ರಾಗಿಣಿನ‌ ಪ್ರಚಾರಕ್ಕೆ ನಾನು ಕರೆಸಿರಲಿಲ್ಲ, ಆಕೆ ಈ ರೀತಿ ಅಂತ‌ ಗೊತ್ತಿರಲಿಲ್ಲ; ನಾರಾಯಣ ಗೌಡ

ragini-dwivedi- NARAYAN GOWDA
Published on

ಚಾಮರಾಜನಗರ: ಚಿತ್ರರಂಗಕ್ಕೂ ನನಗೂ ಸಂಪರ್ಕ ಕಡಿಮೆ. ಚಿತ್ರ ನಟಿ ರಾಗಿಣಿ ದ್ವಿವೇದಿಯನ್ನ ಪ್ರಚಾರಕ್ಕೆ ನಾವು ಕರೆಸಿರಲಿಲ್ಲ. ಚಿತ್ರ ರಂಗದಲ್ಲಿ ಕೆಲಸ ಮಾಡುವ ‌ನನ್ನ ಸ್ನೇಹಿತರು ಪ್ರಚಾರಕ್ಕೆ ಕರೆಸಿದ್ದರು. ರಾಗಿಣಿ ಈ ರೀತಿ ಎಂದು ಗೊತ್ತಿರಲಿಲ್ಲ ಎಂದು ಸಚಿವ ನಾರಾಯಣ ಗೌಡ ಹೇಳಿದರು.

ಜಿಲ್ಲಾ ಪ್ರವಾಸ ಕೈಗೊಂಡಿರುವ ಸಚಿವರು ನಗರದ ಪ್ರವಾಸಿ ಮಂದಿರದಲ್ಲಿ ಸೋಮವಾರ ಸುದ್ದಿಗಾರರೊಂದಿಗೆ ಮಾತನಾಡಿದರು. ರಾಗಿಣಿ ಜತೆ ಶಿವಪ್ರಕಾಶ್ ಮೂರು ವರ್ಷ ಕೆಲಸ ಮಾಡಿದ್ದಾರೆ. ಅವರ ಹೆಸರೂ ಕೇಳಿ ಬರುತ್ತಿದೆ. ಇದರ ಬಗ್ಗೆಯೂ ನನಗೆ ಗೊತ್ತಿಲ್ಲ. ನನ್ನ ಚುನಾವಣಾ ಪ್ರಚಾರಕ್ಕೆ ಅವರನ್ನ ಕರೆಸಿರಲಿಲ್ಲ. ಅವರೇ ಪ್ರಚಾರಕ್ಕೆ ಬಂದ್ರೆ ನಾವೇನು ಮಾಡೋಕೆ ಆಗುತ್ತೆ‌ ಎಂದು ಪ್ರಶ್ನಿಸಿದರು. ಇದನ್ನೂ ಓದಿರಿ ನನಗೆ ರಾಗಿಣಿ ಯಾರೆಂದು ಗೊತ್ತಿಲ್ಲ; ಡಿಸಿಎಂ ಕಾರಜೋಳ

ನಟಿ ರಾಗಿಣಿ ಪರವಾಗಿ ನಮ್ಮ ಪಕ್ಷದಲ್ಲಿ ಯಾರೂ ಇಲ್ಲ. ಸುಮ್ಮನೆ ಸುಳ್ಳು ಸುದ್ದಿ ಹಬ್ಬಿಸುತ್ತಿದ್ದಾರೆ. ನಾಗಮಂಗಲದಲ್ಲಿ ಗಾಂಜಾ ಮಾರಾಟ ಇದ್ದರೆ ಹಿಡಿದುಕೊಡಲಿ. ಇಲ್ಲವಾದ್ರೆ ನಮಗೆ ಅಕ್ರಮ ತಡೆಯಲು ಸಲಹೆ ನೀಡಲಿ ಎಂದು ಸಚಿವ ನಾರಾಯಣ ಗೌಡ ಹೇಳಿದರು.

ಸ್ಯಾಂಡಲ್​ವುಡ್​ಗೆ ಡ್ರಗ್ಸ್ ಮಾಫಿಯಾ ನಂಟಿನ ಪ್ರಕರಣದಡಿ 'ಮಾದಕ' ನಟಿ ರಾಗಿಣಿ ದ್ವಿವೇದಿ ಸಿಸಿಬಿ ಪೊಲೀಸ್​ ಕಸ್ಟಡಿಯಲ್ಲಿದ್ದಾರೆ. ಈ ಹಿಂದೆ ರಾಗಿಣಿ ಬಿಜೆಪಿ ಪರ ಚುನಾವಣಾ ಪ್ರಚಾರದಲ್ಲಿ ಪಾಲ್ಗೊಂಡಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net