ಹಚ್ಚಹಸಿರು ತಾಣದಲ್ಲಿ ಔಷಧರಹಿತ ಚಿಕಿತ್ಸೆ

dfgdgdfg
Published on

ಬೆಂಗಳೂರು: ಇಂದು ಜನರು ಔಷಧರಹಿತ ಚಿಕಿತ್ಸೆಗೆ ಮೊರೆಹೋಗುತ್ತಿದ್ದು, ಆಹಾರ ಮತ್ತು ಜೀವನಶೈಲಿ ಹಾಗೂ ಯೋಗದ ಮೂಲಕ ಆರೋಗ್ಯ ವೃದ್ಧಿಸಿಕೊಳ್ಳಲು ಮುಂದಾಗುತ್ತಿದ್ದಾರೆ. ಇದಕ್ಕೆ ಪೂರಕವಾಗಿ ಭಾರತೀಯ ವೈದ್ಯ ಪದ್ಧತಿಗಳಾದ ಯೋಗ ಮತ್ತು ಪ್ರಕೃತಿ ಚಿಕಿತ್ಸೆಯ ಮೂಲಕ ಪರಿಹಾರ ಒದಗಿಸುತ್ತಿದೆ ಎಂಆರ್​ಆರ್ ಯೋಗ ಮತ್ತು ಪ್ರಕೃತಿ ಚಿಕಿತ್ಸಾ ಆಸ್ಪತ್ರೆ.

ನೆಲಮಂಗಲದಿಂದ ಹಾಸನಕ್ಕೆ ಹೋಗುವ ರಾಷ್ಟ್ರೀಯ ಹೆದ್ದಾರಿ-48ರ ಪಕ್ಕದಲ್ಲಿ ಸೋಲೂರು ಗ್ರಾಮದಲ್ಲಿ 20 ಎಕರೆ ವಿಸ್ತೀರ್ಣವುಳ್ಳ ಹಚ್ಚಹಸಿರು ತಾಣದಲ್ಲಿ 200 ಹಾಸಿಗೆಗಳುಳ್ಳ ಸುಸಜ್ಜಿತ ಆಸ್ಪತ್ರೆಯಲ್ಲಿ ಸಾಂಕ್ರಾಮಿಕವಲ್ಲದ ಕಾಯಿಲೆಗಳು ಅಥವಾ ಮನೋದೈಹಿಕ ಕಾಯಿಲೆಗಳಾದ ಬೊಜ್ಜು, ಮಧುಮೇಹ, ರಕ್ತದೊತ್ತಡ, ಗಂಟು ನೋವು, ಅಜೀರ್ಣ, ಮಲಬದ್ಧತೆ, ಮಾನಸಿಕ ಖಿನ್ನತೆ ಹಾಗೂ ಇನ್ನಿತರ ರೋಗಗಳಿಗೆ ಪರಿಣಾಮಕಾರಿ ಚಿಕಿತ್ಸೆ ಒದಗಿಸಲಾಗುತ್ತಿದೆ.

