ನಟನಾಗಿ ಸಿನಿ ಜಗತ್ತಿಗೆ ಕಾಲಿಟ್ಟ ಡ್ರೋನ್ ಪ್ರತಾಪ್..Drone Prathap Acting New Movie

Drone Prathap
Published on

Drone Prathap Acting New Movie:  ಬಿಗ್​ಬಾಸ್ ರಿಯಾಲಿಟಿ ಶೋ​ ಮೂಲಕ ಕನ್ನಡಿಗರ ಮನ ಗೆದ್ದಿದ್ದ  ಡ್ರೋನ್ ಪ್ರತಾಪ್ ಹೀರೋ ಆಗಿ ಸಿನಿಮಾವೊಂದರಲ್ಲಿ ಅಭಿನಯ ಮಾಡುತ್ತಿದ್ದಾರೆ.

ಡ್ರೋನ್ ಪ್ರತಾಪ್ ಅವರು ನಾಯಕ ನಟನಾಗಿ ಇನ್ನು ಹೆಸರು ಇಡದ ಕನ್ನಡದ ಸಿನಿಮಾವೊಂದರಲ್ಲಿ ಅಭಿನಯ ಮಾಡುತ್ತಿದ್ದಾರೆ. ಸ್ವತಹ ಪ್ರತಾಪ್ ಈ ಬಗ್ಗೆ ತಮ್ಮ ಇನ್​ಸ್ಟಾ ಅಕೌಂಟ್​ನಲ್ಲಿ ವಿಡಿಯೋವೊಂದನ್ನ ಶೇರ್ ಮಾಡಿದ್ದಾರೆ.

ಡ್ರೋನ್ ಪ್ರತಾಪ್ ಶೇರ್ ಮಾಡಿರುವ ವಿಡಿಯೋದಲ್ಲಿ ಕಾರಿನಿಂದ ಇಳಿಯುತ್ತಿದ್ದಂತೆ ನೇರ ಮಂಡ್ಯದ ಕೆ.ಆರ್ ಪೇಟೆಯ ಹುನುಮಾನ್ ದೇವಾಲಯಕ್ಕೆ ಭೇಟಿ ನೀಡಿದ್ದಾರೆ.​ ಅಲ್ಲಿ ದೇವರ ದರ್ಶನ ಪಡೆದು ಒಳ್ಳೆಯದಾಗಲಿ ಎಂದು ದೇವರ ಬಳಿ ಕೇಳಿಕೊಂಡಿದ್ದಾರೆ.

ನಾನು ಹೊಸ ಸಿನಿಮಾದಲ್ಲಿ ನಾಯಕ ನಟನಾಗಿ ಅಭಿನಯಿಸುತ್ತಿದ್ದೇನೆ. ನನ್ನ ಬ್ಯುಸಿನೆಸ್ ಜೊತೆಗೆ ಸಿನಿಮಾ ರಂಗಕ್ಕೂ ಕಾಲಿಡುತ್ತಿದ್ದೇನೆ. ಇದಕ್ಕೆ ನಿಮ್ಮೆಲ್ಲ ಆಶೀರ್ವಾದ ಬೇಕು ಎಂದು ವೇದಿಕೆ ಮೇಲೆ ಹೇಳಿದ್ದಾರೆ.  ಈ ವಿಡಿಯೋ ವೈರಲ್​​ ಆಗುತ್ತಿದ್ದಂತೆ  ಅಭಿಮಾನಿಗಳು ಶುಭಾಶಯಕೋರಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net