

ನ್ಯೂಯಾರ್ಕ್: ಸಿಸಿಟಿವಿಯಲ್ಲಿ ಸೆರೆಯಾಗಿರುವ ಭೀಕರ ದೃಶ್ಯ ಎಂತಹವರನ್ನೂ ಬೆಚ್ಚಿಬೀಳಿಸುತ್ತೆ. ಅಂಗಡಿಯಲ್ಲಿ ಕೆಲಸಗಾರರಿಬ್ಬರು ಮಾತುಕತೆಯಲ್ಲಿ ನಿರತರಾಗಿರುತ್ತಾರೆ. ಆಗಲೇ ಎಲ್ಲಿಂದಲೋ ಬರುವ ಕಾರು ಏಕಾಏಕಿ ಅಂಗಡಿಯೊಳಗೆ ನುಗ್ಗಿದೆ. ಈ ಭೀಕರ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ.
ಇಂತಹದ್ದೊಂದು ಘಟನೆ ನಡೆದಿರುವುದು ಅಮೆರಿಕದ ಅರಿಜೋನಾ ನಗರದಲ್ಲಿ, ಅಂಗಡಿಯೊಳಗೆ ನುಗ್ಗಿದ ಕಾರು ಡಿಕ್ಕಿಯ ರಭಸಕ್ಕೆ 25 ಅಡಿಗಳಷ್ಟು ದೂರದವರೆಗೂ ಕ್ರಮಿಸಿದೆ. ಅದೃಷ್ಟವಶಾತ್ ಇಬ್ಬರು ಕೆಲಸಗಾರರು ಪ್ರಾಣಾಪಾಯದಿಂದ ಪಾರಾಗಿದ್ದಾರೆ.
ದೃಶ್ಯದಲ್ಲಿರುವಂತೆ ಅಂಗಡಿಯೊಳಗೆ ಇಬ್ಬರು ತಮ್ಮಷ್ಟಕ್ಕೆ ತಾವು ಮಾತಾಡುತ್ತಿರುತ್ತಾರೆ. ಬಿಳಿ ಬಣ್ಣದ ಕಾರು ಗಾಜಿನ ಡೋರನ್ನು ಒಡೆದು ಏಕಾಏಕಿ ಒಳ ನುಗ್ಗಿದ್ದು, ಇಬ್ಬರನ್ನು ಡಿಕ್ಕಿ ಹೊಡೆದು ಎಳೆದುಕೊಂಡು ಹೋಗಿರುವ ದೃಶ್ಯ ನೋಡುಗರಲ್ಲಿ ಭಯವನ್ನು ಹುಟ್ಟಿಸುವಂತಿದೆ.
ಈ ದೃಶ್ಯ ಅಂಗಡಿಯ ಸಿಸಿಟಿವಿಯಲ್ಲಿ ಸೆರೆಯಾಗಿದ್ದು, ಸ್ವತಃ ಪೊಲೀಸರೇ ಈ ವಿಡಿಯೋವನ್ನು ತಮ್ಮ ಅಧಿಕೃತ ಖಾತೆಯಲ್ಲಿ ಹಾಕಿಕೊಂಡಿದ್ದಾರೆ. ಸದ್ಯ ಸಾಮಾಜಿಕ ಜಾಲತಾಣದಲ್ಲಿ ಇದು ಭಾರೀ ವೈರಲ್ ಆಗುತ್ತಿದೆ. ಇನ್ನು ಘಟನೆಗೆ ಚಾಲಕನ ಅಜಾಗರೂಕತೆಯೇ ಕಾರಣ ಎಂದಿರುವ ಇಲ್ಲಿನ ಪೊಲೀಸರು ಆತನನ್ನು ಬಂಧಿಸಿದ್ದಾರೆ. (ಏಜೆನ್ಸೀಸ್)