ಆಧುನಿಕ ಜಗತ್ತಿನ ವೇಗದ ಬದುಕಿನಲ್ಲಿ ಆರೋಗ್ಯದ ಸಮಸ್ಯೆಗಳು ದಿನೇದಿನೆ ಏರಿಕೆಯಾಗುತ್ತಿವೆ. ಬದಲಾಗುತ್ತಿರುವ ಜೀವನ ಶೈಲಿ, ತಪು್ಪ ಆಹಾರ ಪದ್ಧತಿ ಹಾಗೂ ಮಾನಸಿಕ ಒತ್ತಡ ಈ ಸಮಸ್ಯೆಗೆ ಪ್ರಮುಖ ಕಾರಣಗಳು. ಅನಗತ್ಯವಾಗಿ ಔಷಧ ಸೇವನೆಯಿಂದಾಗಿ ಜನರಲ್ಲಿ ರೋಗ ನಿರೋಧಕ ಶಕ್ತಿ ಕುಂಠಿತಗೊಳ್ಳುತ್ತಿದೆ. ಇದೆಲ್ಲವನ್ನು ಮನಗಂಡ ಎಂಆರ್​ಆರ್ ಸಮೂಹ ಸಂಸ್ಥೆಯು ಅರ್ಹರಿಗೆ ಸೇವೆಯನ್ನು ನೀಡಿ ಆರೋಗ್ಯಪೂರ್ಣ ಸಮಾಜವನ್ನು ನಿರ್ಮಾಣ ಮಾಡುವ ಗುರಿಯೊಂದಿಗೆ 2016ರಲ್ಲಿ ಸಾಂಪ್ರದಾಯಿಕ ಚಿಕಿತ್ಸೆ ಒಳಗೊಂಡ ಎಂಆರ್​ಆರ್ ಯೋಗ ಮತ್ತು ಪ್ರಕೃತಿ ಚಿಕಿತ್ಸಾ ಆಸ್ಪತ್ರೆಯನ್ನು ಪ್ರಾರಂಭಿಸಿತು.

ತಪ್ಪು ಜೀವನ ಪದ್ಧತಿಯಿಂದ ಬರುವ ರೋಗ ಗಳಿಗೆ ಯೋಗ ಮತ್ತು ಪ್ರಕೃತಿ ಚಿಕಿತ್ಸಾ ಪದ್ಧತಿ ಮೂಲಕ ಇಲ್ಲಿ ಚಿಕಿತ್ಸೆ ನೀಡಲಿದ್ದು, ಸಾಮನ್ಯ ವರ್ಗದ ಜನರಿಗೂ ಅತಿಕಡಿಮೆ ವೆಚ್ಚದಲ್ಲಿ ಚಿಕಿತ್ಸೆ ಒದಗಿಸುವ ಉದ್ದೇಶದಿಂದ ಈ ಆಸ್ಪತ್ರೆಯನ್ನು ಪ್ರಾರಂಭಿಸಲಾಗಿದೆ.

| ಡಾ.ಆರ್. ಚೇತನ್​ಕುಮಾರ್ಚಿಕಿತ್ಸೆಯ ವಿವರ: ಔಷಧರಹಿತ ಚಿಕಿತ್ಸೆಗಳಾದ ಮಸಾಜ್, ಮಣ್ಣಿನ ಸ್ನಾನ, ಅರಿಶಿನ ಸ್ನಾನ, ಕೋಲಾನ್ ಹೈಡ್ರೋಥೆರಪಿ, ಜಲಚಿಕಿತ್ಸೆ, ಫಿಸಿಯೋಥೆರಪಿ, ಅಕ್ಯುಪಂಕ್ಚರ್, ಆಹಾರ ಚಿಕಿತ್ಸೆ, ಉಪವಾಸ ಚಿಕಿತ್ಸೆ, ಸ್ಟೀಂ ಹಾಗೂ ಸೋನಾ ಬಾತ್, ಚಿಕಿತ್ಸಾತ್ಮಕ ಯೋಗ ಇತ್ಯಾದಿ ಚಿಕಿತ್ಸೆಗಳನ್ನು ತಜ್ಞ ವೈದ್ಯರ ಸಲಹೆಯ ಮೇರೆಗೆ ನೀಡಲಾಗುತ್ತಿದೆ.

