

ಬೆಂಗಳೂರು: ಭೂಗತ ಲೋಕದ ಮಾಜಿ ಡಾನ್ ದಿ. ಮುತ್ತಪ್ಪ ರೈ ಅವರ ಪುತ್ರ ರಿಕ್ಕಿರೈ ಇಂದು(ಬುಧವಾರ) ಬೆಳಗ್ಗೆ ಸಿಸಿಬಿ ಕಚೇರಿಗೆ ಹಾಜರಾದರು.
ಮಂಗಳವಾರ ಬೆಳಗ್ಗೆ 6.30ಕ್ಕೆ ಸರ್ಚ್ ವಾರೆಂಟ್ನೊಂದಿಗೆ ಬಿಡದಿಗೆ ಬಂದ 20ಕ್ಕೂ ಹೆಚ್ಚು ಸಿಸಿಬಿ ಸಿಬ್ಬಂದಿ, ಸತತ 8 ತಾಸು ಮುತ್ತಪ್ಪ ರೈ ಮನೆಯವರನ್ನು ವಿಚಾರಣೆಗೆ ಒಳಪಡಿಸಿದ್ದರು. ಬೆಂಗಳೂರಿನ ಸದಾಶಿವನಗರ ಮನೆ ಮೇಲೂ ಸಿಸಿಬಿ ರೇಡ್ ಆಗಿತ್ತು. ದಾಳಿ ವೇಳೆ ರಿಕ್ಕಿ ರೈ ಮೊಬೈಲ್, ಲ್ಯಾಪ್ಟಾಪ್ ಹಾಗೂ ಕೆಲ ದಾಖಲಾತಿಗಳನ್ನ ಜಪ್ತಿ ಮಾಡಲಾಗಿದೆ. ಇಂದು ವಿಚಾರಣೆಗೆ ಹಾಜರ್ ಆಗುವಂತೆ ನಿನ್ನೆಯೇ ರಿಕ್ಕಿ ರೈಗೆ ಸಿಸಿಬಿ ನೋಟಿಸ್ ಜಾರಿ ಮಾಡಿತ್ತು. ಈ ಹಿನ್ನೆಲೆಯಲ್ಲಿ ಇಂದು ಬೆಳಗ್ಗೆ ತನ್ನ ವಕೀಲರೊಂದಿಗೆ ಸಿಸಿಬಿ ಕಚೇರಿಗೆ ರಿಕ್ಕಿ ರೈ ಆಗಮಿಸಿದ್ದಾರೆ.