ದುಬೈ ಶೇಖ್​ಗೆ ಓರ್ವ ಯುವತಿ ಬೇಕಾಗಿದ್ದಾಳೆ... ಸ್ವಾಮಿ ಚೈತನ್ಯಾನಂದನ ವಾಟ್ಸ್​ಆ್ಯಪ್​ ಚಾಟ್​ ಲೀಕ್​! Swami Chaitanya Nanda

Swami Chaitanya Nanda
Published on

Swami Chaitanya Nanda : ಅತ್ಯಾಚಾರ ಆರೋಪ ಹೊತ್ತು ದೆಹಲಿ ಪೊಲೀಸರಿಂದ ಬಂಧನಕ್ಕೆ ಒಳಗಾಗಿರುವ ಸ್ವಾಮಿ ಚೈತನ್ಯಾನಂದ ಸರಸ್ವತಿ ಅಲಿಯಾಸ್​ ಪಾರ್ಥಸಾರಥಿ ಮಾಡಿದ್ದಾರೆ ಎನ್ನಲಾದ ಕೆಲ ಅಶ್ಲೀಲ ಚಾಟ್‌ಗಳು ಸೋರಿಕೆಯಾಗಿವೆ.

ಆರೋಪಿ ಚೈತನ್ಯಾನಂದ ಸರಸ್ವತಿ, ವಿದ್ಯಾರ್ಥಿನಿಯರಿಗೆ ಲೈಂಗಿಕ ಕಿರಕುಳ ನೀಡುತ್ತಿದ್ದ ಎಂಬುದನ್ನು ಸಾಬೀತುಪಡಿಸುವ ವಾಟ್ಸ್​ಆ್ಯಪ್​ ಚಾಟ್‌ಗಳು ಸೋರಿಕೆಯಾಗಿವೆ. 62 ವರ್ಷದ ಚೈತನ್ಯಾನಂದ ಸರಸ್ವತಿ ಅವರ ಚಾಟ್‌ಗಳಲ್ಲಿ ದುಬೈ ಶೇಖ್ ಹೆಸರು ಕೂಡ ಉಲ್ಲೇಖಿಸಲಾಗಿದೆ.

ಚೈತನ್ಯಾನಂದ ಸರಸ್ವತಿ ಮತ್ತು ಓರ್ವ ಯುವತಿ ನಡುವೆ ನಡೆದಿರುವ ಚಾಟಿಂಗ್​ ಈ ಕೆಳಕಂಡಂತಿದೆ...

ಚೈತನ್ಯಾನಂದ: ದುಬೈ ಶೇಖ್ ಓರ್ವ ಲೈಂಗಿಕ ಸಂಗಾತಿಯನ್ನು ಹುಡುಕುತ್ತಿದ್ದಾನೆ. ನಿನಗೆ ಯಾರಾದರೂ ಸ್ನೇಹಿತರಿದ್ದಾರೆಯೇ?

ಯುವತಿ: ಯಾರು ಇಲ್ಲ

ಚೈತನ್ಯಾನಂದ : ಇದು ಹೇಗೆ ಸಾಧ್ಯ? ನಿಮ್ಮ ಯಾವುದೇ ಕ್ಲಾಸ್‌ಮೇಟ್? ಅಥವಾ ಜೂನಿಯರ್ ಇದ್ದಾರೆಯೇ?

ಸ್ವಾಮೀಜಿ ಮತ್ತು ಯುವತಿ ನಡುವೆ ನಡೆದಿರುವ ಈ ಒಂದು ಚಾಟಿಂಗ್​ ಮಾನವ ಕಳ್ಳಸಾಗಣೆ ಆರೋಪಕ್ಕೆ ಕಾರಣವಾಗಿದೆ. ಸ್ವಾಮೀಜಿ, ಯುವತಿಯ ಸ್ನೇಹಿತೆಯರನ್ನು ದುಬೈಗೆ ಕಳುಹಿಸುವ ಯೋಜನೆಯನ್ನು ಇದು ಬಹಿರಂಗಪಡಿಸಿದೆ ಎಂದು ಪೊಲೀಸ್​ ಮೂಲಗಳು ತಿಳಿಸಿವೆ.

ಇನ್ನು ಅವರಿಗೆ ಸಂಬಂಧಿಸಿದ ಮತ್ತೊಂದು ಚಾಟ್‌ನಲ್ಲಿ, ಅವರು ಆತ್ಮಜೀವ ಎಂದು ಸಂಭೋದಿಸುವ (ಇದು ಮೇಲೆ ತಿಳಿಸಿದ ಅದೇ ಮಹಿಳೆಯೇ ಎಂಬುದು ಸ್ಪಷ್ಟವಾಗಿಲ್ಲ) ಯುವತಿಯನ್ನು 'ಮುದ್ದಿನ ಮಗು, ಮಗಳೇ ಗೊಂಬೆ' ಎಂದು ಸಂಬೋಧಿಸುತ್ತಿದ್ದರು ಎನ್ನಲಾಗಿದೆ. ಅಲ್ಲದೆ, ಬೆಳಗ್ಗೆ ಅಥವಾ ರಾತ್ರಿ ಎಂಬುದನ್ನು ಲೆಕ್ಕಿಸದೆ ಯಾವಾಗಲೂ ಸಂದೇಶಗಳನ್ನು ಕಳುಹಿಸುತ್ತಿದ್ದರು ಎಂದು ಹೇಳಲಾಗಿದೆ.

