ಕೊರೊನಾ ಸೋಂಕಿನಿಂದ ಗುಣಮುಖರಾದವರ ರಕ್ತದ ಕಣದಿಂದಲೇ ಕೊರೊನಾಗೆ ಔಷಧ ತಯಾರು!

Corona Virus Patient
Published on

ಬೀಜಿಂಗ್​: ಮಹಾಮಾರಿ ಕೊರೊನಾ ವೈರಸ್​ ಸೋಂಕಿಗೆ ಉತ್ತಮ ಚಿಕಿತ್ಸೆ ಕಂಡುಹಿಡಿಯುವಲ್ಲಿ ವಿಜ್ಞಾನಿಗಳು ಸಫಲವಾಗುವತ್ತ ಹೆಜ್ಜೆ ಹಾಕಿದ್ದಾರೆ. ಕೊರೊನಾ ಸೋಂಕಿನಿಂದ ಗುಣಮುಖರಾದವರ ರಕ್ತವನ್ನು ಬಳಸಿಕೊಂಡು ಔಷಧ ಕಂಡುಹಿಡಿಯುವಲ್ಲಿ ಯಶಸ್ವಿಯಾಗಿದ್ದಾರೆ.

ಜಪಾನ್​ನ ಔಷಧ ತಯಾರಿಕ ಸಂಸ್ಥೆಯು ಈಗಾಗಲೇ ಔಷಧಿಯನ್ನು ಸಿದ್ಧಪಡಿಸಿದೆ. ಸೋಂಕು ತಗುಲಿ ಗುಣಮುಖರಾಗಿರುವ ವ್ಯಕ್ತಿಗಳ ದೇಹದಲ್ಲಿನ ಬಿಳಿರಕ್ತಕಣ ಹಾಗೂ ರೋಗನಿರೋಧಕದಂತಹ ಪ್ರತಿರೋಧಕ ವ್ಯವಸ್ಥೆಯ ರಕ್ತದ ಕಣಗಳನ್ನು ತೆಗೆದುಕೊಂಡು ಔಷಧವನ್ನು ತಯಾರಿಸಲಾಗಿದೆ ಎಂಬ ಮಾಹಿತಿ ಇದೆ.

ಗುಣಮುಖರಾದವರ ಪ್ರೋಟಿನ್​​ಗಳನ್ನು ಸೋಂಕು ತಗುಲಿರುವ ರೋಗಿಗಳಿಗೆ ಇಂಜೆಕ್ಟ್​ ಮಾಡಿದರೆ ಆ ಪ್ರೋಟಿನ್​ ಸೋಂಕಿನ ವಿರುದ್ಧ ಹೋರಾಡುತ್ತದೆ. ಹಿಂದೆ ಹರಡಿದ್ದ ಎಬೋಲಾ ವೈರಸ್​ ಮಣಿಸಲು ಇದನ್ನೇ ಬಳಸಳಾಗಿತ್ತು. ಆದರೆ, ಕೊರೊನಾ ಸೋಂಕಿಗೆ ಗುಣಮುಖರಾದ ಒಂದಕ್ಕಿಂತ ಹೆಚ್ಚಿನ ವ್ಯಕ್ತಿಯ ಪ್ರೋಟಿನ್​ ಅವಶ್ಯಕವಾಗಿರುವುದರಿಂದ ಎಲ್ಲರಿಗೂ ಇದನ್ನು ಬಳಸಲು ಸಾಧ್ಯವಾಗುವುದಿಲ್ಲ ಎಂದು ಹೇಳಲಾಗಿದೆ.

ತನ್ನ ಪ್ರಜೆಗಳಿಗಾಗಿ ಈಗಾಗಲೇ ಈ ರೀತಿಯ ಚಿಕಿತ್ಸೆ ಬಳಸುತ್ತಿರುವುದಾಗಿ ಚೀನಾ ಆಸ್ಪತ್ರೆಗಳು ಹೇಳಿವೆ. ಆದರೆ, ದೊಡ್ಡ ಪ್ರಮಾಣದಲ್ಲಿ ಉತ್ಪತಿ ಮಾಡಿ ಒದಗಿಸಲು ಸಾಧ್ಯವಾಗುತ್ತಿಲ್ಲ ಎಂದಿದೆ. ಆದರೆ, ಜಪಾನ್​ ಔಷಧ ತಯಾರಿಕ ಸಂಸ್ಥೆ ತಾಕೆಡಾ ಇದರ ಮೇಲೆ ಕೆಲಸ ಮಾಡುತ್ತಿದ್ದು, ಅದಕ್ಕೆ ಪ್ಲಾಸ್ಮಾ ಡಿರೈವ್ಡ್​ ಥೆರಪಿ ಎಂದು ಹೆಸರಿಟ್ಟಿದೆ. ಗುಣಮುಖರಾದವರ ರಕ್ತದ ಪ್ಲಾಸ್ಮದ ಆಧಾರದ ಮೇಲೆ ಔಷಧ ಸಿದ್ಧವಾಗುತ್ತಿದೆ.

ಪ್ಲಾಸ್ಮ ಒಂದು ದ್ರವ ಪದಾರ್ಥವಾಗಿದ್ದು, ಅದು ರಕ್ತದ ಕೋಶಗಳು, ನ್ಯೂಟ್ರಿಯಂಟ್ಸ್​ ಮತ್ತು ಹಾರ್ಮೋನ್​ಗಳನ್ನು ರಕ್ತನಾಳಗಳ ಮೂಲಕ ಸಾಗಿಸುತ್ತದೆ. ಅಲ್ಲದೆ, ಆ್ಯಂಟಿಬಾಡಿ(ಇಮ್ಯುನೋಗ್ಲೊಬಲಿನ್​)ಯನ್ನು ಸಾಗಿಸುವುದರಿಂದ ಅದರಲ್ಲಿರುವ ಪ್ರೋಟಿನ್​ಗಳು ಬ್ಯಾಕ್ಟೀರಿಯಾ ಮತ್ತು ವೈರಸ್​ಗಳನ್ನು ಸೋಂಕಾಗಿ ಪರಿವರ್ತನೆಗೊಂಡಾಗ ಕೊಲ್ಲುತ್ತದೆ.

ಹೀಗಾಗಿ ಗುಣಮುಖರಾದವರಿಂದ ತೆಗೆದಂತಹ ಆ್ಯಂಟಿಬಾಡಿಗಳನ್ನು ಸೋಂಕು ತಗುಲಿದವರಿಗೆ ಇಂಜೆಕ್ಟ್​ ಮಾಡುವುದರಿಂದ ಅವರನ್ನು ಉಳಿಸಿಕೊಳ್ಳಬಹುದು ಎಂದು ವಿಜ್ಞಾನಿಗಳು ಹೇಳಿದ್ದಾರೆ. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net