ಅನುದಾನ ಕೊರತೆಯಿಂದ ಕಾಮಗಾರಿ ಕುಂಠಿತ

sharada puryanaik
ಮಲ್ಲಾಪುರದಲ್ಲಿ ವಾಣಿಜ್ಯ ಮಳಿಗೆಗಳು, ಮಹಿಳಾ ಸ್ವಸಹಾಯ ಸಂಘದ ಉದ್ಯೋಗ ಕಟ್ಟಡವನ್ನು ಉದ್ಘಾಟನಾ ಕಾರ್ಯಕ್ರಮದಲ್ಲಿ ಶಾಸಕಿ ಶಾರದಾ ಪೂರ‌್ಯಾನಾಯ್ಕಾ ಮಾತನಾಡಿದರು. ಬಲ್ಕಿಷ್ ಬಾನು, ಮೀನಾಕ್ಷಮ್ಮ, ಬಿ.ಎಚ್.ಲಕ್ಷ್ಮಪ್ಪ, ಚಂದ್ರಮ್ಮ ಇತರರಿದ್ದರು.
Published on

ಆಯನೂರು: ಸರ್ಕಾರದಲ್ಲಿ ಹಣದ ಕೊರತೆ ಇದೆ. ತೆರಿಗೆ ಹೆಚ್ಚಳದ ಮೂಲಕ ಕ್ರೋಡೀಕರಿಸುವ ಕೆಲಸ ಆಗುತ್ತಿದೆ. ಅನುದಾನಗಳ ಕೊರತೆಯಿಂದ ಕಾಮಗಾರಿಗಳಿಗೆ ಹಿನ್ನಡೆ ಆಗುತ್ತಿದೆ ಎಂದರು ಶಾಸಕಿ ಶಾರದಾ ಪೂರ‌್ಯಾನಾಯ್ಕಾ ಹೇಳಿದರು.

ಮಲ್ಲಾಪುರದಲ್ಲಿ ವಿಶೇಷ ಘಟಕ ಯೋಜನೆಯಡಿ 20 ಲಕ್ಷ ರೂ. ಅನುದಾನದಲ್ಲಿ ನಿರ್ಮಿಸಿರುವ ನಾಲ್ಕು ವಾಣಿಜ್ಯ ಮಳಿಗೆಗಳು ಹಾಗೂ ಮುಖ್ಯಮಂತ್ರಿ ಗ್ರಾಮ ವಿಕಾಸ ಯೋಜನೆಯಡಿ 6 ಲಕ್ಷ ರೂ. ವೆಚ್ಚದಲ್ಲಿ ನಿರ್ಮಿಸಿದ ಒಂದು ಮಹಿಳಾ ಸ್ವಸಹಾಯ ಸಂಘದ ಉದ್ಯೋಗ ಕಟ್ಟಡವನ್ನು ಬುಧವಾರ ಉದ್ಘಾಟಿಸಿ ಮಾತನಾಡಿದರು.
ಪ್ರತಿಯೊಂದು ಅಭಿವೃದ್ಧಿ ಕಾಮಗಾರಿಗಳಿಗೆ ಆರ್ಥಿಕ ಮುಗ್ಗಟ್ಟು ಉಂಟಾಗಿದೆ. ಮುಂದಿನ ದಿನಗಳಲ್ಲಿ ಗ್ರಾಮಸ್ಥರು ಸಲ್ಲಿಸಿರುವ ವಿವಿಧ ಬೇಡಿಕೆಗಳನ್ನು ಈಡೇರಿಸಲಾಗುವುದು ಎಂದರು.
ಎಂಎಲ್‌ಸಿ ಬಲ್ಕಿಷ್ ಬಾನು ಮಾತನಾಡಿ, ಜೂ.24ರಂದು ಪ್ರಮಾಣವಚನ ಕಾರ್ಯಕ್ರಮ ಇದೆ. ರಾಜಕೀಯದಲ್ಲಿ ಜಾತಿಯನ್ನು ಎಳೆದು ತರಬೇಡಿ. ಮಹಿಳೆಯರು ರಾಜಕೀಯ ಕ್ಷೇತ್ರದಲ್ಲಿ ಗುರುತಿಸಿಕೊಳ್ಳುತ್ತಿರುವುದು ಅವರ ಸಾಮರ್ಥ್ಯವನ್ನು ತೋರಿಸುತ್ತದೆ. ಈ ಹಿಂದೆ ನಾನು ಶಾರದಾ ಅವರ ಪತಿ ಪೂರ‌್ಯಾನಾಯ್ಕಾ ಅವರ ಜತೆ ಕೆಲಸ ಮಾಡಿದ್ದೆ. ಈಗ ಅವರ ಪತ್ನಿಯ ಜತೆ ಕೆಲಸ ಮಾಡುತ್ತಿರುವುದು ಸಂತೋಷ ಉಂಟುಮಾಡಿದೆ. ಇಬ್ಬರೂ ಸೇರಿ ಗ್ರಾಮಸ್ಥರ ಬೇಡಿಕೆಗಳನ್ನು ಈಡೇರಿಸುತ್ತೇವೆ ಎಂದು ಭರವಸೆ ನೀಡಿದರು.
ಮಲ್ಲಾಪುರ ಗ್ರಾಪಂ ಅಧ್ಯಕ್ಷೆ ಮೀನಾಕ್ಷಮ್ಮ, ಉಪಾಧ್ಯಕ್ಷ ಬಿ.ಎಚ್.ಲಕ್ಷ್ಮಪ್ಪ, ಸದಸ್ಯರಾದ ಚಂದ್ರಮ್ಮ, ತಿಮ್ಮಪ್ಪ, ದೀಪಾ, ರೇಣುಕಾ, ಲಕ್ಷ್ಮೀದೇವಿ, ಲೋಕೇಶ್ ನಾಯ್ಕ, ಮುಖಂಡರಾದ ಶಫಿ, ಪೀರ್‌ಸಾಬ್, ವಿಶ್ವನಾಥ್, ರಿಜ್ವಾನ್, ಜಗದೀಶ್, ಮುಕ್ತಿಯಾರ್ ಅಹಮದ್, ಪಿಡಿಒ ಮಂಜುನಾಥ್ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net