

ಒಡಿಶಾ: ಮನೆಯಲ್ಲಿ, ಜಿಮ್, ಪಾರ್ಕ್ನಲ್ಲಿ ಯೋಗ ಮಾಡಿದರೆ ಈಗ ರಸ್ತೆಯಲ್ಲಿ ನಿಲ್ಲಿಸಿರುವ ಸೈನ್ ಬೋರ್ಡ್ ಮೇಲೆ ಪುಷ್ಅಪ್ಸ್ ಮಾಡುತ್ತಿರುವ ವಿಡಿಯೋವೊಂದು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.
ಒಡಿಶಾದ ಸಂಬಲ್ಪುರದಲ್ಲಿ ಕುಡಿದ ಅಮಲಿನಲ್ಲಿದ್ದ ವ್ಯಕ್ತಿಯೊಬ್ಬ ಸೈನ್ ಬೋರ್ಡ್ (ಸೂಚನಾ ಫಲಕ) ಮೇಲೆ ಪುಷ್ಅಪ್ಸ್ ಮಾಡುತ್ತಿರುವ ವಿಡಿಯೋ ವೈರಲ್ ಆಗಿದೆ.
ವಿಡಿಯೋದಲ್ಲಿ ಏನಿದೆ?: ಕುಡುಕ ವ್ಯಕ್ತಿಯು ಸೈನ್‌ಬೋರ್ಡ್‌ನಲ್ಲಿ ಪುಷ್ಅಪ್ಸ್ ಮಾಡುತ್ತಾನೆ. ಈ ಘಟನೆ ನೋಡಿ ದಾರಿಹೋಕರು ಬೆಚ್ಚಿಬಿದ್ದರು. ಈ ವಿಡಿಯೋವನ್ನು ಸೆರೆ ಹಿಡಿದು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ.
'ಎಲ್ಲರೂ ಕುಡಿದಿದ್ದಾರೆ ಅಂದುಕೊಳ್ಳುತ್ತಾರೆ.. ಆದರೆ ಜನಪ್ರಿಯರಾಗಲು ಈ ಸಾಧನೆ ಮಾಡುತ್ತಿದ್ದಾರೆ, ಇದು ಅಪಾಯಕಾರಿ' ಎಂದು ನೆಟ್ಟಿಗರು ಕಾಮೆಂಟ್ ಮಾಡುತ್ತಿದ್ದಾರೆ. ಪೊಲೀಸರಿಗೆ ದೂರು ನೀಡುವ ಮುನ್ನವೇ ವ್ಯಕ್ತಿ ಸ್ಥಳದಿಂದ ಪರಾರಿಯಾಗಿದ್ದಾನೆ.