ಗಿಡಗಳ ಪೋಷಣೆ ಕಾರ್ಯಕ್ಕೆ ಚಾಲನೆ

HUN-JULY-28-1(BJP PROGRAMME)
Published on

ಹುಣಸೂರು: ವಿಶ್ವ ಪರಿಸರ ಸಂರಕ್ಷಣಾ ದಿನಾಚರಣೆ ಅಂಗವಾಗಿ ನಗರ ಬಿಜೆಪಿ ವತಿಯಿಂದ ಮಂಗಳವಾರ ಪಟ್ಟಣ ವ್ಯಾಪ್ತಿಯಲ್ಲಿ 200ಕ್ಕೂ ಹೆಚ್ಚು ಗಿಡಗಳನ್ನು ನೆಟ್ಟು ಪೋಷಿಸುವ ಕಾರ್ಯಕ್ಕೆ ಚಾಲನೆ ನೀಡಲಾಯಿತು.

ಪಟ್ಟಣದ ಕರಿಗೌಡರ ಬೀದಿಯ ಸರ್ಕಾರಿ ಮಾದರಿ ಪ್ರೌಢಶಾಲೆಯ ಆವರಣದಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಬಿಜೆಪಿ ಗ್ರಾಮಾಂತರ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಮಹೇಶ್ ಸಸಿ ನೆಟ್ಟು ಟ್ರೀ ಗಾರ್ಡ್ ಅಳವಡಿಸುವ ಮೂಲಕ ಚಾಲನೆ ನೀಡಿದರು.
ನಂತರ ಮಾತನಾಡಿದ ಅವರು, ರಾಜ್ಯಾದ್ಯಂತ ಪಕ್ಷದ ವತಿಯಿಂದ ಮೂರು ದಿನ ಪರಿಸರ ಸಂರಕ್ಷಣಾ ಅಭಿಯಾನ ಮುಂದುವರಿಯಲಿದೆ. ಪರಿಸರ ರಕ್ಷಣೆಯಿಲ್ಲದೆ ಮನುಕುಲ ಉಳಿಯುವುದಿಲ್ಲ. ಈ ನಿಟ್ಟಿನಲ್ಲಿ ಪಕ್ಷದ ಕಾರ್ಯಕರ್ತರು ಪರಿಸರ ಕಾಪಾಡುವತ್ತ ತೊಡಗಿಸಿಕೊಳ್ಳಬೇಕು ಎಂದರು.

ನಗರ ಅಧ್ಯಕ್ಷ ಗಣೇಶ್ ಕುಮಾರಸ್ವಾಮಿ ಮಾತನಾಡಿ, ನಗರಸಭೆ ವ್ಯಾಪ್ತಿಯ 41 ವಾರ್ಡ್‌ಗಳಲ್ಲಿ ತಲಾ 5 ಸಸಿಗಳನ್ನು ನೆಟ್ಟು ಟ್ರೀ ಗಾರ್ಡ್ ಅಳವಡಿಸಲಾಗುವುದು. ಅವಕಾಶವಿರುವ ಸ್ಥಳಗಳಲ್ಲಿ ಸಸಿ ನೆಡಲು ಪಕ್ಷದ ಕಾರ್ಯಕರ್ತರಿಗೆ ಪ್ರೋತ್ಸಾಹಿಸಲಾಗುವುದು ಎಂದು ತಿಳಿಸಿದರು.
ಬಿಜೆಪಿ ಜಿಲ್ಲಾ ಕಾರ್ಯದರ್ಶಿ ಭಾಗ್ಯಶ್ರೀ, ತಾಲೂಕು ಅಧ್ಯಕ್ಷ ನಾಗಣ್ಣಗೌಡ, ರೈತ ಮೋರ್ಚಾ ಜಿಲ್ಲಾಧ್ಯಕ್ಷ ಜಾಬಗೆರೆ ರಮೇಶ್, ನಗರ ಪ್ರಧಾನ ಕಾರ್ಯದರ್ಶಿ ರವಿಕುಮಾರ್, ಗ್ರಾಮಾಂತರ ಉಪಾಧ್ಯಕ್ಷೆ ವೆಂಕಟಮ್ಮ, ಗೋವಿಂದನಾಯ್ಕ, ವಿ.ಎನ್.ದಾಸ್, ನಾರಾಯಣ್, ಮಹಿಳಾ ಘಟಕದ ಅಧ್ಯಕ್ಷೆ ಸವಿತಾ ಚೌಹಾಣ್ ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net