

ವಾಷಿಂಗ್ಟನ್: ಟಿವಿ ಸೀರಸ್ ಮೂಲಕ ಜನಪ್ರಿಯತೆ ಪಡೆದ ನಟಿಗೆ ಇದ್ದಕ್ಕಿದ್ದಂತೆ ಅವಕಾಶಗಳು ದೂರಾದವು. ಸಾಲ ಹೆಚ್ಚಾಗಿ ಮನೆ ಕಳೆದುಕೊಳ್ಳುವ ಪರಿಸ್ಥಿತಿಯೂ ಎದುರಾಯಿತು. ಕಡೆಗೆ ದಿಕ್ಕುತೋಚದಿದ್ದಾಗ ಯೋಚನೆಯೊಂದು ಹೊಳೆಯಿತು. ಆ ನಟಿ ಧೈರ್ಯ ಮಾಡಿ ಪೋರ್ನ್ ಸೈಟ್‌ಗೆ ಸೇರಿದಳು. ಅಲ್ಲಿಂದ ಅದೃಷ್ಟ ಬದಲಾಯಿತು. ಸೇರಿದ ಐದೇ ನಿಮಿಷದಲ್ಲಿ ಎಲ್ಲ ಸಾಲ ತೀರಿ ಮನೆ ವಾಪಸ್ ಪಡೆದಿದ್ದಾಳೆ. ತನ್ನನ್ನು ಟೀಕಿಸುತ್ತಿದ್ದವರಿಗೆ ಖಡಕ್ ಉತ್ತರ ನೀಡಿ ಎಲ್ಲರ ಬಾಯಿಮುಚ್ಚಿಸಿದ್ದಾಳೆ.
ಇದನ್ನೂ ಓದಿ: ಸಿಎಂ ರಾಜೀನಾಮೆಗೆ ಸದನದಲ್ಲಿ ಬಿಜೆಪಿಗರ ಆಗ್ರಹ!
ಅತ್ಯಂತ ಜನಪ್ರಿಯ ಟಿವಿ ಸೀರಿಸ್ ಸೊಪ್ರನೊಸ್ ಕ್ರೈಮ್ ಡ್ರಾಮಾ. ಈ ಸೀರಿಸ್‌ನಲ್ಲಿ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡ ನಟಿ ಡ್ರಿಯಾ ಡೇ ಮ್ಯಾಟಿಯೋ ಮಾಡಿದ ಆ ಒಂದು ನಿರ್ಧಾರ ಜೀವನವನ್ನೇ ನರಕಕ್ಕೆ ತಳ್ಳಿತ್ತು. ಅಮೆರಿಕದ ಟಿವಿ ಸೀರಿಸ್ ಇಂಡಸ್ಟ್ರಿ ಕರೋನಾ ಲಸಿಕೆ ಕಡ್ಡಾಯ ಮಾಡಿತ್ತು. ಆದರೆ ಈಕೆ ಲಸಿಕೆ ಹಾಕಿಸಿಕೊಳ್ಳಲು ನಿರಾಕರಿಸಿದ್ದಳು. ಇದರಿಂದ ಈಕೆಗೆ ಅವಕಾಶಗಳು ಇಲ್ಲದಾಯಿತು. ಸಾಲ ಹೆಚ್ಚಾಯಿತು. ಕುಟುಂಬ ನಿರ್ವಹಣೆ ಕಷ್ಟವಾಯಿತು. ಮನೆ ಅಡವಿಟ್ಟು ಸಾಲ ಪಡೆದು ಹಿಂದಿರುಗಿಸಲು ಸಾಧ್ಯವಾಗಲಿಲ್ಲ. ಹೀಗಾಗಿ ಇರುವ ಮನೆಯನ್ನು ಕಳೆದೆುಕೊಳ್ಳಬೇಕಾಯಿತು.
ಕಡೆಗೆ ತನ್ನ ಖಾತೆಯಲ್ಲಿ ಕೇವಲ 10 ಅಮೆರಿಕನ್ ಡಾಲರ್ ಮಾತ್ರ ಉಳಿದಿತ್ತು. ಅವಕಾಶಗಳು ಇಲ್ಲದ ಕಾರಣ ಬೇರೆ ದಾರಿ ಕಾಣದೆ ಮ್ಯಾಟಿಯೋ, ವಿವಾದಿತ ಫೋರ್ನ್ ಸೈಟ್ ಒನ್ಲಿ ಫ್ಯಾನ್ಸ್‌ಗೆ ಸೇರಿಕೊಳ್ಳುವ ಗಟ್ಟಿ ನಿರ್ಧಾರ ಮಾಡಿದ್ದಳು. ಇದರಲ್ಲಿ ನಟ ನಟಿಯರು ಅಡಲ್ಟ್ ವಿಡಿಯೋಗಳು, ಫೋಟೋಗಳ ಮೂಲಕ ಆದಾಯಗಳಿಸುತ್ತಾರೆ. ಮ್ಯಾಟಿಯೋ ಕೂಡ ಈ ಪೋರ್ನ್ ಸೈಟ್‌ಗೆ ಸೇರಿ ಐದೇ ನಿಮಿಷದಲ್ಲಿ ಎಲ್ಲ ಸಾಲ ತೀರಿಸಿಕೊಂಡಿದ್ದಾಳೆ. ಕಳೆದುಕೊಂಡ ಮನೆ ವಾಪಸ್ ಪಡೆದು ನೆಮ್ಮದಿಕಂಡುಕೊಂಡಿದ್ದಾಳೆ. ಈಕೆಯ ವಿಡಿಯೋ ಹಾಗೂ ಫೋಟೋಗಳಿಗೆ ಹೆಚ್ಚು ಲೈಕ್ಸ್ ಬಂದಿವೆ.
ಇನ್ನು ಈ ನಟಿ ಪೋರ್ನ್ ಸೈಟ್‌ಗೆ ಸೇರಿದ್ದು ಕೆಲವು ಅಭಿಮಾನಿಗಳ ಆಕ್ರೋಶಕ್ಕೆ ಕಾರಣವಾಗಿತ್ತು. ಆದರೆ ಎಲ್ಲರೂ ನಡು ನೀರಿನಲ್ಲಿ ಕೈಬಿಟ್ಟಾಗ ನನ್ನನ್ನು ಉಳಿಸಿದ್ದು ಒನ್ಲಿ ಫ್ಯಾನ್ಸ್. ಇದು ನೂರಕ್ಕೆ ನೂರು ಸತ್ಯ ಎಂದು ಮ್ಯಾಟಿಯೋ ಹೇಳಿಕೊಂಡಿದ್ದಾಳೆ.
ನನ್ನ ಮನೆ ಕಳೆದುಕೊಂಡ ಬೆನ್ನಲ್ಲೇ ತಾಯಿ ನಿಧನರಾದರು. ಕೈಯಲ್ಲಿ ದುಡ್ಡಿರಲಿಲ್ಲ. ಒನ್ಲಿ ಫ್ಯಾನ್ಸ್ ಸೇರಿದ ನಂತರ ಎಲ್ಲ ಕಷ್ಟಗಳಿಂದ ಮುಕ್ತವಾಗಿದ್ದೇನೆ. ಟ್ರೋಲ್ ಮಾಡುತ್ತಿರುವರಿಗೆ ನಾನು ಉತ್ತರ ಕೊಡಬೇಕಿಲ್ಲ ಎಂದು ಮ್ಯಾಟಿಯೋ ಹೇಳಿದ್ದಾರೆ.