

ದುಬೈ: ರಾಜಕುಮಾರಿ ಶೇಖಾ ಮಹರಾ ಸಾಮಾಜಿಕ ಮಾಧ್ಯಮದಲ್ಲಿ ಸೆನ್ಸೇಷನ್ ಆಗಿದ್ದಾರೆ. ಇತ್ತೀಚೆಗಷ್ಟೇ ವಿಚ್ಛೇದನವನ್ನು ಇನ್‌ಸ್ಟಾಗ್ರಾಮ್‌ನಲ್ಲಿ ಪ್ರಕಟಿಸುವ ಮೂಲಕ ಸಂಚಲನ ಮೂಡಿಸಿದ್ದಾರೆ. ಪತಿಗೆ ಡೈವರ್ಸ್ ಹೇಳಿದ್ದ ಶೇಖಾ ಮಹರಾ ಈಗ ' ಡೈವೋರ್ಸ್' ಎಂಬ ಸುಗಂಧ ಬ್ರಾಂಡ್ ಬಿಡುಗಡೆ ಮಾಡಿದ್ದಾರೆ.
ರಾಜಕುಮಾರಿ ಶೇಖಾ ಮಹರಾ ಅವರು ಡೈವರ್ಸ್ ಹೆಸರಿನಲ್ಲಿ ಸ್ವತಃ ಬ್ರ್ಯಾಂಡ್ನಲ್ಲಿ ತಯಾರಿಸಿದ ತನ್ನ ಹೊಸ ಸುಗಂಧ ಬ್ರಾಂಡ್ (ದುಬೈ ಪ್ರಿನ್ಸೆಸ್ ಡೈವೋರ್ಸ್ ಪರ್ಫ್ಯೂಮ್) ನ ಮೊದಲ ನೋಟವನ್ನು ಅನಾವರಣಗೊಳಿಸಿದ್ದಾರೆ. ಡೈವೋರ್ಸ್' ಎಂಬ ಹೆಸರಿನೊಂದಿಗೆ ತಯಾರಿಸಿದ ಸುಗಂಧ ದ್ರವ್ಯದ ಬಾಟಲಿಯ ಫೋಟೋವನ್ನು ಅವಳು ಇನ್‌ಸ್ಟಾಗ್ರಾಮ್‌ನಲ್ಲಿ ಪೋಸ್ಟ್ ಮಾಡಿದ ನಂತರ, ಅದು ತಕ್ಷಣವೇ ವೈರಲ್ ಆಗಿದೆ.
ಇತ್ತೀಚೆಗೆ ಈಕೆ ಪತಿಗೆ ವಿಚ್ಛೇದನ ನೀಡಿದ್ದಾಳೆ. ದುಬೈ ರಾಜಕುಮಾರಿ ಶೇಖ್ ಮಹ್ರಾ ಅವರು ತಮ್ಮ ಸ್ವಂತ ಬ್ರಾಂಡ್ 'ಮಹ್ರಾ M1' ಮೂಲಕ ಶೀಘ್ರದಲ್ಲೇ ವೈವಿಧ್ಯಮಯ ಸುಗಂಧ ಬಾಟಲಿಗಳನ್ನು ಮಾರುಕಟ್ಟೆಗೆ ತರುವುದಾಗಿ ಬಹಿರಂಗಪಡಿಸಿದ್ದಾರೆ. ಆದರೆ, ಇದರ ಬೆಲೆ ಎಷ್ಟು ಎಂಬ ವಿವರವನ್ನು ಅವರು ಬಹಿರಂಗಪಡಿಸಿಲ್ಲ.
ಶೇಖಾ ಮಹರಾ ಯಾರು? ಅವರು ದುಬೈನ ಆಡಳಿತಗಾರ ಮತ್ತು ಯುಎಇಯ ಪ್ರಧಾನ ಮಂತ್ರಿ ಶೇಖ್ ಮೊಹಮ್ಮದ್ ಬಿನ್ ರಶೀದ್ ಅಲ್ ಮಕ್ತೌಮ್ ಅವರ ಮಗಳು. ಉನ್ನತ ಶಿಕ್ಷಣವನ್ನು ಬ್ರಿಟನ್‌ನಲ್ಲಿ ಮಾಡಿದಳು.ಶೇಖಾ ಮಹರಾ ಅವರು ಮಹಿಳಾ ಸಬಲೀಕರಣಕ್ಕಾಗಿ ಶ್ರಮಿಸುತ್ತಿದ್ದಾರೆ.ಶೇಖ್ ಮಹ್ರಾ ಅವರು ದುಬೈ ಮೂಲದ ಉದ್ಯಮಿ ಶೇಖ್ ಮನಬಿನ್ ಮೊಹಮ್ಮದ್ ಅಲ್ ಮಕ್ತೌಮ್ ಅವರನ್ನು 27 ಮೇ 2023 ರಂದು ವಿವಾಹವಾದರು.
ಮದುವೆಯಾದ ಒಂದು ವರ್ಷದ ನಂತರ, ಅವರು Instagram ನಲ್ಲಿ ಪೋಸ್ಟ್ ಮಾಡಿದ್ದಾರೆ.ಮಗಳ ಜೊತೆಗಿರುವ ಮತ್ತೊಂದು ಫೋಟೋವನ್ನು ಪೋಸ್ಟ್ ಮಾಡಿ, 'ನಾವಿಬ್ಬರು ಅಷ್ಟೇ' ಎಂದು ಹೇಳಿದ್ದಾರೆ.ಈ ವರ್ಷದ ಜುಲೈನಲ್ಲಿ, ಶೇಖ್ ಮಹ್ರಾ ಅವರು ತಮ್ಮ ಪತಿಗೆ ವಿಚ್ಛೇದನ ನೀಡುವುದಾಗಿ Instagram ವೇದಿಕೆಯಲ್ಲಿ ಘೋಷಿಸಿದರು.