

ತಿರುವನಂತಪುರ: ( Mother ) ಮದ್ಯದ ಅಮಲಿನಲ್ಲಿದ್ದ ಮಗ, ತನ್ನ ತಾಯಿಯನ್ನು ತುಳಿದು ಕೊಂದಿದ್ದಾನೆ. ಈ ಘಟನೆ ತಿರುವನಂತಪುರದ ತೆಕ್ಕಡದಲ್ಲಿ ನಡೆದಿದೆ.
ಮೃತರನ್ನು ತೆಕ್ಕಡ ಮೂಲದ 85 ವರ್ಷದ ಓಮನಾ ಎಂದು ಗುರುತಿಸಲಾಗಿದೆ. ಈಕೆ ಮಗ ಮಣಿಕಂದನ್ನನ್ನು ವಟ್ಟಪ್ಪರ ಪೊಲೀಸರು ವಶಕ್ಕೆ ಪಡೆದು ತನಿಖೆ ನಡೆದಿತ್ತಿದ್ದಾರೆ.
ಪೊಲೀಸರು ಹೇಳುವ ಪ್ರಕಾರ, ನಿನ್ನೆ ರಾತ್ರಿ (ಮೇ 20) ರಂದು 10.30 ರ ಸುಮಾರಿಗೆ ಮಣಿಕಂದನ್ ಮದ್ಯದ ಅಮಲಿನಲ್ಲಿದ್ದನು. ಕುಡಿದ ಮತ್ತಿನಲ್ಲಿದ್ದ ಮಣಿಕಂದನ್ ತನ್ನ ತಾಯಿಯನ್ನು ಒದ್ದಿದ್ದಾನೆ. ಮಗನಿಂದ ಥಳಿತಕ್ಕೊಳಗಾದ ಓಮನಾಳನ್ನು ಸ್ಥಳೀಯರು ತಕ್ಷಣ ತಿರುವನಂತಪುರಂ ವೈದ್ಯಕೀಯ ಕಾಲೇಜು ಆಸ್ಪತ್ರೆಗೆ ಕರೆದೊಯ್ಯಲಾಯಿತು, ಆದರೆ ರಾತ್ರಿ 11 ಗಂಟೆ ಸುಮಾರಿಗೆ ಅವರು ಸಾವನ್ನಪ್ಪಿದರು.
ಮಣಿಕಂದನ್ ಹೊಡೆದ ಪರಿಣಾಮ ಓಮನ ಮೂಳೆಗಳು ಮುರಿದಿವೆ ಎಂದು ವೈದ್ಯರು ತಿಳಿಸಿದ್ದಾರೆ. ಈಕೆ ಮಗ ನಿರಂತರವಾಗಿ ತನ್ನ ತಾಯಿಯನ್ನು ಹೊಡೆಯುತ್ತಿದ್ದನೆಂದು ನೆರೆಹೊರೆಯವರು ಪೊಲೀಸರಿಗೆ ತಿಳಿಸಿದ್ದಾರೆ.