ನಾಳೆ ಮಾದಕ ಮುಕ್ತ ಭಾರತ ಸಾಮಾಜಿಕ ಜಾಗೃತಿ ವಾಕಥಾನ್​-Drug-Free India'

ಸಂಘದ ಅಧ್ಯಕ್ಷ ಡಾ. ಚೇತನ್ ಕುಮಾರ್ ಮೆಹ್ತಾ ಮಾತನಾಡಿ, ಮಾದಕ ವಸ್ತುಗಳ ವಿರುದ್ಧ ಹೋರಾಟ ಕಾನೂನು ಜಾರಿಗೆ ಸೀಮಿತವಾಗದೆ ಪ್ರತಿ ಮನೆಗೂ ತಲುಪಬೇಕು ಎಂಬುದು ನಮ್ಮ ಆಶಯವಾಗಿದೆ. ಸುರಕ್ಷಿತ ಬೆಂಗಳೂರು ಹಾಗೂ ಆರೋಗ್ಯಕರ ಭಾರತ ನಿರ್ಮಾಣಕ್ಕೆ ಬಲ ನೀಡುವುದು ಆಭರಣ ವ್ಯಾಪಾರಿಗಳ ಸಮುದಾಯದ ಉದ್ದೇಶವಾಗಿದೆ ಎಂದರು.
ಜಾಥಾ
ನಾಳೆ ವಾಕಥಾನ್
Published on: 

ಬೆಂಗಳೂರು: ('Drug-Free India') ಗಾಂಧಿ ಜಯಂತಿ ಪ್ರಯುಕ್ತ ರಾಜ್ಯ ಪೊಲೀಸ್ ಇಲಾಖೆ ಸಹಯೋಗದಲ್ಲಿ ದಿ ಜುವೆಲ್ಲರ್ಸ್ ಅಸೋಸಿಯೇಷನ್, ಶುಕ್ರವಾರ (ಅ.2) ಟೌನ್‌ಹಾಲ್‌ನಿಂದ ಮೈಸೂರು ಬ್ಯಾಂಕ್ ವೃತ್ತದವರೆಗೆ ‘ಮಾದಕ ಮುಕ್ತ ಭಾರತ ಸಾಮಾಜಿಕ ಜಾಗೃತಿ ವಾಕಥಾನ್​ ಆಯೋಜಿಸಿದೆ.

‘ಮಾದಕ ವ್ಯಸನ ಅಳಿಸಿ, ದೇಶದ ಭವಿಷ್ಯ ಉಳಿಸಿ’ ಮತ್ತು ‘ಬೇಡ ಬ್ರೋ ಬೇಡ’ ಅಭಿಯಾನದೊಂದಿಗೆ ಯುವಜನರಲ್ಲಿ ಹೆಚ್ಚುತ್ತಿರುವ ಮಾದಕ ವಸ್ತು ಸೇವನೆಯ ಅಪಾಯದ ಬಗ್ಗೆ ಜಾಗೃತಿ ಮೂಡಿಸುವುದು, ಕುಟುಂಬಗಳು, ಶಾಲಾ,ಕಾಲೇಜುಗಳು ಮತ್ತು ಸಮುದಾಯಗಳು ಒಟ್ಟಾಗಿ ನಿಲ್ಲುವಂತೆ ಪ್ರೇರೇಪಿಸುವುದು ಇದರ ಉದ್ದೇಶವಾಗಿದೆ. ನಗರದ ಆಭರಣ ವ್ಯಾಪಾರಿಗಳು ಸೇರಿ ಸಾವಿರಾರು ಜನರು ಭಾಗಿಯಾಗಲಿದ್ದಾರೆ.

ಸಂಘದ ಅಧ್ಯಕ್ಷ ಡಾ. ಚೇತನ್ ಕುಮಾರ್ ಮೆಹ್ತಾ ಮಾತನಾಡಿ, ಮಾದಕ ವಸ್ತುಗಳ ವಿರುದ್ಧ ಹೋರಾಟ ಕಾನೂನು ಜಾರಿಗೆ ಸೀಮಿತವಾಗದೆ ಪ್ರತಿ ಮನೆಗೂ ತಲುಪಬೇಕು ಎಂಬುದು ನಮ್ಮ ಆಶಯವಾಗಿದೆ. ಸುರಕ್ಷಿತ ಬೆಂಗಳೂರು ಹಾಗೂ ಆರೋಗ್ಯಕರ ಭಾರತ ನಿರ್ಮಾಣಕ್ಕೆ ಬಲ ನೀಡುವುದು ಆಭರಣ ವ್ಯಾಪಾರಿಗಳ ಸಮುದಾಯದ ಉದ್ದೇಶವಾಗಿದೆ ಎಂದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net