ಡಿವೈಎಸ್ಪಿಯಿಂದ ಕಾನ್​ಸ್ಟೇಬಲ್​ಗೆ ಡಿಮೋಷನ್​​! ಕಾರಣ ಹೀಗಿದೆ ನೋಡಿ..

police
Published on

ಲಖನೌ: ಮಹಿಳಾ ಪೊಲೀಸ್​ ಕಾನ್​ಸ್ಟೇಬಲ್ ಜೊತೆ ಅಕ್ರಮ ಸಂಬಂಧ ಇಟ್ಟುಕೊಂಡ ಪರಿಣಾಮ ಡಿವೈಎಸ್ಪಿಗೆ ಪೊಲೀಸ್​ ಇಲಾಖೆ ಕಾನ್​ಸ್ಟೇಬಲ್ ಆಗಿ ಡಿಮೋಷನ್​ ಕೊಟ್ಟಿದೆ. ಇದು ಉತ್ತರ ಪ್ರದೇಶದಲ್ಲಿ ನಡೆದಿದೆ.

ಕೃಪಾ ಶಂಕರ್ ಕನೌಜಿಯಾ ಅವರು ಕಾನ್‌ಸ್ಟೆಬಲ್ ಹುದ್ದೆಯಿಂದ ಹಂತ ಹಂತವಾಗಿ ಏರಿ ಡಿಎಸ್‌ಪಿ ಹುದ್ದೆಗೆ ಏರಿದದ್ದರು. ಆದರೆ ಮೂರು ವರ್ಷದ ಹಿಂದೆ ಮಹಿಳಾ ಕಾನ್​ಸ್ಟೇಬಲ್ ಜೊತೆ ವಿವಾಹೇತರ ಸಂಬಂಧದಲ್ಲಿ ರೆಡ್ ಹ್ಯಾಂಡ್ ಆಗಿ ಸಿಕ್ಕಿಬಿದ್ದಿದ್ದರು.

ಘಟನೆಯ ವೇಳೆ ಅವರು ಉನ್ನಾವೊದಲ್ಲಿ ಸರ್ಕಲ್ ಇನ್ಸ್​ಪೆಕ್ಟರ್​ ಆಗಿ ಕೆಲಸ ಮಾಡುತ್ತಿದ್ದರು. ಕೌಟುಂಬಿಕ ಕಾರಣ ನೀಡಿ ಎಸ್ಪಿ ಅನುಮತಿ ಪಡೆದು ರಜೆ ತೆಗೆದುಕೊಂಡಿದ್ದರು. ಮನೆಗೆ ಹೋಗುವ ಬದಲು ಕಾನ್ಪುರದ ಹೊಟೇಲ್‌ಗೆ ಮಹಿಳಾ ಪೇದೆಯೊಂದಿಗೆ ತೆರಳಿದ್ದರು

ಕನೌಜಿಯಾ ಅವರ ಫೋನ್ ಲಭ್ಯವಾಗದ ಕಾರಣ, ಅವರ ಪತ್ನಿ ಉನ್ನಾವ್ ಎಸ್ಪಿಯನ್ನು ಸಂಪರ್ಕಿಸಿದ್ದರು. ಪೊಲೀಸರು ತಕ್ಷಣ ಈ ಬಗ್ಗೆ ತನಿಖೆ ಆರಂಭಿಸಿದರು. ಕಾನ್ಪುರದ ಹೋಟೆಲ್‌ನಲ್ಲಿ ಆತನ ಫೋನ್‌ನ ಕೊನೆಯ ಸ್ಥಳವನ್ನು ಪತ್ತೆ ಮಾಡಿದರು. ತಕ್ಷಣ ಅಲ್ಲಿಗೆ ಬಂದು ಇಬ್ಬರನ್ನೂ ರೆಡ್​​ ಹ್ಯಾಂಡ್​ ಆಗಿ ಹಿಡಿದರು.

ಇದನ್ನು ಗಂಭೀರವಾಗಿ ಪರಿಗಣಿಸಿದ ಲಖನೌ ವ್ಯಾಪ್ತಿಯ ಅಂದಿನ ಐಜಿಪಿ ತನಿಖೆಗೆ ಆದೇಶಿಸಿದ್ದರು. ಅಶಿಸ್ತಿನ ವಿರುದ್ಧ ಕಠಿಣ ಕ್ರಮಕ್ಕೆ ಶಿಫಾರಸು ಮಾಡಲಾಗಿತ್ತು.

ಇತ್ತೀಚೆಗಷ್ಟೇ ತನಿಖೆಯನ್ನು ಪೂರ್ಣಗೊಳಿಸಿದ ಪೊಲೀಸರು, ಅವರನ್ನು ಗೋರಖ್‌ಪುರ ಬೆಟಾಲಿಯನ್‌ಗಳ 'ಪ್ರಾಂತೀಯ ಸಶಸ್ತ್ರ ಕಾನ್‌ಸ್ಟಾಬ್ಯುಲರಿ'ಯಲ್ಲಿ ಕಾನ್‌ಸ್ಟೆಬಲ್ (ಡಿಎಸ್‌ಪಿ ಹುದ್ದೆಯಿಂದ ಕೆಳಗಿಳಿಸಲಾಯಿತು) ಎಂದು ನಿಯೋಜಿಸಿ ಆದೇಶಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net