

ರಾಣೆಬೆನ್ನೂರ: ಕೆಎಲ್ಇ ಸಂಸ್ಥೆಯ ಕಾರ್ಯಾಧ್ಯಕ್ಷ ಡಾ. ಪ್ರಭಾಕರ ಕೋರೆಯವರು ಸಮಾಜಮುಖಿ ಕಾರ್ಯ, ಉತ್ತಮ ಶಿಕ್ಷಣ ಉತ್ತಮ ಆರೋಗ್ಯ ಇವೆರಡರ ವಿಚಾರವಾಗಿ ಸರ್ವತೋಮುಖ ಅಭಿವೃದ್ಧಿಗೆ ಹಗಲಿರುಳು ಶ್ರಮಿಸುತ್ತಿರುವುದು ಶ್ಲಾನೀಯ ಎಂದು ಸಂಸ್ಥೆಯ ಸ್ಥಾನಿಕ ಆಡಳಿತ ಮಂಡಳಿ ಉಪಾಧ್ಯಕ್ಷ ವಿ.ಪಿ. ಲಿಂಗನಗೌಡ್ರ ಹೇಳಿದರು.
ಕೆಎಲ್ಇ ಸಂಸ್ಥೆಯ ಕಾರ್ಯಾಧ್ಯಕ್ಷ ಡಾ. ಪ್ರಭಾಕರ ಕೋರೆಯವರ 78ನೇ ಜನ್ಮದಿನಾಚರಣೆ ನಿಮಿತ್ತ ನಗರದ ತಾಲೂಕು ಸರ್ಕಾರಿ ಆಸ್ಪತ್ರೆಯ ರೋಗಿಗಳಿಗೆ ಹಣ್ಣು&ಹಂಪಲ ವಿತರಣೆ, ಸ್ನೇಹದೀಪ ಅಂಧ ಅಂಗವಿಕಲ ಮಕ್ಕಳಿಗೆ ಊಟ ವಿತರಣೆ ಸೇರಿ ವಿವಿಧ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಪ್ರಮುಖರಾದ ಜಿ.ಜಿ. ಹೊಟ್ಟಿಗೌಡರ, ಈರಣ್ಣ ಅಂಗಡಿ, ಬಸವರಾಜಪ್ಪ ಪಟ್ಟಣಶೆಟ್ಟಿ, ಸುಜಿತ್ ಜಂಬಿಗಿ, ಉಮೇಶ ಗುಂಡಗಟ್ಟಿ, ಉಮೇಶ ಹೊನ್ನಳ್ಳಿ, ಚಂದ್ರಶೇಖರ ತಿಳುವಳ್ಳಿ, ಪ್ರಭಾಕರ ಕೋರೆ ಬ್ಯಾಂಕ್ನ ಸಿಬ್ಬಂದಿ, ರಾಜೇಶ್ವರಿ ಶಾಲೆಯ ಎಲ್ಲ ಶಿಕ್ಷಕ&ಶಿಕ್ಷಕಿಯರು ಉಪಸ್ಥಿತರಿದ್ದರು.