ವಿಳಾಸ: ಎಂಆರ್​ಆರ್ ಪ್ರಕೃತಿ ಚಿಕಿತ್ಸಾ ಆಸ್ಪತ್ರೆಸೋಲೂರು ಗ್ರಾಮ, ರಾಷ್ಟ್ರೀಯ ಹೆದ್ದಾರಿ-48 (ಬೆಂಗಳೂರು-ಹಾಸನ ಹೆದ್ದಾರಿ)ಭಾರತ್ ಗ್ಯಾಸ್ ಗೋಡೌನ್ ಪಕ್ಕ,ಮಾಗಡಿ ತಾಲೂಕು, ರಾಮನಗರ ಜಿಲ್ಲೆ- 562 127ದೂರವಾಣಿ: 98452 23223, 99726 39888ಸೌಲಭ್ಯಗಳು: ಚಿಕಿತ್ಸೆಗಾಗಿ ಬರುವವರಿಗೆ ಮಹಿಳೆ ಮತ್ತು ಪುರುಷರಿಗೆ ಪ್ರತ್ಯೇಕ ಸಾಮಾನ್ಯ ಕೊಠಡಿಗಳು, ವಿಶೇಷ ಕೊಠಡಿಗಳು, ಕಾಟೇಜ್​ಗಳ ವ್ಯವಸ್ಥೆ ಕಲ್ಪಿಸಲಾಗಿದೆ. ಆಸ್ಪತ್ರೆಯಲ್ಲಿ ಸುಸಜ್ಜಿತ ಪ್ರಯೋಗಾಲಯ, ನಡಿಗೆ ಪಥ, ಒಳಾಂಗಣ ಆಟದಂಗಳ, ಜಿಮ್ ವಿಭಾಗ, ಈಜುಕೊಳ, ಬಯಲು ರಂಗಮಂದಿರ ಹಾಗೂ ಪಥ್ಯ ಕೇಂದ್ರವೂ ಇದೆ.

ಇತ್ತೀಚಿನ ಕೆಲವು ವರ್ಷಗಳಿಂದ ಆಯುರ್ವೆದ ಹಾಗೂ ಯೋಗ ಶಬ್ದಗಳು ಕೇವಲ ಭಾರತದಲ್ಲಷ್ಟೇ ಅಲ್ಲ ಇಡೀ ಜಗತ್ತಿನಾದ್ಯಂತ ಅದರಲ್ಲೂ ಪಾಶ್ಚಿಮಾತ್ಯ ರಾಷ್ಟ್ರಗಳಲ್ಲಿ ಅಧಿಕವಾಗಿ ಕೇಳಿಬರುತ್ತಿದೆ. ಆಯುರ್ವೆದ ಪುರಾತನ ಪದ್ಧತಿಯಾಗಿದ್ದು, ಅದನ್ನು ನಮ್ಮ ನೈಜ ಜೀವನದಲ್ಲಿ ಅಳವಡಿಸಿಕೊಂಡು ಶರೀರದಲ್ಲಾದ ತೊಂದರೆಗಳನ್ನು ಶಾಶ್ವತವಾಗಿ ನಿವಾರಿಸಿಕೊಂಡು ಆರೋಗ್ಯವಂತರಾಗುತ್ತಿರುವುದು ಗಮನಾರ್ಹ. ಆಯುರ್ವೆದ ಶಾಸ್ತ್ರದ ಪ್ರಮುಖ ಚಿಕಿತ್ಸೆಯಾದ ಪಂಚಕರ್ಮ ಚಿಕಿತ್ಸೆಯ ಸಂಕ್ಷಿಪ್ತ ಮಾಹಿತಿ ಇಲ್ಲಿದೆ.

