ಬಸ್​ ಸೀಟಿನ ಕೆಳಗಿತ್ತು ಮಾಂಗಲ್ಯ ಸರ! ಚಾಲಕ ಹಾಗೂ ನಿರ್ವಾಹಕ ಮಾಡಿದ್ದಿಷ್ಟು…

bus conductor
Published on

ಮೈಸೂರು: ಕೆಎಸ್​ಆರ್ಟಿಸಿ ಬಸ್ಸನಲ್ಲಿ ಮಹಿಳೆಯೊಬ್ಬರು ತಮ್ಮ ಮಾಂಗಲ್ಯ ಸರ ಕಳೆದುಕೊಂಡಿದ್ದರು. ಅದನ್ನು ಹುಡುಕಿಕೊಂಡು ಆ ಮಹಿಳೆ ಡಿಪೋವರೆಗೆ ಬಂದಾಗ ಈ ಚಾಲಕ ಹಾಗೂ ನಿರ್ವಾಹಕರು ಚಿನ್ನದ ಸರವನ್ನು ಹಿಂತಿರುಗಿಸಿದ್ದಾರೆ.

ಈ ಘಟನೆ ನಡೆದದ್ದು ಮೈಸೂರು ಜಿಲ್ಲೆಯ ಹುಣಸೂರಿನಲ್ಲಿ. ಹುಣಸೂರು ಕೊಯಮುತ್ತೂರು ಮಾರ್ಗದ ಬಸ್ ಚಾಲಕ-ನಿರ್ವಾಹಕರಾದ ತಾಂಡವಮೂರ್ತಿ ಹಾಗೂ ಆರ್.ಪಿ.ಶಿವಕುಮಾರ್​ಗೆ ಈ ಮಹಿಳೆಯ ಚಿನ್ನದ ಸರ ಸಿಕ್ಕಿತ್ತು.

ನಂಜನಗೂಡು ತಾಲೂಕಿನ ಸುತ್ತೂರು ಗ್ರಾಮದ ಸುಮ ಎಂಬುವವರು ಇತ್ತೀಚೆಗೆ ನಂಜನಗೂಡಿನಿಂದ ಚಾಮರಾಜನಗರಕ್ಕೆ ಪ್ರಯಾಣಿಸಿದ್ದರು. ಈ ಸಂದರ್ಭದಲ್ಲಿ ಚಿನ್ನದ ಸರ ಕಳೆದುಕೊಂಡಿದ್ದರು. ಅವರು ಕುಳಿತಿದ್ದ ಸೀಟಿನ ಕೆಳಗೆಯೇ ಮಾಂಗಲ್ಯದ ಸರ ಬಿದ್ದಿತ್ತು. ತಮ್ಮ ವಾಹನದಲ್ಲಿ ಸರ ಪತ್ತೆ ಆಗುತ್ತಿದ್ದಂತೆಯೇ ಈ ಬಗ್ಗೆ ಚಾಲಕ ಹಾಗೂ ನಿರ್ವಾಹಕರು ಡಿಪೋಗೆ ಮಾಹಿತಿ ನೀಡಿದ್ದರು.

ಇದಾಗುತ್ತಿದ್ದಂತೆಯೇ ಬಸ್‌ನಲ್ಲಿ ಸರ ಬಿದ್ದಿರಬಹುದು ಎಂದು ಡಿಪೋಗೆ ಸುಮ ಹುಡುಕಿಕೊಂಡು ಬಂದಿದ್ದಾರೆ. ಈ ವೇಳೆ ಸುಮಗೆ ಚಾಲಕ ನಿರ್ವಾಹಕ ಮಾಂಗಲ್ಯ ಸರ ವಾಪಸ್ಸು ನೀಡಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net