ಪ್ರಯಾಣಿಕರಿಗಾಗಿ ತನ್ನ ಕ್ಯಾಬ್‌ನ್ನು ಮಿನಿ ಮಾರ್ಟ್ ಆಗಿ ಬದಲಾಯಿಸಿದ ಡ್ರೈವರ್‌! ಆತನ ಈ ಕೆಲಸಕ್ಕೆ ನೆಟ್ಟಿಗರು ಫಿದಾ..Viral Video

Viral Video
Published on

Viral Video: ಕ್ಯಾಬ್ ಚಾಲಕರ ಅಸಭ್ಯ ವರ್ತನೆ, ವೇಗದ ಚಾಲನೆ, ಸಭ್ಯತೆಯ ಕೊರತೆಯಂತಹ ಹಲವು ಕಾರಣಗಳಿಗಾಗಿ ಜನರು ಅವರ ಬಗ್ಗೆ ದೂರು ನೀಡುವುದನ್ನು ನಾವು ನೋಡಿದ್ದೇವೆ. ಆದರೆ ಇಲ್ಲೊಬ್ಬ ಕ್ಯಾಬ್ ಡ್ರೈವರ್‌ ತನ್ನ ಪ್ರೀತಿಯ ಪ್ರಯಾಣಿಕರಿಗಾಗಿ ಮಾತ್ರ ತನ್ನ ಕ್ಯಾಬ್ ಅನ್ನು ಮಿನಿ ಮಾರ್ಟ್ಆಗಿ ಪರಿವರ್ತಿಸಿದ್ದಾನೆ. ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗಿದ್ದು, ನೆಟ್ಟಿಗರ ಮೆಚ್ಚುಗೆಗೆ ಕಾರಣವಾಗಿದೆ.

ಸಿಂಗಾಪುರದ ಈ ಕ್ಯಾಬ್ ಚಾಲಕ ಪ್ಯಾಂಗ್ ತಮ್ಮ ವಾಹನದಲ್ಲಿ ಕ್ಯಾಂಡಿ, ತಿಂಡಿ, ಬಾಟಲ್ ನೀರು ಮತ್ತು ಕೇಬಲ್‌ಗಳನ್ನು ಚಾರ್ಜ್ ವ್ಯವಸ್ಥೆಯನ್ನು ತಮ್ಮ ಕ್ಯಾಬ್‌ನಲ್ಲಿ ಮಾಡಿದ್ದಾರೆ.

@mustsharenews ಅವರು Instagram ನಲ್ಲಿ ಪೋಸ್ಟ್ ಮಾಡಿದ ಈ ವಿಡಿಯೋದಲ್ಲಿ, ಗ್ರಾಹಕರಿಗೆ ಹೆಚ್ಚುವರಿ ಸೇವೆಗಳನ್ನು ನೀಡುವ ಹಿಂದಿನ ಕಾರಣಗಳ ಬಗ್ಗೆ ಪ್ಯಾಂಗ್ ವಿವರಿಸುವುದನ್ನು ಕಾಣಬಹುದು. ಪ್ರಯಾಣಿಕರು ತಮ್ಮ ಸಾರಿಗೆಯ ಸಮಯದಲ್ಲಿ ಗುಣಮಟ್ಟದ ಸಮಯವನ್ನು ಹೇಗೆ ಕಳೆಯಬಹುದು ಮತ್ತು ಉತ್ತಮವಾದ ಸೇವೆ ಸಲ್ಲಿಸಲು ಇದು ಸೂಕ್ತ ಎಂದು ಪ್ಯಾಂಗ್ ಅಭಿಪ್ರಾಯವಾಗಿದೆ.

