ದ್ರೌಪದಿಯ ಕಥೆ ಮೂಲಕ ನಿಧಿಸಂಗ್ರಹ; ಸರ್ಕಾರಿ ಶಾಲೆಗಳ ದತ್ತು

Untitled
Published on

ಬೆಂಗಳೂರು: ರೋಟರಿ ಸೌತ್ಎಂಡ್ ಸಂಸ್ಥೆ ನಾಟಕದ ಮೂಲಕ ನಿಧಿ ಸಂಗ್ರಹ ಮಾಡುತ್ತಾ ಬೆಂಗಳೂರಿನ ಕೆಲವು ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಗಳನ್ನು ದತ್ತು ಪಡೆಯುತ್ತಿದ್ದಾರೆ. ದತ್ತು ಪಡೆದ ಶಾಲೆಗಳಿಗೆ ಸೂಕ್ತ ಮೂಲಸೌಕರ್ಯ, ಶೌಚಾಲಯ ಸೇರಿದಂತೆ ಸಮಕಾಲೀನ ತರಗತಿ ಕೊಠಡಿಗಳು, ಕಾಂಪೌಂಡ್ ಗೋಡೆಗಳ ನಿರ್ಮಾಣ ಹಾಗೂ ಇತರ ಆಧುನಿಕ ತಂತ್ರಜ್ಞಾನದ ಶೈಕ್ಷಣಿಕ ಉಪಕರಣಗಳನ್ನು ನೀಡುತ್ತಾ ಬಂದಿದೆ.

ಇದೇ ಸಂಸ್ಥೆಯ ಮತ್ತೊಂದು ವಿಶೇಷ ನಿಧಿಸಂಗ್ರಹ ಅಭಿಯಾನದ ಭಾಗವಾಗಿ, "ದ್ರೋಪತಿ ಹೇಳ್ತವ್ಳೆ" ನಾಟಕ ಪ್ರದರ್ಶನ ನಡೆಯಲಿದೆ. ಈ ನಾಟಕವು ಜನಪದ ಹಾಗು ಕುಮಾರವ್ಯಾಸ ಭಾರತದ ಸಂಗಮವಾಗಿರುತ್ತದೆ. ಇಲ್ಲಿ ದ್ರೌಪದಿಯ ಬದುಕಿನ ಕೆಲ ಮುಖ್ಯ ಘಟನೆಗಳನ್ನಷ್ಟೆ ಇಟ್ಟು ಕಥೆ ಕಟ್ಟಲಾಗಿದೆ. ದ್ರೌಪದಿ ಜಗದ ಎಲ್ಲ ಸ್ತ್ರೀಯರ ಆಂತರ್ಯದೊಳಗಡಗಿರುವ ಒಂದು ಅನೂಹ್ಯ ಪಾತ್ರ.

ರೋಟರಿ ಸೌತ್ಎಂಡ್ ಸಂಸ್ಥೆಯಿಂದ ನಡೆಸುವ ನಾಟಕ
ರೋಟರಿ ಸೌತ್ಎಂಡ್

ಎಲ್ಲಾ ಹೆಂಗಳೆಯರ ಒಳಗಿನ ಒಂದು ತಂಪಗಿನ ಬೆಂಕಿ. ಈ ನಾಟಕವನ್ನು ಬೆಂಗಳೂರಿನ ರಂಗಾಸ್ಥೆ ತಂಡ ಪ್ರದರ್ಶಿಸಲಿದ್ದು, ಗಣೇಶ್ ಮಂದಾರ್ತಿ ಈ ನಾಟಕವನ್ನು ವಿನ್ಯಾಸ ಮತ್ತು ನಿರ್ದೇಶನ ಮಾಡಿದ್ದಾರೆ. ಈ ನಾಟಕವು ಏಪ್ರಿಲ್ 8 ರಂದು ಸಂಜೆ 7 ಕ್ಕೆ, ರವೀಂದ್ರ ಕಲಾಕ್ಷೇತ್ರದಲ್ಲಿ ಪ್ರದರ್ಶನಗೊಳ್ಳಲಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net