ನಾಯಕ ನಟರೇ ಚಿತ್ರದಿಂದ ಅರ್ಧಕ್ಕೆ ಹೊರನಡೆದರೆ ನಿರ್ಮಾಪಕರಿಗೆ ತೀವ್ರ ನಷ್ಟವಾಗುತ್ತದೆ. ಹೀಗಾಗಿ, ಚಿತ್ರತಂಡದ ಎಲ್ಲರೂ ಸಹಕರಿಸಬೇಕು ಎಂದು ಪ್ರೊಡ್ಯೂಸರ್ ಗಿಲ್ಡ್ ಆ್ ಇಂಡಿಯಾ ಮನವಿ ಮಾಡಿದ್ದು, ರಣವೀರ್ ಸಿಂಗ್ ಹೆಸರು ಪ್ರಸ್ತಾಪಿಸದೆ ಚಾಟಿ ಬೀಸಿದೆ. ಈ ಬಗ್ಗೆ ಪ್ರಕಟಣೆ ಹೊರಡಿಸಿರುವ ಗಿಲ್ಡ್, ‘ಇಂತಹ ಘಟನೆಗಳು ಸಿನಿಮಾಗಳಿಗೆ ಹೆಚ್ಚು ಹಾನಿಯುಂಟು ಮಾಡುತ್ತವೆ. ಮುಂದೆ ವಿಶ್ವಾಸಾರ್ಹತೆ, ವ್ಯಾಪಾರದ ಮೇಲೆ ಪ್ರತಿಕೂಲ ಪರಿಣಾಮ ಬೀರುತ್ತದೆ. ಜತೆಗೆ ಇದನ್ನೇ ನಂಬಿರುವ ಸಾವಿರಾರು ಸಿನಿಮಾ ತಂತ್ರಜ್ಞರು, ಕಲಾವಿದರ ಜೀವನಕ್ಕೆ ಅಪಾಯವುಂಟು ಮಾಡಬಲ್ಲದು. ಹಾಗಾಗಿ, ಸಿನಿಮಾಗಳ ನಿರ್ಮಾಣಕ್ಕೆ ಯಾವುದೇ ಅಡೆ-ತಡೆಯಾಗದಂತೆ ನೋಡಿಕೊಳ್ಳುವುದು ಪ್ರತಿಯೊಬ್ಬರ ಜವಾಬ್ದಾರಿ’ ಎಂದು ಆಶಯ ವ್ಯಕ್ತಪಡಿಸಿದೆ.