ಮಿನಿ ಮಾರ್ಟ್ ಆಗಿ ಬದಲಾದ ಕ್ಯಾಬ್

ಪ್ಯಾಂಗ್ ತಿಂಡಿಗಳು, ಮಕ್ಕಳು ಮತ್ತು ವಯಸ್ಕರಿಗೆ ವಿವಿಧ ಕ್ಯಾಂಡಿಗಳು, ಉಚಿತ ಆಟಗಳು, ಬಾಟಲ್ ನೀರು ಮತ್ತು ಎಲ್ಲಾ ರೀತಿಯ ಚಾರ್ಜಿಂಗ್ ಕೇಬಲ್‌ಗಳ ವ್ಯವಸ್ಥೆಯನ್ನು ತಮ್ಮ ಕ್ಯಾಬ್‌ನಲ್ಲಿ ಮಾಡಿದ್ದಾರೆ. ಅವರು ತಮ್ಮ ಪ್ರಯಾಣಿಕರು ಖಾಲಿ ಕೈಗಳಿಂದ ಹೋಗದಂತೆ ಮತ್ತು ಅವರು ನೀಡುವ ಯಾವುದೇ ವಿಷಯಕ್ಕೆ ಯಾವುದೇ ಶುಲ್ಕ ವಿಧಿಸದಂತೆ ನೋಡಿಕೊಳ್ಳುತ್ತಾರೆ.

"ಮೊದಲಿಗೆ, ಬಹಳಷ್ಟು ಜನರು ನನ್ನ ಕೇಬಲ್ ಅನ್ನು ಎರವಲು ಪಡೆಯುತ್ತಿದ್ದರು, ಆದ್ದರಿಂದ ನಾನು ಅವರಿಗೆ ಪ್ರತ್ಯೇಕವಾದ ಕೇಬಲ್ ಅನ್ನು ಒದಗಿಸಿದೆ. ನಂತರ, ಅನೇಕ ಜನರು ಧೂಮಪಾನ ಮಾಡುತ್ತಿದ್ದರು ಅಥವಾ ಮಕ್ಕಳು ನೇರವಾಗಿ ಕುಳಿತುಕೊಳ್ಳಲು ಸಾಧ್ಯವಾಗುತ್ತಿರಲಿಲ್ಲ. ಹಾಗಾಗಿ ನಾನು ಅವರಿಗೆ ಕ್ಯಾಂಡಿಗಳನ್ನು ಒದಗಿಸಿದೆ. ಈ ರೀತಿಯ ಸೇವೆಯನ್ನು ನೋಡಿದ ನಂತರ ಹೆಚ್ಚಿನ ಗ್ರಾಹಕರು ಆಘಾತಕ್ಕೊಳಗಾಗುತ್ತಾರೆ. ನಂತರ ನಾನು 'ಎಲ್ಲವೂ ಉಚಿತ' ಎಂದು ಹೇಳುತ್ತೇನೆ. ನಂತರ ಅವರು ತಿನ್ನಲು ಪ್ರಾರಂಭಿಸುತ್ತಾರೆ" ಎಂದು ಕ್ಯಾಬ್‌ ಡ್ರೈವರ್‌ ಪ್ಯಾಂಗ್ ಹೇಳಿದ್ದಾರೆ.

ಪ್ಯಾಂಗ್ ತನ್ನ ಕಾರ್ಪೊರೇಟ್ ಕೆಲಸವನ್ನು ತೊರೆದು ಕ್ಯಾಬ್‌ ಡ್ರೈವರ್ ಆದರು. ಹಿಂದೆ, ಅವರು ಹೆಡ್‌ಫೋನ್ ನೆಟ್‌ವರ್ಕ್ ಅಳವಡಿಸುವ ಕೆಲಸ ಮಾಡುತ್ತಿದ್ದರು. ಅವರ ಕೆಲಸವು ಒತ್ತಡದಿಂದ ಕೂಡಿತ್ತು. ಅವರು ತಮ್ಮ ವೃತ್ತಿಯನ್ನು ಬದಲಾಯಿಸಿ ಈ ಕೆಲಸವನ್ನು ನೆಮ್ಮದಿಯಿಂದ ಮಾಡುತ್ತಿದ್ದಾರೆ ಎಂದು ಹೆಳಿದರು. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net