

ಬೆಂಗಳೂರು: ಡ್ರಗ್ಸ್ ಕೇಸ್ನಲ್ಲಿ ನ್ಯಾಯಾಂಗ ಬಂಧನಕ್ಕೊಳಪಟ್ಟ ಸ್ಯಾಂಡಲ್ವುಡ್ ನಟಿ ರಾಗಿಣಿ ದ್ವಿವೇದಿ ಪುಸ್ತಕ ಹಿಡಿದು ಜೈಲಿಗೆ ಹೋಗುತ್ತಿರುವ ದೃಶ್ಯ ವೈರಲ್ ಆಗಿದೆ.
ನಟಿಯ ಕೈಯಲ್ಲಿದ್ದ ಪುಸ್ತಕ 'ರಾಮಾಯಣ' ಎನ್ನಲಾಗುತ್ತಿದೆ. ಆಧ್ಯಾತ್ಮಿಕದಿಂದ ನೆಮ್ಮದಿ ಕಂಡುಕೊಳ್ಳಲು ಮತ್ತು ಜೈಲಿನಲ್ಲಿ ಕಾಲ ಕಳೆಯಲು ರಾಗಿಣಿ 'ರಾಮಾಯಣ' ಪುಸ್ತಕದ ಮೊರೆಹೋಗಿದ್ದಾರೆ ಎಂಬ ಮಾತುಗಳೂ ಕೇಳಿಬರುತ್ತಿವೆ.
ಇತ್ತ ಮಗಳು ಡ್ರಗ್ಸ್ ಕೇಸ್ನಲ್ಲಿ ಜೈಲು ಸೇರುತ್ತಿದ್ದಂತೆ ನೊಂದ ರಾಗಿಣಿ ತಂದೆ ರಾಕೇಶ್ ಅವರು ಮನೆಯನ್ನು ಮಾರಾಟಕ್ಕಿಟ್ಟಿದ್ದಾರೆ. ನಗರದ ಜ್ಯುಡಿಶಿಯಲ್ ಲೇಔಟ್ನ ನ್ಯಾಯಾಂಗ ಬಡಾವಣೆಯ ಅನನ್ಯ ಅಪಾರ್ಟ್ಮೆಂಟ್ನಲ್ಲಿ ರಾಗಿಣಿಯ ಕನಸಿನ ಮನೆ ಇದೆ. ಮೂರು ಬಿಎಚ್ಕೆ ಮನೆಯನ್ನು 2 ಕೋಟಿ ರೂಪಾಯಿಗೆ ಸೇಲ್ಗೆ ಇಟ್ಟಿದ್ದಾರೆ.