಪಟ್ಟಿದ್ದು, ಸಾವಿರಾರು ಕಾಮೆಂಟ್ಗಳು ಬಂದಿವೆ. ಹಕ್ಕಿಯು ಶಾರ್ಕ್ ಮೀನನ್ನು ಕಾಲುಗಳಲ್ಲಿ ಸಿಕ್ಕಿಸಿಕೊಂಡು ಹೊತ್ತೊಯ್ಯುತ್ತಿರುವ ದೃಶ್ಯ ನೆಟ್ಟಿಗರಲ್ಲಿ ಬೆರಗು ಮೂಡಿಸಿದೆ.