Sushant suicide case: ಡ್ರಗ್ಸ್ ಆರೋಪ ಸುಳ್ಳು, ಸುಶಾಂತ್ ಖಿನ್ನತೆಯಿಂದ ಬಳಲುತ್ತಿದ್ದರು: ನಟಿ ಸ್ಮಿತಾ ಜಯ್ಕರ್ ಬಿಚ್ಚಿಟ್ಟ ರಹಸ್ಯ!

ದಿವಂಗತ ನಟ ಸುಶಾಂತ್ ಸಿಂಗ್ ರಜಪೂತ್ ಅವರು ತೀವ್ರ ಖಿನ್ನತೆಯಿಂದ ಬಳಲುತ್ತಿದ್ದು, ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು ಎಂದು ಹಿರಿಯ ನಟಿ ಸ್ಮಿತಾ ಜಯ್ಕರ್ ಸಂದರ್ಶನವೊಂದರಲ್ಲಿ ಸ್ಪಷ್ಟಪಡಿಸಿದ್ದು, ಈ ವೇಳೆ ರಿಯಾ ಚಕ್ರವರ್ತಿ ಕುರಿತಾದ ಕುರಿತಾದ ಸತ್ಯವನ್ನೂ ಬಿಚ್ಚಿಟ್ಟಿದ್ದಾರೆ
 Sushant Singh Rajput suicide case
ಸುಶಾಂತ್ ಸಿಂಗ್ ರಜಪೂತ್ ಸಾವಿನ ಬಗ್ಗೆ ಸತ್ಯ ಬಿಚ್ಚಿಟ್ಟ ನಟಿ ಸ್ಮಿತಾ ಜಯ್ಕರ್
Published on: 

Sushant Singh Rajput: ಬಾಲಿವುಡ್‌ನ ಜನಪ್ರಿಯ ನಟ ದಿವಂಗತ ಸುಶಾಂತ್ ಸಿಂಗ್ ರಜಪೂತ್ ಸಾವಿನ ಬಗ್ಗೆ ಹಿರಿಯ ನಟಿ ಹಾಗೂ ಆಧ್ಯಾತ್ಮಿಕ ಚಿಕಿತ್ಸಕಿ ಸ್ಮಿತಾ ಜಯ್ಕರ್ ಕೆಲವು ಮುಖ್ಯ ವಿಷಯಗಳನ್ನು ಹೇಳಿದ್ದಾರೆ. ಸಂದರ್ಶನವೊಂದರಲ್ಲಿ ಮಾತನಾಡಿದ ಅವರು, ಸುಶಾಂತ್ ಖಿನ್ನತೆಯಿಂದ ಬಳಲುತ್ತಿದ್ದರು ಮತ್ತು ಮುಂಬೈನ ಹಿಂದೂಜಾ ಆಸ್ಪತ್ರೆಯಲ್ಲಿ ಚಿಕಿತ್ಸೆ ತೆಗೆದುಕೊಳ್ತಿದ್ರು ಅಂತ ನೆನಪಿಸಿಕೊಂಡಿದ್ದಾರೆ.

ಸುಶಾಂತ್ ಅವರ ಮಾಜಿ ಗರ್ಲ್‌ಫ್ರೆಂಡ್ ರಿಯಾ ಚಕ್ರವರ್ತಿ (Rhea Chakraborty) ತನಗೆ ಕರೆ ಮಾಡಿ ವಿಷಯ ತಿಳಿಸಿದ ನಂತರ, ತಾನು ಆಸ್ಪತ್ರೆಗೆ ಭೇಟಿ ನೀಡಿ ಸುಶಾಂತ್ ಅವರಿಗೆ ಹೀಲಿಂಗ್ ಸೆಷನ್ ನೀಡಿರುವುದಾಗಿ ಸ್ಮಿತಾ ತಿಳಿಸಿದ್ದಾರೆ. ಆ ಸಮಯದಲ್ಲಿ ಸುಶಾಂತ್ ತುಂಬಾ ಖುಷಿಯಿಂದ ಮಾತನಾಡಿದ್ದರು ಮತ್ತು ತಾನು ಆಶ್ರಮಕ್ಕೆ ಭೇಟಿ ನೀಡುವುದಾಗಿಯೂ ಹೇಳಿದ್ದರು. ಆದರೆ ದುರಾದೃಷ್ಟವಶಾತ್ ಆ ಯೋಜನೆ ಕಾರ್ಯರೂಪಕ್ಕೆ ಬರಲಿಲ್ಲ ಎಂದು ಅವರು ಬೇಸರ ವ್ಯಕ್ತಪಡಿಸಿದ್ದಾರೆ.

