

ಬೆಂಗಳೂರು: ವರನಟ ಡಾ.ರಾಜ್ ಕುಮಾರ್ ಅವರ ವಿಷಯದಲ್ಲಿ ನಾಲಿಗೆ ಹರಿಯಬಿಟ್ಟ ಶಾಸಕ ಎನ್.ಎ.ಹ್ಯಾರಿಸ್ ವಿರುದ್ಧ ಆಕ್ರೋಶ ಭುಗಿಲೆದ್ದಿದೆ.
ವಿವಾದ ಹೆಚ್ಚಾಗುತ್ತಿದ್ದಂತೆ ಎಚ್ಚೆತ್ತ ಹ್ಯಾರಿಸ್, ಕ್ಷಮೆಯಾಚಿಸಿದ ವಿಡಿಯೋವನ್ನು ತನ್ನ ಫೇಸ್ಬುಕ್ನಲ್ಲಿ ಬಿಡುಗಡೆ ಮಾಡಿದ್ದಾರೆ. ಡಾ.ರಾಜ್ ಅಂದ್ರೆ ಕನ್ನಡನಾಡಿನ ಗೌರವ, ಕನ್ನಡದ ಕಣ್ಮಣಿ. ಅಣ್ಣಾವ್ರಿಗೆ ಕೋಟ್ಯಂತರ ಅಭಿಮಾನಿಗಳಿದ್ದಾರೆ. ಊರೂರಲ್ಲಿ ಅಣ್ಣಾವ್ರ ಪ್ರತಿಮೆ ನಿರ್ಮಿಸಿ ಪೂಜೆ ಮಾಡುತ್ತಿದ್ದಾರೆ. ಅವರ ಹೆಸರಲ್ಲಿ ಅನ್ನದಾನ, ರಕ್ತದಾನ, ಆರೋಗ್ಯ ಶಿಬಿರದಂತಹ ಸಮಾಜಮುಖಿ ಕೆಲಸಗಳು ನಡೆಯುತ್ತಿವೆ. ಹೀಗಿರುವ ಶಾಸಕ ಹ್ಯಾರಿಸ್ ಬಹಿರಂಗವಾಗಿಯೇ ಅಣ್ಣಾವ್ರ ಪ್ರತಿಮೆ ವಿವಾರವಾಗಿ ನಾಲಗೆ ಹರಿಯಬಿಟ್ಟಿದ್ದಾರೆ. ಇದನ್ನೂ ಓದಿರಿ ಬನ್ನಿ ಬ್ರದರ್, ರಾಮಮಂದಿರಕ್ಕೆ ಹೋಗಿ ಬರೋಣ: ಎಚ್ಡಿಕೆಯನ್ನು ಶ್ರೀರಾಮುಲು ಕರೆದಿದ್ದೇಕೆ?