ಶ್ರಮದ- ಶೋಧವ ಚಿಕಿತ್ಸೆ: ಆಯುರ್ವೆದ ಶಾಸ್ತ್ರದಲ್ಲಿ ಚಿಕಿತ್ಸೆ ನೀಡುವಾಗ ಪ್ರಮುಖವಾಗಿ ಶ್ರಮದ ಚಿಕಿತ್ಸೆ ಹಾಗೂ ಶೋಧವ ಚಿಕಿತ್ಸೆಗಳೆಂದು ಎರಡು ವಿಧಗಳನ್ನು ಅನುಸರಿಸಲಾಗುವುದು. ಶಮನ ಚಿಕಿತ್ಸೆ ಎಂದರೆ ವ್ಯಾಧಿಯ ಬಲಾಬಲಗಳನ್ನು ಪರೀಕ್ಷಿಸಿ ಔಷಧೋಪಚಾರ ಮಾಡಿ ವ್ಯಾಧಿಯನ್ನು ಗುಣಪಡಿಸುವುದು. ವ್ಯಾಧಿಯು ಬಹಳ ದಿವಸಗಳಿಂದ ತೊಂದರೆ ನೀಡುತ್ತಿದ್ದರೆ ಶಮನ ಔಷಧಗಳಿಂದ ತಕ್ಕಮಟ್ಟಿನ ಗುಣಸಿಗದ ಸಂದರ್ಭಗಳಲ್ಲಿ ಶೋಧನ ಚಿಕಿತ್ಸೆಗಳನ್ನು ಕೊಡುವುದು ವಾಡಿಕೆ. ಇಲ್ಲಿ ಶೋಧನ ಚಿಕಿತ್ಸೆ ನೀಡಬೇಕಾದರೆ ನಾವುಗಳು ಪಂಚಕರ್ಮ ಚಿಕಿತ್ಸೆಗಳಿಂದ ನೀಡುವುದು ಆಯುರ್ವೆದ ಶಾಸ್ತ್ರದಲ್ಲಿ ಉಲ್ಲೇಖವಿದೆ. ಶರೀರದ ದೋಷಗಳಾದ ವಾತ, ಪಿತ್ತ, ಕಫಗಳನ್ನು ಹೊರಹಾಕಿ (ತೆಗೆದು) ದೇಹದ ಧಾತುಗಳನ್ನು ಬಲಪಡಿಸುವ ಕ್ರಿಯೆಯೇ ಪಂಚಕರ್ಮ ಚಿಕಿತ್ಸೆಯ ಉದ್ದೇಶ. ಆರೋಗ್ಯವಂತರಲ್ಲಿ ಆರೋಗ್ಯ ಕಾಪಾಡುವುದು, ಹಾಗೂ ರೋಗಿಗಳ ರೋಗ ನಿವಾರಿಸುವದು ಈ ಚಿಕಿತ್ಸೆಯ ಮುಖ್ಯ ಗುರಿ.

ಐದು ಸಾವಿರ ವರ್ಷಗಳ ಪುರಾತನ ಇತಿಹಾಸವಿರುವ ವೈದ್ಯಕೀಯ ಶಾಸ್ತ್ರ ಯಾವುದಾದರೂ ಇದ್ದರೆ ಅದು ಆಯುರ್ವೆದ ವೈದ್ಯಕೀಯ ಶಾಸ್ತ್ರ. ಆಯುರ್ವೆದ ಶಾಸ್ತ್ರವು ರೋಗಕ್ಕೆ ಚಿಕಿತ್ಸೆ ನೀಡುವುದರ ಜೊತೆಗೆ ಆ ರೋಗವನ್ನು ಬೇರುಸಮೇತ ಕಿತ್ತೊಗೆಯುವುದು ಹಾಗೂ ಆರೋಗ್ಯವು ಮತ್ತೆ ಹಾಳಾಗದ ಹಾಗೆ ಶರೀರಕ್ಕೆ ಶಕ್ತಿ ನೀಡಿ ವ್ಯಾಧಿ ಕ್ಷಮತ್ರ ಶಕ್ತಿ (ಇಮ್ಯುನಿಟಿ ಪವರ್) ಯನ್ನು ವೃದ್ಧಿಸಿ ಶರೀರದಲ್ಲಿರುವ ವಾತ, ಪಿತ್ತ, ಕಘ ದೋಷಗಳನ್ನು, ಧಾತುಗಳನ್ನು ಸಮಸ್ಥಿತಿಯಲ್ಲಿಡುವುದು. ಆಯುರ್ವೆದ ವೈದ್ಯ ಶಾಸ್ತ್ರವೆಂಬುದು ಜೀವನ ವಿಧಾನ ಮಾತ್ರವಲ್ಲದೇ ಅದು ಒಂದು ಅಗಾಧ ವಿಜ್ಞಾನವೂ ಕೂಡಾ. ಕಾಯಿಲೆಗಳ ವಿರುದ್ಧ ಚಿಕಿತ್ಸಾತ್ಮಕ ಹಾಗೂ ಮುಂಜಾಗೃತಾಕ್ರಮಗಳ ಕಡೆ ಗಮನ ಹರಿಸುವುದರೊಂದಿಗೆ ದೇಹವನ್ನು ಒಳಗಿನಿಂದ ಶುದ್ಧಿಗೊಳಿಸುವ ಹಾಗೂ ನವಚೈತನ್ಯ ಕಾಯ್ದಿರಿಸುವ ಕೆಲಸವನ್ನು ಮಾಡುತ್ತದೆ.

