

ಬೆಂಗಳೂರು: ಡ್ರಗ್ಸ್ ಮಾಫಿಯಾ ಪ್ರಕರಣ ಸಂಬಂಧ ಶನಿವಾರ ಸತತ ಮೂರು ತಾಸು ಸಿಸಿಬಿ ವಿಚಾರಣೆಗೊಳಪಟ್ಟು ಕಚೇರಿಯಿಂದ ಹೊರ ಬಂದ ಸಾಮಾಜಿಕ ಕಾರ್ಯಕರ್ತ ಪ್ರಶಾಂತ್ ಸಂಬರಗಿ ಕೆಲ ಮಹತ್ತರ ವಿಚಾರಗಳನ್ನು ಮಾಧ್ಯಮಗಳ ಬಳಿ ಹಂಚಿಕೊಂಡರು.
ಶುಕ್ರವಾರ ಮತ್ತೆ ವಿಚಾರಣೆಗೆ ಬರುವಂತೆ ಸಿಸಿಬಿ ಅಧಿಕಾರಿಗಳು ಹೇಳಿದ್ದಾರೆ. ಈ ಸಂಬಂಧ ಮತ್ತೆ ನೋಟಿಸ್ ಕೊಡ್ತಾರಂತೆ. ಈಗ ಕೆಲ ಮಹತ್ವದ ಸಾಕ್ಷಿಗಳನ್ನು ನೀಡಿದ್ದೇನೆ. ಶಾಸಕ ಜಮೀರ್ ಅಹ್ಮದ್ ಕುರಿತಾಗಿಯೂ ಕೆಲ ಮಾಹಿತಿ ನೀಡಲಾಗಿದೆ. ನಾನು ಯಾವುದೇ ರಾಜಕೀಯ ಪಕ್ಷಕ್ಕೆ ಸಂಬಂಧಿಸಿದವನಲ್ಲ ಎಂದರು. ಇದನ್ನೂ ಓದಿರಿ ಕೊಲಂಬೋ ಪ್ರವಾಸ; ಜಮೀರ್ ಹೇಳಿಕೆಗೆ ತಿರುಗೇಟು ಕೊಟ್ಟ ಎಚ್ಡಿಕೆ
ಶುಕ್ರವಾರ ಮತ್ತೊಮ್ಮೆ ವಿವಾರಣೆಗೆ ಬರುವಾಗ ಕೆಲವೊಂದು ಸಾಕ್ಷಿಗಳನ್ನು ತರಲು ಹೇಳಿದ್ದಾರೆ. ವಿಚಾರಣೆಯಲ್ಲಿ ಪ್ರಸ್ತಾಪವಾಗಿ ಗೌಪ್ಯ ವಿಚಾರದ ಕುರಿತು ಹೊರಗೆ ಬಹಿರಂಗ ಮಾಡಬೇಡಿ ಎಂದು ಸಿಸಿಬಿ ಹೇಳಿದೆ. ಕೇಸ್ ತನಿಖಾ ಹಂತದಲ್ಲಿರುವ ಕಾರಣ ಮಾಧ್ಯಮಗಳಿಗೆ ಕೆಲವೊಂದು ವಿಚಾರವನ್ನು ಹೇಳಲು ಆಗಲ್ಲ. ನನ್ನ ಟಾರ್ಗೆಟ್ ಶ್ರೀಲಂಕಾದಲ್ಲಿ ಕ್ಯಾಸಿನೋ ವ್ಯವಹಾರ ನಡೆಸುತ್ತಿದ್ದ ಶೇಖ್ ಫಾಸಿಲ್ ಮಾತ್ರ. ಆತನನ್ನು ವಿಚಾರಣೆಗೆ ಒಳಪಡಿಸಿದರೆ ಜಮೀರ್ ವ್ಯವಹಾರ ಗೊತ್ತಾಗತ್ತೆ ಎಂದು ಸಂಬರಗಿ ಹೇಳಿದರು.
ಸ್ಯಾಂಡಲ್ವುಡ್ಗೂ ಡ್ರಗ್ಸ್ ಮಾಫಿಯಾಗೂ ನಂಟಿದೆ ಎಂದಿದ್ದ ಸಾಮಾಜಿಕ ಕಾರ್ಯಕರ್ತ ಪ್ರಸಾಂತ್ ಸಂಬರಗಿ , ಪದೇಪದೆ ನಟಿ ಸಂಜನಾ ಗಲ್ರಾನಿ ವಿರುದ್ಧ ಮತ್ತು ಶಾಸಕ ಜಮೀರ್ ಅಹ್ಮದ್ರ ಆಪ್ತ ಶೇಖ್ ಫಾಸಿಲ್ನ ವ್ಯವಹಾರದ ಬಗ್ಗೆ ಆರೋಪ ಮಾಡಿದ್ದರು. ಈ ಬಗ್ಗೆ ಮಾಹಿತಿ ಕೇಳಲು ಸಿಸಿಬಿ ಶನಿವಾರ ಬೆಳಗ್ಗೆ ಪ್ರಶಾಂತ್ ಸಂಬರಗಿಯನ್ನು ವಿಚಾರಣೆಗೆ ಒಳಪಡಿಸಿತ್ತು.