ದುಬೈಯಲ್ಲಿ ಗಡಿನಾಡ ಕನ್ನಡಿಗರ ಉತ್ಸವ

dubai1
Published on


ದುಬೈ:
ಗಡಿನಾಡ ಸಾಹಿತ್ಯ ಸಾಂಸ್ಕೃತಿಕ ಅಕಾಡೆಮಿ, ಯುಎಇ ದುಬೈ ಘಟಕ ಮತ್ತು ಕರ್ನಾಟಕ ಗಡಿಪ್ರದೇಶ ಅಭಿವೃದ್ಧಿ ಪ್ರಾಧಿಕಾರದ ಜಂಟಿ ಆಶ್ರಯದಲ್ಲಿ ದುಬೈನಲ್ಲಿ ಏರ್ಪಡಿಸಿದ್ದ ದುಬೈ ಗಡಿನಾಡ ಉತ್ಸವ ಸಂಭ್ರಮ ಸಡಗರದಿಂದ ನಡೆಯಿತು.
ಆಕ್ಮೇ ಸಮೂಹ ಸಂಸ್ಥೆಗಳ ಅಧ್ಯಕ್ಷ ಹರೀಶ್ ಶೇರಿಗಾರ್ ಅವರು ಗಡಿನಾಡ ಉತ್ಸವಕ್ಕೆ ಚಾಲನೆ ನೀಡಿ, ಪ್ರತಿ ವರ್ಷ ಈ ರೀತಿಯ ಉತ್ಸವದ ಮೂಲಕ ಎಲ್ಲರನ್ನು ಒಂದು ವೇದಿಕೆಯಲ್ಲಿ ಸಂಗಮ ಮಾಡುತ್ತಿರುವುದು ಪ್ರಶಂಸನೀಯ ಎಂದರು.
ಗಡಿನಾಡ ಸಾಹಿತ್ಯ ಸಾಂಸ್ಕೃತಿಕ ಅಕಾಡೆಮಿ ಯುಎಇಯ ಸಲಹ ಸಮಿತಿಯ ಅಧ್ಯಕ್ಷರಾದ ಅಶ್ರ್ ಶಾ ಮಂತೂರು ಅಧ್ಯಕ್ಷತೆ ವಹಿಸಿದ್ದರು.
ಕರ್ನಾಟಕ ಸಂಘ ಶಾರ್ಜಾದ ಅಧ್ಯಕ್ಷರಾದ ಸತೀಶ್ ಪೂಜಾರಿ, ಉದ್ಯಮಿ ಸಮಾಜ ಸೇವಕರಾದ ರೊನಾಲ್ಡೊ ಮಾರ್ಟಿಸ್, ಸಮಾಜ ಸೇವಕ ಶಿವಶಂಕರ ನೆಕ್ರಾಜೆ, ಉದ್ಯೋಗಿ ಲಿತೇಶ್ ನಾಯ್ಕಪುರ ಅವರನ್ನು ಸನ್ಮಾನಿಸಲಾಯಿತು.
ಯುಎಇಯ ಶ್ರೇಷ್ಠ ಸಂಘಟನಾ ಪುರಸ್ಕಾರವನ್ನು ಯುಎಇಯ ಕನ್ನಡ ಪರ ಸಂಸ್ಥೆಯಾದ ಯಕ್ಷಗಾನ ಅಭ್ಯಾಸ ಕೇಂದ್ರ ಯುಎಇ, ದಿ ಸ್ಪೀಚ್ ಕ್ಲಿನಿಕ್ ದುಬೈ ಇವರನ್ನು ಮಂಜೇಶ್ವರದ ಶಾಸಕರಾದ ಎ.ಕೆ.ಎಂ ಅಶ್ರ್ ಹಾಗೂ ಇನ್ನಿತರರನ್ನು ಗೌರವಿಸಲಾಯಿತು.
ಇಬ್ರಾಹಿಂ ಫಾರೂಖ್ ಕೆ.ಸಿ ರೋಡ್, ಸಂದೀಪ್ ಜೆ.ಅಂಚನ್ ಮುಲ್ಕಿ, ಶಿವರೆಡ್ಡಿ ಖ್ಯಾಡೆದ್, ರಶೀದ್ ಬಾಯಾರ್, ಅಯೂಬ್ ಅಟ್ಟೆಗೋಳಿ, ಸಿದ್ಧಿಖ್ ಅಜ್ಮಾನ್, ರಿಯಾಝ್ ಅಹಮ್ಮದ್ ಗುಲ್ ಫರಾಸ್, ಹನುಮಪ್ರಸಾದ್ ತಂಗಿರಾಳ, ಆಸ್ಿ ಮೇಲ್ಪರಂಬ, ಅಬ್ದುಲ್ಲ ಕಾಂಡೆಲ್ ಪಚ್ಚಂಬಳ, ಮುನೀರ್ ಪಾರ ಕುೂಣೂರು, ಸಿರಾಜ್ ಗುದುರು ಮುಂತಾದವರು ಉಪಸ್ಥಿತರಿದ್ದರು.