'ಸ್ಟ್ಯಾಚ್ಯು ಇಡುವುದೇ ದೊಡ್ಡ ಕತೆ, ಅದರಲ್ಲಿ ಆಫೀಸ್ ಬೇರೆ ಮಾಡಿ ಕೊಡುವುದಕ್ಕೆ ಆಗುತ್ತಾ? ಮೇಲೆ ಪ್ರೊಟೆಕ್ಷನ್ ಏನೂ ಬೇಕಾಗಿಲ್ಲ. ಓಪನ್ ಆಗೆ ಇಡಿ. ಅವರ್ಯಾರೋ ರಾಜ್ಕುಮಾರ್ಗೆ ಅಂತ ಮಾಡಿರ್ತಾರೆ, ಅದನ್ನು ತೆಗಿಬೇಕು. ಸ್ಟ್ಯಾಚ್ಯುಗೆಲ್ಲಾ ಕವರ್ ಮಾಡಿ ಮನೆಯಲ್ಲಿ ಇಟ್ಟಿದ್ರೆ ಆಗಿರ್ತಿತ್ತು, ರೋಡಲ್ಲಿ ಯಾಕೆ ಇಡುತ್ತಾರೆ ಅಲ್ವಾ? ಅದನ್ನ ಯಾರ್ ಕೇಳಿರುವವರು? ಬುದ್ದಿ ಇಲ್ಲ. ಏನ್ ಮಾಡೋದು? ಏನಾದ್ರು ಹೇಳಿದ್ರೆ ಬೇರೆ ರೀತಿಯಲ್ಲಿ ತೆಗೆದುಕೊಳ್ಳುತ್ತಾರೆ. ನಾನು ಅವಾಗ್ಲೂ ಹೇಳಿದೆ ಬೇಡಪ್ಪ ಅಂತ. ಅವಾಗ ಸ್ವಲ್ಪ ಕಲೆಕ್ಷನ್ ಮಾಡಿದ್ರು. ರಾಜ್ಕುಮಾರ್ ರೇ ಇದ್ದಾರೆ, ಬೋರ್ಡ್ ಏನಕ್ಕೆ?' ಎಂದು ಹ್ಯಾರಿಸ್ ಮಾತನಾಡಿರುವ ವಿಡಿಯೋ ವೈರಲ್ ಆಗಿದೆ.
ಫೇಸ್ಬುಕ್ ಲೈವ್ನಲ್ಲಿ ಮಾತನಾಡಿದ ಹ್ಯಾರಿಸ್, 'ನಾನು ಡಾ.ರಾಜ್ ಕುಮಾರ್ ವಿರುದ್ಧ ಯಾವುದೇ ಹೇಳಿಕೆ ನೀಡಿಲ್ಲ. ಒಂದು ವೇಳೆ ಯಾರಿಗಾದರೂ ಬೇಜಾರ್ ಆಗಿದ್ರೆ ಕ್ಷಮೆ ಕೇಳುತ್ತೇನೆ. ದಯವಿಟ್ಟು ಇದನ್ನ ಇಲ್ಲಿಗೆ ಬಿಟ್ಟುಬಿಡಿ' ಎಂದು ಮನವಿ ಮಾಡಿದ್ದಾರೆ.
ವಿಡಿಯೋ ಎಡಿಟ್ ಮಾಡಿದ್ದಾರೆ ಎಂದಿರುವ ಹ್ಯಾರಿಸ್ರ ಮಾತಿನ ಸತ್ಯಾಸತ್ಯತೆ ಬಯಲಾಗಿಬೇಕಿದೆ. ವಿವಾದಿಂದ ಹೊರಬರಲು ವಿಡಿಯೋ ಎಡಿಟ್ ಎಂಬ ಅಸ್ತ್ರ ಪ್ರಯೋಗಿಸಿದರೇ? ಅಥವಾ ನಿಜಕ್ಕೂ ವಿಡಿಯೋ ಎಡಿಟ್ ಆಗಿದೆಯೋ ಬಳಿಕ ತಿಳಿಯಲಿದೆ.
ಬೆಂಗಳೂರಿನ ಮಾಗಡಿ ರಸ್ತೆಯ ಟೋಲ್ಗೇಟ್ ಸಮೀಪ ಇತ್ತೀಚಿಗಷ್ಟೇ ಸಾಹಸಸಿಂಹ ಡಾ.ವಿಷ್ಣುವರ್ಧನ್ರ ಪ್ರತಿಮೆಯನ್ನು ಕಿಡಿಗೇಡಿಗಳು ಹಾನಿ ಮಾಡಿದ್ದರು. ಈ ಕಹಿ ಘಟನೆ ಮಾಸುವ ಮುನ್ನವೇ ಕನ್ನಡದ ಮೇರುನಟನ ಬಗ್ಗೆ ಅವಹೇಳನಕಾರಿ ಮಾತು ಕೇಳಿಬಂದಿರುವುದು ಅಭಿಮಾನಿಗಳ ಕೋಪಕ್ಕೆ ಗುರಿಯಾಗಿದೆ.