ಡ್ರಗ್ಸ್​ ಕೇಸ್​; ಸಿಸಿಬಿ ವಿಚಾರಣೆಗೆ ಬಂದ ದಿಗಂತ್​

Diganth - Final
Published on

ಬೆಂಗಳೂರು: ಡ್ರಗ್ಸ್​ ಕೇಸ್​ ಸಂಬಂಧ ಮತ್ತೊಮ್ಮೆ ವಿಚಾರಣೆ ಎದುರಿಸಲು ನಟ ದಿಗಂತ್​ ಮಂಚಾಲೆ ಬುಧವಾರ ಬೆಳಗ್ಗೆ 11.20ರ ಸುಮಾರಿಗೆ ಚಾಮರಾಜಪೇಟೆಯ ಸಿಸಿಬಿ ಕಚೇರಿಗೆ ಆಗಮಿಸಿದರು.

ಸೆ.17ರಂದು ತಾರಾದಂಪತಿ ಐಂದ್ರಿತಾ ರೇ ಮತ್ತು ದಿಗಂತ್​ ಇಬ್ಬರೂ ಸಿಸಿಬಿ ವಿಚಾರಣೆ ಎದುರಿಸಿದ್ದರು. ಮತ್ತೊಂದು ಸುತ್ತಿನ ವಿಚಾರಣೆಗಾಗಿ ಬುಧವಾರ ಬೆಳಗ್ಗೆ 11ಕ್ಕೆ ಆಗಮಿಸುವಂತೆ ದಿಗಂತ್​ಗೆ ಮಾತ್ರ ಸಿಸಿಬಿ ನೋಟಿಸ್​ ಜಾರಿ ಮಾಡಿತ್ತು. ಈ ಹಿನ್ನೆಲೆಯಲ್ಲಿ ಸುಮಾರು 25 ನಿಮಿಷ ತಡವಾಗಿ ರಹಸ್ಯ ಸ್ಥಳದಿಂದ ಬಂದ ದಿಗಂತ್​, ನೇರವಾಗಿ ಸಿಸಿಬಿ ಕಚೇರಿ ಒಳಹೋದರು.

ಪ್ರಥಮ ಹಂತದ ವಿಚಾರಣೆಗೆ ನಟ ದಿಗಂತ್ ಹಾಗು ನಟಿ ಐಂದ್ರಿತಾ ರೇ ಸೆ.17ರಂದು ಹಾಜರಾಗಿದ್ದರು. ಈ ಬಾರಿ ದಿಗಂತ್​ ಒಬ್ಬರನ್ನು ಮಾತ್ರ ವಿಚಾರಣೆಗೆ ಅಧಿಕಾರಿಗಳು ಕರೆದಿದ್ದಾರೆ. ಸದ್ಯ ದಿಂಗತ್​ರನ್ನು ಎಸಿಪಿ‌ ಗೌತಮ್, ಇನ್​ಸ್ಪೆಕ್ಟರ್​ಗಳಾದ ಪುನೀತ್ ಹಾಗೂ ಮಲ್ಲೇಶ್ ಬೊಳತ್ತಿನ್ ಅವರು ವಿಚಾರಣೆ ನಡೆಸಲಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net