ಡ್ರಗ್ಸ್ ಆರೋಪ ಸುಳ್ಳು

ಸುಶಾಂತ್ ಡ್ರಗ್ಸ್ ತಗೋತಿದ್ರು ಅನ್ನೋದ್ರಲ್ಲಿ ಯಾವುದೇ ಸತ್ಯವಿಲ್ಲ ಅಂತ ಸ್ಮಿತಾ ಜಯ್ಕರ್ ಆ ವಾದನೆಲ್ಲಾ ತಳ್ಳಿಹಾಕಿದ್ದಾರೆ. ತಾನು ಆಸ್ಪತ್ರೆಯಲ್ಲಿ ಭೇಟಿಯಾದಾಗ ಅವರು ಯಾವುದೇ ಡ್ರಗ್ಸ್ ತಗೊಂಡಿರಲಿಲ್ಲ, ಬಹುಶಃ ಡಾಕ್ಟರ್ ಕೊಟ್ಟಿದ್ದ ಮಾತ್ರೆಗಳ ಪ್ರಭಾವದಲ್ಲಿದ್ದಿರಬಹುದು ಅಂತ ಅವರು ಸ್ಪಷ್ಟಪಡಿಸಿದ್ದಾರೆ.

ಅಂದಹಾಗೆ, ಬಾಲಿವುಡ್‌ನ ಜನಪ್ರಿಯ ನಟ ಸುಶಾಂತ್ ಸಿಂಗ್ ರಜಪೂತ್ 2020ರ ಜೂನ್ 14 ರಂದು ಮುಂಬೈನ ತಮ್ಮ ಮನೆಯಲ್ಲೇ ನಿಧನರಾಗಿದ್ದರು.

ಇದನ್ನೂ ಓದಿ: ಕೊಂಡಿದ್ದು 7ರೂ.ಲಾಟರಿ, ಸಿಕ್ಕಿದ್ದು ಕೋಟಿ; ಪಂಜಾಬ್​ನ ಬಡ ಕುಟುಂಬದ ಅದೃಷ್ಟ ಬದಲಿಸಿದ ಬಂಪರ್ ಗಿಫ್ಟ್..Punjab

ರಿಯಾ ಪರ ನಿಂತ ಸ್ಮಿತಾ ಜಯ್ಕರ್

ಸುಶಾಂತ್ ಮತ್ತು ರಿಯಾ ಸಂಬಂಧದ ಬಗ್ಗೆ ಮಾತನಾಡಿದ ಸ್ಮಿತಾ, ರಿಯಾ ಎಂದಿಗೂ ಸುಶಾಂತ್‌ಗೆ ಕೆಟ್ಟದನ್ನು ಬಯಸಿರಲಿಲ್ಲ. ಬದಲಿಗೆ ಅವರು ಸುಶಾಂತ್ ಅವರನ್ನು ಈ ಸಮಸ್ಯೆಯಿಂದ ಹೊರತರಲು ಪ್ರಾಮಾಣಿಕವಾಗಿ ಪ್ರಯತ್ನಿಸುತ್ತಿದ್ದರು ಅಂತ ರಿಯಾ ಬೆಂಬಲಕ್ಕೆ ನಿಂತಿದ್ದಾರೆ. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net