ವಿಜಯ ಕುಮಾರ್ ಶೆಟ್ಟಿ ಗಾಣದ ಮೂಲೆ ಸ್ವಾಗತಿಸಿದರು. ಅಶ್ರ್ ಪಿ.ಪಿ.ಬಾಯಾರ್ ವಂದಿಸಿದರು.
ನಾನಾ ತಂಡಗಳಿಂದ ಜಾನಪದ ನೃತ್ಯ, ಭರತನಾಟ್ಯ, ತಿರುವಾದಿರಕಳಿ, ಕೊಲ್ ಕ್ಕಲಿ, ಒಪ್ಪನ, ದ್ ಮುಟ್ಟು, ಯಕ್ಷಗಾನ ಭಾಗವತಿಕೆ, ಗಾಯಕಿ ಪುಷ್ಪ ಆರಾದ್ಯ ಅವರಿಂದ ಕಾರ್ಯಕ್ರಮ ನಡೆಯಿತು.

ಸಮಾರೋಪ:
ಸಮಾರೋಪ ಸಮಾರಂಭ ಮತ್ತು ಪ್ರಶಸ್ತಿ ಪ್ರದಾನ ಸಮಾರಂಭವನ್ನು ಉದ್ಘಾಟಿಸಿದ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷರಾದ ಶಿವಾನಂದ ತಗಡೂರು, ಮರಳುಗಾಡಿನ ದೇಶವಾದ ದುಬೈನಲ್ಲಿ ಕನ್ನಡದ ಮನಸ್ಸುಗಳು ಒಟ್ಟಾಗಿ ಸೇರಿ ಸಂಭ್ರಮಿಸುವುದೇ ಗಡಿ ಉತ್ಸವದ ಸಾರ್ಥಕ ಕ್ಷಣ ಎಂದು ಹೇಳಿದರು.
ಕೇರಳದ ಮಂಜೇಶ್ವರ ಶಾಸಕ ಎ. ಕೆ.ಎಂ ಅಶ್ರ್, ಸಮಾಜ ಸೇವಕರಾದ ಕೆಕೆ ಶೆಟ್ಟಿ , ಅಬುದಾಬಿಯ ಇಂಡಿಯನ್ ಸೋಶಿಯಲ್ ಹಾಗೂ ಕಲ್ಚರಲ್ ಸೆಂಟರಿನ ನೂತನ ಅಧ್ಯಕ್ಷ ಮಿತ್ರಂಪಾಡಿ ಜಯರಾಮ ರೈ ಅವರನ್ನು ಸನ್ಮಾನಿಸಲಾಯಿತು.
2024 ನೇ ಸಾಲಿನ ದುಬೈ ಗಡಿನಾಡ ರತ್ನ ಪ್ರಶಸ್ತಿ ಪುರಸ್ಕೃತರಾದ ಯುಎಇಯ ಕೆ. ಎನ್.ಆರ್.ಐ ಪಾರಂ ಅಧ್ಯಕ್ಷ ಪ್ರವೀಣ್ ಕುಮಾರ್ ಶೆಟ್ಟಿ ವಕ್ವಾಡಿ, ಸಾಂಸ್ಕೃತಿಕ ಸಂಘಟಕ ಜೇಮ್ಸ್ ಮೆಂಡೋನ್ಸ, ಕುನಿಲ್ ಸಮೂಹ ಶಿಕ್ಷಣ ಸಂಸ್ಥೆಗಳ ಅಧ್ಯಕ್ಷ ಡಾ.ಫಕ್ರುದ್ಧೀನ್ ಕುನಿಲ್, ಕಲಾಪೋಷಕ ಮಹಾಬಲೇಶ್ವರ ಭಟ್ ಎಡಕ್ಕಾನ , ಯುಎಇ ಅಲ್‌ಬಾಕ್ ಗೋಲ್ಡ್ ಎಂಡ್ ಡೈಮಂಡ್ ಸಂಸ್ಥೆಯ ಆಡಳಿತ ನಿರ್ದೇಶಕ ಯೂಸ್ ಉಪ್ಪಳ, ದುಬೈ ಆಸ್ಟರ್ ಡಿ.ಎಂ ಹೆಲ್ತ್ ಕೇರ್‌ನ ಸಹಾಯಕ ಜನರಲ್ ಮೇನೇಜರ್ ಬಶೀರ್ ಬಂಟ್ವಾಳ್ ಅವರುಗಳಿಗೆ ದುಬೈನ ಬ್ಯುಸಿನೆಸ್ ಗೇಟ್ ಹಾಗೂ ವೂಮನ್ ಸರ್ಕಲ್ ಸಂಸ್ಥಾಪಕಿ ಲೈಲಾ ರಹಲ್ ಅಲ್ ಅತ್ಫಾನಿ, ಇಕ್ಬಾಲ್ ಅಬತೂರು ಮತ್ತು ಮಲಯಾಳಂ ಚಿತ್ರ ನಿರ್ದೇಶಕ ತುಳಸಿದಾಸ್ ಪ್ರಶಸ್ತಿ ಪ್ರದಾನ ಮಾಡಿದರು.
