ಕಾಂಗ್ರೆಸ್ ಸರ್ಕಾರದಿಂದ ಬರ ವೀಕ್ಷಣೆ ಡ್ರಾಮಾ; ಮಾಜಿ ಮಂತ್ರಿ ವ್ಯಂಗ್ಯ

ashwathnarayana
Published on

ಬೆಂಗಳೂರು: ರಾಜ್ಯದ ಬರ ಪೀಡಿತ ಅಧ್ಯಯನ ಪ್ರವಾಸ ಪ್ರತಿಪಕ್ಷ ಆರಂಭಿಸಿದ ನಂತರ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಜ್ಞಾನೋದಯವಾಗಿದೆ. ಬರ ವೀಕ್ಷಣೆ ನಾಟಕಕ್ಕೆ ಕಾಂಗ್ರೆಸ್ ಸರ್ಕಾರ ಸಿದ್ಧವಾಗಿದೆ ಎಂದು ಮಾಜಿ ಸಚಿವ ಡಾ.ಸಿ.ಎನ್.ಅಶ್ವತ್ಥ ನಾರಾಯಣ ವ್ಯಂಗ್ಯ

ಬಿಜೆಪಿ ರಾಜ್ಯ ಕಚೇರಿಯಲ್ಲಿ ಶನಿವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕೇಂದ್ರ ಸರ್ಕಾರದ ಕಡೆಗೆ ಬೆರಳು ತೋರಿಸುತ್ತಾ ಕಾಲ ಕಳೆದು, ಬರದಿಂದ ಕಂಗೆಟ್ಟ ರೈತರು, ಜನರತ್ತ ನೋಡಲಿಲ್ಲ. ಪರಿಹಾರ ಕಾಮಗಾರಿ ಕೈಗೊಳ್ಳದೆ ನಿರ್ಲಕ್ಷಿಸಿದವರಿಗೆ ಪ್ರತಿಪಕ್ಷ ಅಧ್ಯಯನ ಪ್ರವಾಸ ಕೈಗೊಂಡ ತಕ್ಷಣ ಎಚ್ಚೆತ್ತಿದೆ.

ಬರ ಬಾಧಿತ ಜನರ ಆಕ್ರೋಶದ ಕಟ್ಟೆಯೊಡೆದು ಬೈಯಲಿದ್ದಾರೆ. ಹೀಯಾಳಿಸಲಿದ್ದಾರೆ ಎಂಬ ಭಯದಿಂದ ಸಿಎಂ ಸಿದ್ದರಾಮಯ್ಯ ಅವರು ಜಿಲ್ಲಾ ಮಂತ್ರಿಗಳಿಗೆ ಆಯಾ ಜಿಲ್ಲೆಯಲ್ಲಿ ಬರ ಸ್ಥಿತಿ ಅವಲೋಕಿಸಲು ಸೂಚಿಸಿದ್ದು, ಇದೇ ಕೆಲಸ ಮೊದಲ ಮಾಡಬಹುದಿತ್ತಲ್ಲ ? ಎಂದು ಹಂಗಿಸಿದರು.

ಬಿಜೆಪಿ ಆಡಳಿತಾವಧಿಯಲ್ಲಿ ಜಾರಿಗೊಳಿಸಿದ್ದ 17 ರೈತ ಪರ ಯೋಜನೆಗಳನ್ನು ನಿಲ್ಲಿಸಿದೆ. ಕಿಸಾನ್ ಸಮ್ಮಾನ್ ನಿಧಿಯಡಿ ರಾಜ್ಯದಲ್ಲಿ ನಾಲ್ಕು ಸಾವಿರ ರೂ. ಕೊಡುತ್ತಿಲ್ಲ. ರೈತರು ಆತ್ಮಹತ್ಯೆಗೆ ಸ್ಪಂದಿಸಲಿಲ್ಲ, ಏಳು ತಾಸು ಮೂರು ೇಸ್ ವಿದ್ಯುತ್ ಪೂರೈಕೆ ಬೇಡಿಕೆಗೆ ಸ್ಪಂದಿಸುತ್ತಿಲ್ಲ. ರೈತರ ಪಾಲಿಗೆ ‘ಇಲ್ಲ’ದ ಸರ್ಕಾರ ಮೊಸಳೆ ಕಣ್ಣೀರು ಸುರಿಸಲು ಮುಂದಾಗಿದೆ ಎಂದು ಅಶ್ವತ್ಥ ನಾರಾಯಣ ವಾಗ್ದಾಳಿ ಮಾಡಿದರು.