ಪಂಚಕರ್ಮ ಚಿಕಿತ್ಸೆ: ಆಯುರ್ವೆದ ಶಾಸ್ತ್ರದಲ್ಲಿಯೇ ವಿಶೇಷ ಸ್ಥಾನ ಪಡೆದ ಪಂಚಕರ್ಮ ಚಿಕಿತ್ಸಾ ವಿಜ್ಞಾನವು ದೇಹದ ಮನಸ್ಸಿನ ಹಾಗೂ ಆತ್ಮವನ್ನು ಸಮತೋಲನವಾಗಿ ಕಾಪಾಡುವ ಗುರಿ ಹೊಂದಿದೆ. ದೇಹದಿಂದ ಟಾಕ್ಸಿನ್ಸ್ (ಆಮ ದೋಷ) ಹೊರತೆಗೆದು ಅವರೋಧ ಹೊಂದಿರುವಂತಹ ನಾಳಗಳ ಸ್ವಚ್ಛತೆ, ಸರಾಗ ಜೀರ್ಣಕ್ರಿಯೆ, ಚಯಾಪಚಯ ಶಕ್ತಿ (ಮೆಟೊಬಾಲಿಸಂ) ವೃದ್ಧಿ, ತೂಕ ಇಳಿಕೆ, ಒತ್ತಡ ಶಮನ, ರೋಗ ನಿರೋಧಕ ಶಕ್ತಿ ಹೆಚ್ಚಳ ಮುಂತಾದ ಆರೋಗ್ಯ ಲಾಭಗಳು ಪಂಚಕರ್ಮ ಚಿಕಿತ್ಸೆಗಳಿಂದ ದೊರೆಯುತ್ತದೆ.

ಪಂಚಕರ್ಮ ಚಿಕಿತ್ಸೆಯಲ್ಲಿನ ಪ್ರಕಾರಗಳು:

1. ವಮಟ: ವಾಂತಿ ಮುಖಾಂತರ ದೋಷಗಳನ್ನು ಹೊರ ಹಾಕುವುದು.

2. ವಿರೇಚನ: ಭೇದಿ ಮುಖಾಂತರ ದೋಷಗಳನ್ನು ಹೊರ ಹಾಕುವುದು. 3. ಬಸ್ತಿ: ಇದರಲ್ಲಿ ಎರಡು ಪ್ರಕಾರಗಳು ಎನಿಮಾದ ಮುಖಾಂತರ

ದೋಷಗಳನ್ನು ಹೊರಹಾಕುವುದು. 1. ಅಮವಾಚನ ಬಸ್ತಿ, 2. ನಿರೂಹ ಬಸ್ತಿ ಇವೆರಡು ಚಿಕಿತ್ಸೆಗಳು ಬಹಳ ಪರಿಣಾಮಕಾರಿಯಾಗಿವೆ.

4. ನಶ್ಯ ಚಿಕಿತ್ಸೆ: ಮೂಗಿನ ಮುಖಾಂತರ ಚಿಕಿತ್ಸೆ ನೀಡುವುದು. 5. ರಕ್ತ ಮೋಕ್ಷಣ ಚಿಕಿತ್ಸೆ: (ಬ್ಲಡ್ ಲೆಟ್ಟಿಂಗ್ ಟ್ರೀಟ್​ವೆುಂಟ್) ಶಿರಾವ್ಯಥ ಚಿಕಿತ್ಸೆ ಮಾಡಿ ಅಶುದ್ಧ ರಕ್ತವನ್ನು ಹೊರಹಾಕುವುದು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net