ಕುಡಿದ ಮತ್ತಿನಲ್ಲಿ 28 ದಿನಗಳ ಕಂದಮ್ಮನ ಮೇಲೆ ಮಲಗಿದ ತಂದೆ: ಉಸಿರುಗಟ್ಟಿ ಮಗು ಸಾವು | Toddler

Toddler
Published on

Toddler: ಕುಡಿದ ಮತ್ತಿನಲ್ಲಿ ತಂದೆ ಆಕಸ್ಮಿಕವಾಗಿ ಮಗು ಮೇಲೆ ಬಿದ್ದ ಕಾರಣ 28 ದಿನಗಳ ಹೆಣ್ಣು ಮಗು ಉಸಿರುಗಟ್ಟಿ ಸಾವನ್ನಪ್ಪಿ ದುರಂತ ಖಾನಾಪುರದ ಸುಭಾಷನಗರದಲ್ಲಿ ನಡೆದಿದೆ. ಮರುದಿನ ಬೆಳಿಗ್ಗೆ 6 ಗಂಟೆ ಸುಮಾರಿಗೆ ಎದ್ದಾಗ ಮಗು ಅಳುತ್ತಿರಲಿಲ್ಲ ಮತ್ತು ಪ್ರತಿಕ್ರಿಯಿಸುತ್ತಿರಲಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ.

ಖಾನಾಪುರದ ಸುಭಾಷನಗರದಲ್ಲಿ ಮದ್ಯವ್ಯಸನಿಯಾಗಿದ್ದ ಆರೋಪಿ ಅಲ್ಲಕುಂತ ಶೇಖರ್ ಬೆಳಿಗ್ಗೆ 6 ಗಂಟೆಗೆ ಎಚ್ಚರವಾದ ನಂತರ ಮಗು ಅಳಲು ಅಥವಾ ಚಲಿಸಲು ಸಾಧ್ಯವಾಗದಿದ್ದಾಗ ಮಗು ಸತ್ತಿದೆ ಎಂದು ತಿಳಿದಿದ್ದಾನೆ. ಆತನ ವಿರುದ್ಧ ಪ್ರಕರಣ ದಾಖಲಿಸಿ ಪೊಲೀಸರು ಬಂಧಿಸಿದ್ದಾರೆ.

ಮಗುವನ್ನು ಬಟ್ಟೆಯಲ್ಲಿ ಸುತ್ತಿಟ್ಟಿದ್ದರಿಂದ ಶೇಖರ್ ಅವಳನ್ನು ಗಮನಿಸದೆ ಎಂದಿನಂತೆ ಹಾಸಿಗೆಯ ಮೇಲೆ ಮಲಗಿದನು. ನಂತರ ಸುಮಾರು 7 ಗಂಟೆಗಳ ಕಾಲ ಆಕೆಯ ಮೇಲೆ ಮಲಗಿದಾಗ ಮಗು ಉಸಿರುಗಟ್ಟಿ ಸಾವನ್ನಪ್ಪಿದೆ. ಶೇಖರ್ ಪತ್ನಿ ರಾಜಮಣಿ ಎಚ್ಚರವಾದಾಗ ತನ್ನ ಮಗು ತನ್ನ ಗಂಡನ ನಿರ್ಲಕ್ಷ್ಯದಿಂದ ಸಾವನ್ನಪ್ಪಿದೆ ಎಂದು ತಿಳಿದಿದ್ದಾರೆ.

ಮಗುವಿನ ತಾಯಿ ರಾಜಮಣಿ ನೀಡಿದ ದೂರಿನ ಆಧಾರದ ಮೇಲೆ, ದಿನಗೂಲಿ ಕಾರ್ಮಿಕ ಶೇಖರ್ ವಿರುದ್ಧ ಪ್ರಕರಣ ದಾಖಲಿಸಲಾಗಿದೆ. ಪೊಲೀಸರು ತನಿಖೆಯನ್ನು ನಡೆಸುತ್ತಿದ್ದಾರೆ. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net