ಅಧಿಕಾರಕ್ಕೆ ಕಚ್ಚಾಟ

ಕುಡಿಯುವ ನೀರು, ವಿದ್ಯುತ್ ಅಭಾವದಿಂದ ಜನರು ತತ್ತರಿಸಿದ್ದಾರೆ. ಜಾನುವಾರುಗಳಿಗೆ ಮೇವಿನ ಸಮಸ್ಯೆ ಉಲ್ಬಣಿಸಿದೆ. ಆದರೆ ಸಚಿವರು, ಶಾಸಕರು ಅಧಿಕಾರಕ್ಕಾಗಿ ಕಚ್ಚಾಡುತ್ತಿದ್ದಾರೆ. ಮುಖ್ಯಮಂತ್ರಿ ಹುದ್ದೆಗೆ ಪೈಪೋಟಿ ಏರ್ಪಟ್ಟಿದೆ. ಜನರ ಪರ ಆಡಳಿತಕ್ಕಿಂತ ಇವರಿಗೆ ಅಧಿಕಾರವೇ ಮುಖ್ಯವಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಛತ್ತೀಸಗಢ ಹಣಕ್ಕೆ ನಂಟು

ಛತ್ತೀಸಗಢ ಕಾಂಗ್ರೆಸ್ ಸರ್ಕಾರದ ಸಿಎಂ ಭೂಪೇಶ್ ಬೇಲ್ ಅವರು ಆನ್‌ಲೈನ್ ಗೇಮ್ ಆ್ಯಪ್ ಮೂಲಕ ಕಿಕ್‌ಬ್ಯಾಕ್ ರೂಪದಲ್ಲಿ 508 ಕೋಟಿ ರೂ. ಪಡೆದ ಆರೋಪವಿದೆ. 400 ಕೋಟಿ ರೂ. ಹೆಚ್ಚು ಹಣ ಪತ್ತೆಯಾಗಿದೆ. ಇದರ ಹೊರತಾಗಿ ಇಡಿ ಕೋಟ್ಯಂತರ ರೂ. ಪತ್ತೆ ಹಚ್ಚಿದ ಮತ್ತೊಂದು ಪ್ರಕರಣದಲ್ಲಿ ರಾಜ್ಯದ ನಂಟಿರುವಂತಿದೆ ಎಂಬ ಅನುಮಾನ ವ್ಯಕ್ತಪಡಿಸಿದರು.

ಎಐಸಿಸಿ ಪಾಲಿಗೆ ರಾಜ್ಯ ಸರ್ಕಾರ ಎಟಿಎಂ ಆಗಿದೆ. ಪಂಚ ರಾಜ್ಯಗಳ ಚುನಾವಣೆಗೆ ಇಲ್ಲಿಂದಲೇ ಂಡಿಂಗ್ ಆಗುತ್ತಿದೆ. ಐಟಿ ದಾಳಿಯಲ್ಲಿ ಕೋಟ್ಯಂತರ ರೂ. ಹಣ ಪತ್ತೆಯಾಗುವ ಮೂಲಕ ಭ್ರಷ್ಟಾಚಾರ ಮುಕ್ತ ಆಡಳಿತ ಕೊಡುತ್ತೇವೆ ಎಂದ ಕಾಂಗ್ರೆಸ್‌ನ ನಿಜಬಣ್ಣ ಬಯಲಾಗಿದೆ ಎಂದು ಡಾ.ಸಿ.ಎನ್.ಅಶ್ವತ್ಥ ನಾರಾಯಣ ಟೀಕಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net