ಚಾಲಕರೇ, ಆರೋಗ್ಯ ಕಾಳಜಿ ವಹಿಸಿ

HEALTH CAMP
ತೀರ್ಥಹಳ್ಳಿ ಲಯನ್ಸ್ ಕ್ಲಬ್‌ನಿಂದ ಚಾಲಕರಿಗೆ ಆರೋಗ್ಯ ತಪಾಸಣಾ ಶಿಬಿರ ನಡೆಸಲಾಯಿತು. ಕ್ಲಬ್ ಸದಸ್ಯರಾದ ಎಚ್.ಪಾಂಡುರಂಗಪ್ಪ, ರಾಮ ರಾವ್, ನಿರ್ಮಲಾನಂದ, ಕಾರ್ತಿಕ್ ಶರ್ಮಾ, ಕಿಮ್ಮನೆ ದಿವಾಕರ್, ರಾಘವೇಂದ್ರ ಇದ್ದರು.
Published on

ತೀರ್ಥಹಳ್ಳಿ: ದಿನದ ದುಡಿಮೆಯನ್ನೇ ಅವಲಂಬಿಸಿ ಬದುಕು ಸಾಗಿಸುವ ವಾಹನ ಚಾಲಕರೂ ಸೇರಿ ಶ್ರಮಿಕ ವರ್ಗದವರು ಬಹಳಷ್ಟಿದ್ದಾರೆ. ಒತ್ತಡದಲ್ಲಿ ಕಾರ್ಯನಿರ್ವಹಿಸುವ ನಡುವೆಯೂ ಆರೋಗ್ಯದ ಕಡೆಗೆ ಗಮನ ನೀಡಬೇಕು ಎಂದು ಲಯನ್ಸ್ ಕ್ಲಬ್ ಅಧ್ಯಕ್ಷ ನಂಬಳ ಮುರಳಿ ಹೇಳಿದರು.

ಲಯನ್ಸ್ ಕ್ಲಬ್‌ನಿಂದ ತಾಲೂಕು ಆರೋಗ್ಯ ಇಲಾಖೆ ಸಹಕಾರದಲ್ಲಿ ಪಟ್ಟಣದ ಮುಖ್ಯ ಬಸ್ ನಿಲ್ದಾಣದಲ್ಲಿ ಶುಕ್ರವಾರ ಆಯೋಜಿಸಿದ್ದ ಚಾಲಕರ ಆರೋಗ್ಯ ಉಚಿತ ತಪಾಸಣಾ ಶಿಬಿರದಲ್ಲಿ ಮಾತನಾಡಿದರು.
ಪ್ರಮುಖ ಮಾರ್ಗಗಳು ಹಾಗೂ ದೂರದ ಊರುಗಳಿಗೆ ಸಂಚರಿಸುವ ಬಸ್ ಚಾಲಕರಿಗೆ ಹೆದ್ದಾರಿಯ ಅಡೆತಡೆಗಳು, ಸಮಯಪಾಲನೆ ಮತ್ತಿತರ ಕಾರಣಗಳಿಂದ ಸಮಯಕ್ಕೆ ಸರಿಯಾಗಿ ತಿಂಡಿ, ಊಟ ಸಿಗುವುದಿಲ್ಲ. ಹೀಗಾಗಿ ಈ ಚಾಲಕರು ಯಾವುದೇ ವ್ಯಸನಗಳಿಗೆ ಬಲಿಯಾಗದೆ ಕಾಳಜಿ ವಹಿಸಬೇಕು ಎಂದರು.
ಆರೋಗ್ಯ ತಪಾಸಣೆ ನಡೆಸಿದ ತಾಲೂಕು ವೈದ್ಯಾಧಿಕಾರಿ ಡಾ. ಅನಿಕೇತನ್ ಮಾತನಾಡಿ, ತಪಾಸಣೆ ನಡೆಸಿದವರಲ್ಲಿ ರಕ್ತದೊತ್ತಡ, ಮಧುಮೇಹ ಅಧಿಕವಾಗಿದೆ. ಈ ಬಗ್ಗೆ ಅಲಕ್ಷ್ಯ ಮಾಡದೆ ಆರೋಗ್ಯದ ಬಗ್ಗೆ ಗಮನ ಹರಿಸಬೇಕು ಎಂದು ತಿಳಿಸಿದರು.
ಕ್ಲಬ್ ಸದಸ್ಯರಾದ ಎಚ್.ಪಾಂಡುರಂಗಪ್ಪ, ರಾಮ ರಾವ್, ನಿರ್ಮಲಾನಂದ, ಕಾರ್ತಿಕ್ ಶರ್ಮ, ಕಿಮ್ಮನೆ ದಿವಾಕರ್, ರಾಘವೇಂದ್ರ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net