

ಮುಂಬೈ: ನಟಿ ಉರ್ಫಿ ಜಾವೇದ್ ಶನಿವಾರ ರಾತ್ರಿ ಮುಂಬೈನ ಐಷಾರಾಮಿ ರೆಸ್ಟೋರೆಂಟ್‌ನಿಂದ ಹೊರಬಂದಾಗ ತಪ್ಪುಹೆಜ್ಜೆಗಳನ್ನು ಹಾಕುತ್ತಿದ್ದಳು. ಕುಡಿದ ಮತ್ತಿನಲ್ಲಿದ್ದ ನಟಿಯ ವಿಡಿಯೋ ಇದೀಗ ಅಂತರ್ಜಾಲದಲ್ಲಿ ವೈರಲ್ ಆಗಿದೆ.
ಉರ್ಫಿ ತನ್ನ ಸ್ನೇಹಿತರೊಂದಿಗೆ ಪಾರ್ಟಿ ಮಾಡಿದ್ದಾರೆ. ತಡರಾತ್ರಿ ಎಲ್ಲ ಮುಗಿದ ಮೇಲೆ ರೆಸ್ಟಾರೆಂಟ್‌ನಿಂದ ಹೊರಬರುತ್ತಿದ್ದಂತೆ ಫೋಟೋ ಮತ್ತು ವೀಡಿಯೋಗ್ರಾಫರ್ ಗಳು ತಡೆದಿದ್ದಾರೆ. ಬಳಿಕ ತನ್ನ ಕಾರಿನ ಕಡೆ ತೆರಳಲು ತಪ್ಪುಹೆಜ್ಜೆಗಳನ್ನಿಡುತ್ತ ಸಾಗಿದ್ದಾಳೆ. ಆಗ ಶೇಕ್ ಆಗುತ್ತಿದ್ದುದನ್ನು ಕಂಡ ಗೆಳೆಯ ಮತ್ತು ಗೆಳತಿ ಬುಜ ಹೊಡಿದುಕೊಂಡು ಹೋಗಿ ಕಾರಲ್ಲಿ ಕುಳ್ಳಿರಿಸಿದ್ದಾರೆ.
ವೀಡಿಯೋದಲ್ಲಿರುವಂತೆ ಆಕೆ ಗುಲಾಬಿ ಬಣ್ಣದ ಮಿನಿ ಡ್ರೆಸ್ ಮತ್ತು ಹೈ ಹೀಲ್ಸ್ ಚಪ್ಪಲಿ ಧರಿಸಿ ತನ್ನ ಗೆಳತಿಯರೊಂದಿಗೆ ರೆಸ್ಟೋರೆಂಟ್‌ನಿಂದ ಹೊರಬರುವುದನ್ನು ಕಾಣಬಹುದು. ಅವಳು ತನ್ನ ಸಮತೋಲನವನ್ನು ಕಾಯ್ದುಕೊಳ್ಳಲು ಹೆಣಗಾಡಿದ್ದಾಳೆ. ಅಂತಿಮವಾಗಿ ತನ್ನ ಕಾರನ್ನು ತಲುಪುವ ಮೊದಲು ಅನೇಕ ಬಾರಿ ಎಡವಿದ್ದಾಳೆ.
ಉರ್ಫಿ ಛಾಯಾಗ್ರಾಹಕ ಮತ್ತು ವೀಡಿಯೋಗ್ರಾಫರ್ಗಳೊಂದಿಗೆ ಮುಗುಳ್ನಗುತ್ತಾ ಅಸ್ಪಷ್ಟವಾಗಿ ಸಂವಹನ ನಡೆಸುತ್ತಿದ್ದಾಗ ಆಕೆಯ ಸ್ನೇಹಿತರು ಬಿಗಿಯಾಗಿ ಹಿಡಿದುಕೊಂಡು ಕರೆದೊಯ್ಯುತ್ತಾರೆ. "ನನ್ನ ಕಾರು ಎಲ್ಲಿದೆ? ನಾನು ಕುಡಿದಿದ್ದೇನೆ," ಎಂದು ಆಕೆ ಹೇಳಿದ್ದಾಳೆ.
ಕಳೆದ ಶನಿವಾರ(ಜೂ.29) ರಾತ್ರಿ ಸಹ ಉರ್ಫಿ ಕುಡಿದ ಅಮಲಿನಲ್ಲಿ ಮುಂಬೈನ ಪಬ್‌ನಿಂದ ನಿರ್ಗಮಿಸುತ್ತಿರುವುದನ್ನು ವೀಡಿಯೋ ದೃಢೀಕರಿಸಿತ್ತು. ಆಗ ಆಕೆ "ಬಹುತ್ ಪಿ ರಾಖೀ ಹೈ" ಎಂದು ತಪ್ಪೊಪ್ಪಿಕೊಂಡಿದ್ದಳು.
ಉರ್ಫಿ ಇತ್ತೀಚೆಗೆ ಏಕ್ತಾ ಕಪೂರ್ ಅವರ ಲವ್ ಸೆಕ್ಸ್ ಔರ್ ಧೋಖಾ 2 ನೊಂದಿಗೆ ಬಾಲಿವುಡ್‌ಗೆ ಎಂಟ್ರಿಕೊಟ್ಟಿದ್ದಾಳೆ. ನಟಿ ಬಿಗ್ಬಾಸ್ ರಿಯಾಲಿಟಿ ಶೋನಲ್ಲಿ ಕಾಣಿಸಿಕೊಳ್ಳಲಿದ್ದಾರೆ ಎನ್ನಲಾಗುತ್ತಿದೆ.