ಗಡಿನಾಡ ಸಾಹಿತ್ಯ ಸಾಂಸ್ಕೃತಿಕ ಅಕಾಡೆಮಿ ಯುಎಇ ಘಟಕದ ಅಧ್ಯಕ್ಷ ಇಬ್ರಾಹಿಂ ಖಲೀಲ್ ಅರಿಮಲೆ ಅಧ್ಯಕ್ಷತೆ ವಹಿಸಿದ್ದರು.
ಯುಎಇ, ಕೆಎಂಸಿಸಿಯ ರೂವಾರಿ ಯಾಹ್ಯಾ ತಳಂಗೆರೆ, ಗಡಿನಾಡ ಸಾಹಿತ್ಯ ಸಾಂಸ್ಕೃತಿಕ ಅಕಾಡೆಮಿ ಕಾಸರಗೋಡು ಘಟಕದ ಅಧ್ಯಕ್ಷರಾದ ಎನ್.ಚನಿಯಪ್ಪ ನಾಯ್ಕ, ಅಬುದಾಭಿಯ ಸಮಾಜ ಸೇವಕರಾದ ಮೋನು ಅಲ್ನೂರು, ಅಲ್ ಫರ್ದನ್ ಎಕ್ಸೆಂಜ್ ನ ಆತ್ಮನಂದ ರೈ, ಮುಹಮ್ಮದ್ ರಫೀಕ್, ಯುಎಇ ಯಕ್ಷಗಾನ ಅಭ್ಯಾಸ ಕೇಂದ್ರದ ಸಂಚಾಲಕ ದಿನೇಶ್ ಶೆಟ್ಟಿ ಕೊಟ್ಟಿಂಜ, ಡಾ.ಬಸವರಾಜ ಹೊನಗಲ್, ಗಡಿನಾಡ ಸಾಹಿತ್ಯ ಸಾಂಸ್ಕೃತಿಕ ಅಕಾಡೆಮಿಯ ಜೋಸ್ೆ ಮಾತಿಯಾಸ್, ಸುಧಾಕರ ರಾವ್ ಪೇಜಾವರ , ಶೇಖ್ ಮುಜೀಬ್ ರಹಿಮಾನ್, ಮಸ್ಕಾತ್ ಘಟಕದ ಅಧ್ಯಕ್ಷರಾದ ಅಬೂಬಕ್ಕರ್ ಬೊಳ್ಳಾರ್, ಅಬ್ದುಲ್ ಸಲಾಂ ಚೇವಾರು, ಗಡಿ ಪ್ರದೇಶ ಅಭಿವೃದ್ಧಿ ಪ್ರಾಧಿಕಾರ ಸದಸ್ಯರಾದ ಎ.ಆರ್.ಸುಬ್ಬಯ್ಯಕಟ್ಟೆ, ಸಂಚಾಲಕರಾದ ಝಡ್.ಎ.ಕಯ್ಯರ್,
ಸಮಿತಿಯ ಸದಸ್ಯರಾದ ಮಂಜುನಾಥ ಕಾಸರಗೋಡು, ಸುಗಂದರಾಜ್ ಬೇಕಾಲ್ ಮತ್ತಿತರರು ಉಪಸ್ಥಿತರಿದ್ದರು.
ಅಮರ್ ದೀಪ್ ಕಲ್ಲೂರಾಯ ಸ್ವಾಗತಿಸಿದರು. ಆರತಿ ಅಡಿಗ, ವಿಘ್ನೇಶ್ ಕುಂದಾಪುರ ಕಾರ್ಯಕ್ರಮ ನಿರೂಪಿಸಿ ಇಬ್ರಾಹಿಂ ಬಾಜೂರಿ ವಂದಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net