ದ್ವಾರಕೀಶ್ ಸರಳ, ಸಜ್ಜನಿಕೆಯ ನಟ

nrp dwarkish
ಎನ್.ಆರ್.ಪುರದ ಅಂಬೇಡ್ಕರ್ ವೃತ್ತದಲ್ಲಿ ದಿ.ದ್ವಾರಕೀಶ್ ಅವರಿಗೆ ಅಭಿನವ ಪ್ರತಿಭಾ ವೇದಿಕೆಯಿಂದ ಶ್ರದ್ಧಾಂಜಲಿ ಸಲ್ಲಿಸಲಾಯಿತು. ಆರ್.ಸತೀಶ್‌ಆಚಾರ್, ಗಿರಿರಾಜ್, ಜಿ.ಪುರುಷೋತ್ತಮ್, ನಾಗಾರ್ಜುನ್, ಮಂಜುಳಾ ಇದ್ದರು
Published on

ಎನ್.ಆರ್.ಪುರ: ದ್ವಾರಕೀಶ್ ಒಳ್ಳೆಯ ವ್ಯಕ್ತಿ, ಹಾಸ್ಯ ಪ್ರಜ್ಞೆ ಉಳ್ಳವರು ಹಾಗೂ ಕ್ರಿಯಾಶೀಲ ಕಲಾವಿದರು. ಸರಳ, ಸಜ್ಜನಿಕೆಯ ನಟ, ನಿರ್ಮಾಪಕರಾಗಿದ್ದರು ಎಂದು ಚಲನಚಿತ್ರ ಸಹ ನಿರ್ದೇಶಕ ಆರ್.ಸತೀಶ್ ಆಚಾರ್ ಹೇಳಿದರು.
ಬುಧವಾರ ಪಟ್ಟಣದ ಅಂಬೇಡ್ಕರ್ ವೃತ್ತದಲ್ಲಿ ಅಭಿನವ ಪ್ರತಿಭಾ ವೇದಿಕೆಯಿಂದ ಆಯೋಜಿಸಿದ್ದ ದ್ವಾರಕೀಶ್ ಅವರ ಶ್ರದ್ಧಾಂಜಲಿ ಕಾರ್ಯಕ್ರಮದಲ್ಲಿ ಮಾತನಾಡಿ, ದ್ವಾರಕೀಶ್ ಅವರೊಂದಿಗೆ ಒಂದೆರಡು ಚಿತ್ರದಲ್ಲಿ ಕೆಲಸ ಮಾಡಿದ್ದೇನೆ. ಪ್ರಚಂಡ ಕುಳ್ಳನೆಂದೇ ಖ್ಯಾತಿ ಪಡೆದು ಚಂದನವನದಲ್ಲಿ ತಮ್ಮದೇ ಆದ ಛಾಪನ್ನು ಮೂಡಿಸಿ ಸಿನಿಮಾ ರಂಗವನ್ನು ಅಗಲಿದ್ದಾರೆ ಎಂದರು.
ರಾಜ್ಯ ಪ್ರಶಸ್ತಿ ಪುರಸ್ಕೃತ ಕಲಾವಿದ ಅಭಿನವ ಗಿರಿರಾಜ್ ಮಾತನಾಡಿ, ದ್ವಾರಕೀಶ್ ಚಿತ್ರಗಳಲ್ಲಿ ತುಂಬಾ ಮನರಂಜನೆ ಇರುತ್ತಿತ್ತು. ನಮ್ಮ ಅಭಿನವ ಆರ್ಕೆಸ್ಟ್ರಾದಲ್ಲಿ ಗುರುಶಿಷ್ಯರು ಚಿತ್ರದ ದೊಡ್ಡವರೆಲ್ಲ ಜಾಣರೆಲ್ಲ ಹಾಸ್ಯಗೀತೆಗೆ ನೃತ್ಯ ಮಾಡಿದ್ದು ರಾಜ್ಯದೆಲ್ಲೆಡೆ ಹೆಸರುವಾಸಿಯಾಗಿತ್ತು ಎಂದು ನೆನಪಿಸಿಕೊಂಡರು.
ಕಲಾವಿದ ಪುರುಷೋತ್ತಮ್ ಮಾತನಾಡಿ, ಆಗಿನ ಕಾಲದಲ್ಲೇ ಮೊದಲು ವಿದೇಶದಲ್ಲಿ ಚಿತ್ರೀಕರಣ ಮಾಡಿದ ಶ್ರೀಮಂತ ಕಲಾವಿದ ಎಂದರು. ರಕ್ತದಾನಿ ಬಳಗದ ಅರ್ಜುನ್, ಕಿರಣ್, ಜೇಸಿ ಸಂಸ್ಥೆಯ ಅಜೇಯ್, ಸೌಂಡ್ಸ್ ಶಾಮಿಯಾನ ಸಂಘದ ಗೌರವಾಧ್ಯಕ್ಷ ನಾಗಾರ್ಜುನ್, ಕಲಾವಿದೆ ಮಂಜುಳಾ, ಗ್ರೀಷ್ಮಾ, ಗೀತಾಂಜಲಿ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net