ಭರತನಾಟ್ಯ ತರಬೇತಿ ಶಿಬಿರಕ್ಕೆ ಚಾಲನೆ

26hos2p school
ಹೊಸನಗರದ ಶಾಸಕರ ಮಾದರಿ ಶಾಲೆಯಲ್ಲಿ ಭರತನಾಟ್ಯ ಶಿಬಿರಕ್ಕೆ ರಮೇಶ ನೇರಲೆ ಚಾಲನೆ ನೀಡಿದರು. ರೋಹಿಣಿ, ಹರೀಶ್, ನಾಸೀರ್ ಇತರರಿದ್ದರು.
Published on

ಹೊಸನಗರ: ಸಂಗೀತ, ನೃತ್ಯ ಕಲೆಗಳಲ್ಲಿ ಭರತನಾಟ್ಯಕ್ಕೆ ವಿಶೇಷ ಸ್ಥಾನವಿದೆ ಎಂದು ಶಾಸಕರ ಮಾದರಿ ಶಾಲೆ ಎಸ್‌ಡಿಎಂಸಿ ಅಧ್ಯಕ್ಷ ರಮೇಶ್ ನೆರಲೆ ಹೇಳಿದರು.

ಪಟ್ಟಣದ ಶಾಸಕರ ಸರ್ಕಾರಿ ಮಾದರಿ ಹೆಣ್ಣು ಮಕ್ಕಳ ಪ್ರಾಥಮಿಕ ಶಾಲೆ ವಿದ್ಯಾರ್ಥಿಗಳಿಗೆ ಹಮ್ಮಿಕೊಂಡಿದ್ದ ಭರತನಾಟ್ಯ ತರಬೇತಿ ಶಿಬಿರ ಉದ್ಘಾಟಿಸಿ ಮಾತನಾಡಿ, ಪುರಾಣ ಕಾಲದಿಂದಲೂ ಭರತನಾಟ್ಯ ಪ್ರಸಿದ್ಧಿ ಪಡೆದಿದೆ. ಮಕ್ಕಳು ಬಾಲ್ಯದಿಂದ ಆಸಕ್ತಿ ತೋರಿದಲ್ಲಿ ಭರತನಾಟ್ಯ ಕಲೆಯನ್ನು ಸಿದ್ಧಿ ಮಾಡಿಕೊಳ್ಳಬಹುದು ಎಂದರು.

ಉಪಾಧ್ಯಕ್ಷೆ ರೋಹಿಣಿ, ಮುಖ್ಯಶಿಕ್ಷಕ ಹರೀಶ್, ನಾಸೀರ್, ಸದಸ್ಯರು, ಶಿಕ್ಷಕರು ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net