ಚೈತನ್ಯಾನಂದ: "ಬೇಬಿ, ವೇರ್ ಆರ್ ಯೂ? (ರಾತ್ರಿ 11:59ಕ್ಕೆ ಈ ಸಂದೇಶವನ್ನು ಕಳುಹಿಸಲಾಗಿದೆ)

* ಗುಡ್ ಮಾರ್ನಿಂಗ್ ಬೇಬಿ (ಮಧ್ಯಾಹ್ನ 12.40ಕ್ಕೆ)

* ವೈ ಆರ್ ಯೂ ಆಂಗ್ರಿ ವಿತ್ ಮಿ (ನನ್ನ ಮೇಲೆ ನಿನಗೇಕೆ ಕೋಪ)? (ಮಧ್ಯಾಹ್ನ 12.41ಕ್ಕೆ)

* ಗುಡ್ ಇವನಿಂಗ್ ಮೈ ಮೋಸ್ಟ್ ಬಿಲವ್ಡ್ ಬೇಬಿ ಡಾಟರ್ ಡಾಲ್ (ಶುಭ ಸಂಜೆ ನನ್ನ ಅತ್ಯಂತ ಪ್ರೀತಿಯ ಪುಟ್ಟ ಮಗಳು ಗೊಂಬೆ)

ಯುವತಿ: ಇಲ್ಲಿ ಮಧ್ಯಾಹ್ನ ಸರ್, ಹ್ಯಾಪಿ ಅಫ್ಟರ್‌ನೂನ್. ನೀವು ಏನಾದರೂ ತಿಂದಿದ್ದೀರಾ ಸರ್?

ಚೈತನ್ಯಾನಂದ : ವೌ, ಯೆಸ್ ಬೇಬಿ

ಇದಿಷ್ಟೇ ಅಲ್ಲದೆ, ಲೈಂಗಿಕ ಆಸೆಗೆ ಒತ್ತಾಯ ಮಾಡಿರುವ ಚಾಟ್​ ಕೂಡ ಪೊಲೀಸರಿಗೆ ಲಭ್ಯವಾಗಿದೆ.

ಯುವತಿ: ನಾನು ನಿದ್ರೆಗೆ ಹೋಗುತ್ತಿದ್ದೇನೆ, ನಾಳೆ ಕರೆ ಮಾಡುತ್ತೇನೆ.

ಚೈತನ್ಯಾನಂದ : ನೀ ನನ್ನೊಂದಿಗೆ ನಿದ್ರೆ ಮಾಡುವುದಿಲ್ಲವಾ? ಗುಡ್ ನೈಟ್. ನೀ ನನ್ನೊಂದಿಗೆ ನಿದ್ರೆ ಮಾಡುವುದಿಲ್ಲವಾ? ಮಾತನಾಡು...

ಚೈತನ್ಯಾನಂದ : ನಾನು ಕೆಲವು ಡಿಸ್ಕೋ ಡಾನ್ಸ್ ಮಾಡುತ್ತಿದ್ದೇನೆ. ನೀನು ನನ್ನೊಂದಿಗೆ ಜಾಯಿನ್ ಆಗುತ್ತೀಯಾ?

ಯುವತಿ: ವೌ ಸರ್ ಎಸ್​...

ಏನಿದು ಪ್ರಕರಣ?

ಸ್ವಾಮಿ ಚೈತನ್ಯಾನಂದ ಸರಸ್ವತಿ, ದೆಹಲಿಯ ವಸಂತ್ ಕುಂಜ್‌ನಲ್ಲಿರುವ ಶ್ರೀ ಶಾರದಾ ಇನ್‌ಸ್ಟಿಟ್ಯೂಟ್ ಆಫ್ ಇಂಡಿಯನ್ ಮ್ಯಾನೇಜ್‌ಮೆಂಟ್-ರಿಸರ್ಚ್‌ನ ಮಾಜಿ ನಿರ್ದೇಶಕರು. 17 ವಿದ್ಯಾರ್ಥಿನಿಯರ ಮೇಲೆ ಲೈಂಗಿಕ ದೌರ್ಜನ್ಯ ಮಾಡಿದ ಆರೋಪದಲ್ಲಿ ಇತ್ತೀಚೆಗೆ ಆಗ್ರದಲ್ಲಿ ಬಂಧನವಾಗಿದ್ದಾರೆ. ಅವರ ಫೋನ್‌ನಲ್ಲಿ ಕಂಡುಬಂದ ವಾಟ್ಸ್‌ಆ್ಯಪ್ ಚಾಟ್‌ಗಳು ಅವರ ಅಶ್ಲೀಲ ಮತ್ತು ದೌರ್ಜನ್ಯದ ಸ್ವರೂಪವನ್ನು ಬಹಿರಂಗಪಡಿಸಿವೆ. ಈ ಚಾಟ್‌ಗಳಲ್ಲಿ ಯುವತಿಯರಿಗೆ ಬೆದರಿಕೆ ಹಾಕಿರುವುದಲ್ಲದೆ, ವಿದೇಶ ಪ್ರವಾಸ, ಐಫೋನ್ ಮುಂತಾದ ಆಮಿಷಗಳನ್ನು ನೀಡಿ ಲೈಂಗಿಕ ಸಂಬಂಧಕ್ಕೆ ಒತ್ತಾಯ ಮಾಡಿರುವುದನ್ನು ತೋರಿಸುತ್ತವೆ.

ಪಿಜಿ ಡಿಪ್ಲೊಮಾ ಇನ್ ಮ್ಯಾನೇಜ್‌ಮೆಂಟ್ ಕೋರ್ಸ್ ಓದುತ್ತಿರುವ ಹದಿನೇಳು ವಿದ್ಯಾರ್ಥಿನಿಯರು ಅವರ ವಿರುದ್ಧ ಲೈಂಗಿಕ ಕಿರುಕುಳದ ಆರೋಪದ ಮೇಲೆ ದೂರು ದಾಖಲಿಸಿದ್ದಾರೆ. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net