22ಕ್ಕೆ ಡಿವಿಎಸ್‌ನಿಂದ ಮಹಿಳಾ ದಿನಾಚರಣೆ

desiya vidya samste
Published on

ಶಿವಮೊಗ್ಗ: ಡಿವಿಎಸ್ ಕಲಾ, ವಿಜ್ಞಾನ ಮತ್ತು ವಾಣಿಜ್ಯ ಕಾಲೇಜು, ರೆಡ್‌ಕ್ರಾಸ್ ಜಿಲ್ಲಾ ಘಟಕ ಹಾಗೂ ನಂಜಪ್ಪಲ್ೈಕೇರ್ ಆಸ್ಪತ್ರೆ ಆಶ್ರಯದಲ್ಲಿ ಮಾ.22ರ ಬೆಳಗ್ಗೆ 10ಕ್ಕೆ ಕುವೆಂಪು ರಂಗಮಂದಿರದಲ್ಲಿ ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆ ಹಮ್ಮಿಕೊಳ್ಳಲಾಗಿದೆ ಎಂದು ಡಿವಿಎಸ್ ಸಹಕಾರ್ಯದರ್ಶಿ ಡಾ. ಎ.ಸತೀಶ್‌ಕುಮಾರ್ ಶೆಟ್ಟಿ ಹೇಳಿದರು.

ಡಿಸಿ ಗುರುದತ್ತ ಹೆಗಡೆ ಮಹಿಳಾ ದಿನಾಚರಣೆ ಉದ್ಘಾಟಿಸುವರು. ಡಿವಿಎಸ್ ಅಧ್ಯಕ್ಷ ಕೆ.ಎನ್.ರುದ್ರಪ್ಪ ಕೊಳಲೆ ಅಧ್ಯಕ್ಷತೆ ವಹಿಸುವರು. ಸಂಪನ್ಮೂಲ ವ್ಯಕ್ತಿಗಳಾಗಿ ಸೀರೋಗ ತಜ್ಞೆ ಡಾ. ಗುಂಜನ್ ಮಲ್ಹೋತ್ರ, ದಂತ ವೈದ್ಯೆ ಡಾ. ಶಶಿಕಲಾ ಹೊನ್ನಹಳ್ಳಿ ಆಗಮಿಸುವರು ಎಂದು ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

ನಂಜಪ್ಪ ಲ್ೈಕೇರ್‌ನ ಕಾರ್ಯನಿರ್ವಹಣಾಧಿಕಾರಿ ಡಾ. ಡಿ.ಜಿ.ಅವಿನಾಶ್, ಜಿಲ್ಲಾ ರೆಡ್‌ಕ್ರಾಸ್ ಘಟಕದ ಕಾರ್ಯದರ್ಶಿ ಡಾ. ಎಸ್.ದಿನೇಶ್, ನಿರ್ದೇಶಕಿ ಡಾ. ರೇಷ್ಮಾ, ಡಿವಿಎಸ್ ಉಪಾಧ್ಯಕ್ಷ ಎಸ್.ಪಿ.ದಿನೇಶ್, ಖಜಾಂಚಿ ಬಿ.ಗೋಪಿನಾಥ್ ಭಾಗವಹಿಸುವರು ಎಂದರು.

ಕಾರ್ಯಕ್ರಮ ಸಂಯೋಜಕ ಎಚ್.ಸಿ.ಯೋಗೀಶ್ ಮಾತನಾಡಿ, ಡಾ. ಗುಂಜನ್ ಮಲ್ಹೋತ್ರ ಅವರು 2024ರ ಮಿಸೆಸ್ ಇಂಡಿಯಾ, ಅಶೋಕ ಪ್ರಶಸ್ತಿ ವಿಜೇತರೂ ಹೌದು. ಯೋಗಪಟು, ಕ್ಷೇಮ ತರಬೇತುದಾರರು, ಕ್ಯಾನ್ಸರ್ ಜಯಿಸಿದವರು. ಕಥಕ್ ನೃತ್ಯಪಟು ಆಗಿದ್ದಾರೆ. ಭಾರತೀಯ ಸೇನೆಯಲ್ಲಿ 24 ವರ್ಷ ಸೇವೆ ಸಲ್ಲಿಸಿದ್ದಾರೆ ಎಂಬುದು ವಿಶೇಷ ಎಂದರು. ಪ್ರಮುಖರಾದ ಎಸ್.ಪಿ.ದಿನೇಶ್, ಡಾ. ಎಂ.ವೆಂಕಟೇಶ್, ಎಚ್.ಸಿ.ಯೋಗೇಶ್, ಯಲ್ಲಪ್ಪ, ಡಾ. ಎಸ್.ದಿನೇಶ್ ಸುದ್ದಿಗೋಷ್ಠಿಯಲ್ಲಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net